SSLC ಮೊದಲ ಪರೀಕ್ಷೆಗೆ ಶೇ 98.3 ಹಾಜರಾತಿ; ಮಕ್ಕಳ ಸುರಕ್ಷತೆ ಬಗ್ಗೆ ಭಯ ಬೇಡ: ಸಚಿವ ಸುರೇಶ್ ಕುಮಾರ್

SSLCಯ ಮೊದಲ ಪರೀಕ್ಷೆಗೆ 7,85,140 ವಿದ್ಯಾರ್ಥಿಗಳ ಪೈಕಿ 7,71,878 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 13,212 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಇಂದಿನ ಪರೀಕ್ಷೆಯ ಹಾಜರಾತಿ ಪ್ರಮಾಣ 98.3 % ಇದೆ ಎಂದು ಶಿಕ್ಷಣ ಸಚಿವರು ಹೇಳಿದ್ಧಾರೆ.

ಸುರೇಶ್ ಕುಮಾರ್

ಸುರೇಶ್ ಕುಮಾರ್

  • Share this:
ಬೆಂಗಳೂರು(ಜೂನ್ 25): ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಆತಂಕದಲ್ಲಿ ಆರಂಭವಾದ ಎಸ್​ಎಸ್​ಎಲ್​ಸಿಯ ಮೊದಲ ಪರೀಕ್ಷೆಗೆ ಶೇ. 98.3 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇದು ಸರ್ಕಾರಕ್ಕೆ ಇನ್ನಷ್ಟು ಧೈರ್ಯ ತುಂಬಿದೆ. ಕಂಟೈನ್ ಮೆಂಟ್ ಪ್ರದೇಶದಲ್ಲಿಯ ಮಕ್ಕಳು ಸಹ ಪರೀಕ್ಷೆ ಬರೆದಿದ್ದು, 13 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್​ನಿಂದಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಉಳಿದಂತೆ ನೆರೆರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪರೀಕ್ಷೆ ಬರೆದಿದ್ಧಾರೆ. ಕರ್ನಾಟಕದ ಮಕ್ಕಳು ಗೋವಾದಲ್ಲಿ ಪರೀಕ್ಷೆ ಬರೆದಿದ್ದು ಮತ್ತೊಂದು ವಿಶೇಷ.

ಬೆಂಗಳೂರಿನಲ್ಲಿ 12 ಪರೀಕ್ಷಾ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಹಲವು ಮಾಹಿತಿ ನೀಡಿದರು.

SSLC ಮೊದಲ ಪರೀಕ್ಷೆ ಮುಗಿದಿದೆ. ವಿಶ್ವಾಸ, ಸ್ಪೂರ್ತಿ ಕೊಡುವ ವರದಿ ಬಂದಿದೆ. ರಾಜ್ಯದಲ್ಲಿ 2,879 ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿ ಪರೀಕ್ಷೆ ಜರುಗಿದೆ.‌ ಮೊದಲ ಪರೀಕ್ಷೆ ಇಂಗ್ಲಿಷ್ / ಕನ್ನಡ ವಿಷಯಕ್ಕೆ 7,85,140 ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಆದರೆ ಇಂದು ಪರೀಕ್ಷೆಗೆ 7,71,878 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 13,212 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಇಂದಿನ ಪರೀಕ್ಷೆಯ ಹಾಜರಾತಿ ಪ್ರಮಾಣ 98.3 % ಇದೆ. 7,43,688 ಮೊದಲ ಬಾರಿಗೆ ಪರೀಕ್ಷೆ ಬರೆದಿದ್ದು, 20,892 ಖಾಸಗಿ ವ್ಯಕ್ತಿಗಳು ಪರೀಕ್ಷೆ ಬರೆದಿದ್ದಾರೆ. ಕಳೆದ ವರುಷ 7,87,493 ವಿದ್ಯಾರ್ಥಿಗಳು ಹಾಜರಾಗಬೇಕಾಗಿತ್ತು. ಹಾಜರಾತಿ ಸಂಖ್ಯೆ 7,77,556 ಇತ್ತು. ಶೆ.98.7 ಹಾಜರಾತಿ ಇದೆ. ಈ ವರುಷ ಹಾಜರಾತಿ ಮೊದಲ‌ ಪರೀಕ್ಷೆಗೆ ಶೇ. 98.3 ಇದೆ ಎಂದು ಶಿಕ್ಷಣ ಸಚಿವರು ವಿವರ ನೀಡಿದರು.

ಈ ಪರೀಕ್ಷೆಗೆ ಗೈರುಹಾಜರಾದವರ ಮಾಹಿತಿಯನ್ನು ಅಧಿಕಾರಿಗಳು ಪಡೆಯಲಿದ್ದಾರೆ. ಯಾರು ಅನಿವಾರ್ಯ ಮತ್ತು ಸಂಕಷ್ಟದಲ್ಲಿ ಪರೀಕ್ಷೆಯಲ್ಲಿ ಬರೆಯಲಾಗಿಲ್ಲವೋ ಅವರಿಗೆ ಮುಂದಿನ ಪರೀಕ್ಷೆ ಮೊದಲ ಬಾರಿ ಬರೆದ ರೀತಿ ನೋಡಿಕೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಭರವಸೆ ನೀಡಿದರು.

ಇದನ್ನೂ ಓದಿ: SSLC ಪರೀಕ್ಷೆ: ಮೊದಲ ದಿನ 10 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ತೃಪ್ತಿ ವ್ಯಕ್ತಪಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಒಟ್ಟು ರಾಜ್ಯದಲ್ಲಿ 3,212 ಬಸ್ ಹಾಗೂ ಇತರೆ ವಾಹನದ ಬಳಕೆಯಾಗಿದೆ. ಕಂಟೋನ್ಮೆಂಟ್ ಪ್ರದೇಶದಿಂದ 998 ವಿದ್ಯಾರ್ಥಿಗಳು ಬಂದು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ರಾಜ್ಯಾದಾದ್ಯಂತ ತಾಪಮಾನ ತಪಾಸಣೆ ವೇಳೆ 201 ವಿದ್ಯಾರ್ಥಿಗಳು ಹೆಚ್ಚಿನ ತಾಪಮಾನ ಕಂಡುಬಂದಿದ್ದು ಅವರು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಸಮಾಧಾನದ ಸಂಗತಿಯೆಂದರೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಪ್ರಕರಣ ಕಂಡುಬಂದಿಲ್ಲ. 1,438 ವಸತಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ ಬಂದು 614 ವಿದ್ಯಾರ್ಥಿಗಳು ಬರೆಯಬೇಕಾಗಿತ್ತು. 555 ಮಕ್ಕಳು ನೆರೆ ರಾಜ್ಯದಿಂದ‌ ಬಂದು ಪರೀಕ್ಷೆ ಬರೆದಿದ್ದಾರೆ. 59 ನೆರೆರಾಜ್ಯದ ಮಕ್ಕಳು ಗೈರಾಗಿದ್ದಾರೆ. ಇನ್ನು 12,644 ವಲಸೆ ಕಾರ್ಮಿಕರ‌ ಮಕ್ಕಳು ಪರೀಕ್ಷೆಗೆ ನೋಂದಾವಣೆ ಮಾಡಿಸಿದ್ದರು. ಇದರಲ್ಲಿ 12,548 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 96 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಇವರ ಮಾಹಿತಿ ಪಡೆದು ಮುಂದಿನ ಪೂರಕ‌ ಪರೀಕ್ಷೆಯಲ್ಲಿ ಬರೆಯುವ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.



ಪರೀಕ್ಷೆಗೆ ಹಾಜರಾದ ಮಕ್ಕಳಿಗೆ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದೇವೆ ಎಂಬ ಭಾವನೆ ಬಂದಿದೆ. ಉಳಿದ ಪರೀಕ್ಷೆಗಳಲ್ಲೂ ನಿರಾಂತಕವಾಗಿ ಬರೆಯಿರಿ. ನಿಮ್ಮ ಮನೆಯಲ್ಲಿ ಹೇಗೆ ಸುರಕ್ಷಿತವಾಗಿರುತ್ತೀರೋ ಅದೇ ರೀತಿ ಪರೀಕ್ಷಾ ಕೇಂದ್ರಗಳು ಸುರಕ್ಷಿತವಾಗಿವೆ ಎಂದು ಶಿಕ್ಷಣ ಸಚಿವರು ಮಕ್ಕಳಿಗೆ ಮತ್ತು ಪೋಷಕರಿಗೆ ವಿಶ್ವಾಸ ತುಂಬಲು ಯತ್ನಿಸಿದರು.
First published: