ಲಾಕ್​​ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ

ಮಾರ್ಚ್ 22ರಂದು ಕೇಂದ್ರ ಸರ್ಕಾರ ಮೊದಲ ಬಾರಿ ಲಾಕ್ ಡೌನ್ ಘೋಷಣೆ ಮಾಡಿದಾಗ ವಿವಿಧ ಪರೀಕ್ಷೆಗಳು ಚಾಲನೆಯಲ್ಲಿದ್ದವು. ಇದ್ದಕ್ಕಿದ್ದಂತೆ ಎಲ್ಲವೂ ಸ್ಥಗಿತಗೊಂಡಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಏ. 14): ಕೇಂದ್ರ ಸರ್ಕಾರ ಮೇ 3ರವರೆಗೆ ದೇಶವ್ಯಾಪಿ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಪರೀಕ್ಷೆ ನಡೆಯದೆ ಅನಿಶ್ಚಿತತೆಯಿಂದ ಒದ್ದಾಡುತ್ತಿರುವ ದ್ವಿತೀಯ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇನ್ನಷ್ಟು ದಿನ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ. ಮೇ 3ರ ನಂತರವೇ ಪರೀಕ್ಷೆ ನಡೆಯುವ ನಿರೀಕ್ಷೆ ಇದೆ.

  ಮಾರ್ಚ್ 22ರಂದು ಕೇಂದ್ರ ಸರ್ಕಾರ ಮೊದಲ ಬಾರಿ ಲಾಕ್ ಡೌನ್ ಘೋಷಣೆ ಮಾಡಿದಾಗ ವಿವಿಧ ಪರೀಕ್ಷೆಗಳು ಚಾಲನೆಯಲ್ಲಿದ್ದವು. ಇದ್ದಕ್ಕಿದ್ದಂತೆ ಎಲ್ಲವೂ ಸ್ಥಗಿತಗೊಂಡಿತ್ತು. ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಬಾಕಿ ಉಳಿದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳೂ ನಡೆಯಬೇಕಿವೆ. ಲಾಕ್ ಡೌನ್ ನಂತರ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪರೀಕ್ಷೆಯ ದಿನಾಂಕ ನಿಗದಿಪಡಿಸುವುದಾಗಿ ಮೊನ್ನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು.

  ಇದನ್ನೂ ಓದಿ: ಕೊರೋನಾ ಪರಿಸ್ಥಿತಿ ತಿಳಿ ಆದಮೇಲೆ ಎಸ್ಸೆಸ್ಸೆಲ್ಸಿ, ಪಿಯು ಇಂಗ್ಲಿಷ್ ಪರೀಕ್ಷೆ ದಿನಾಂಕ ನಿಗದಿ; ಸಚಿವ ಸುರೇಶ್ ಕುಮಾರ್

  ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ ಇರಲಿದೆ ಎಂದು ಹೇಳಿದ್ಧಾರೆ. ಮೊದಲ ವಾರ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿ ಮಾಡಲಾಗುವುದು. ಪರಿಸ್ಥಿತಿ ತಿಳಿ ಎಂದನಿಸಿದರೆ ಏ. 20ರ ನಂತರ ಲಾಕ್​ಡೌನ್​ನಲ್ಲಿ ಒಂದಷ್ಟು ಸಡಿಲಿಕೆ ಮಾಡಲಾಗುವುದು ಎಂದಿದ್ದಾರೆ. ಆ ಸಂದರ್ಭದಲ್ಲಿ ಕೆಲ ಕಟ್ಟುಪಾಡುಗಳೊಂದಿಗೆ ಪರೀಕ್ಷೆಗೆ ಅನುವು ಮಾಡಿಕೊಡುತ್ತಾರಾ ಎಂಬುದು ಸ್ಪಷ್ಟವಿಲ್ಲ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಗುಂಪುಗಳಲ್ಲಿ ಬರುವುದರಿಂದ ಬಹಳ ಅಪಾಯಕಾರಿಯಾಗಬಹುದು. ಈ ಹಿನ್ನೆಲೆಯಲ್ಲಿ ಮೇ 3ರವರೆಗೆ ಪರೀಕ್ಷೆ ನಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

  ಇನ್ನು, ವಿವಿಧ ಶಾಲಾ ಕಾಲೇಜುಗಳಿಗೆ ಆನ್​ಲೈನ್​ನಲ್ಲೇ ಶಿಕ್ಷಣ ನೀಡುವಂತೆ ಸೂಚಿಸಲಾಗಿದೆ. ಕೆಲ ಕಾಲೇಜುಗಳಲ್ಲಿ ಈ ಪ್ರಕ್ರಿಯೆ ಶುರುವಾಗಿದೆ. ಆದರೆ ಇಂಟರ್ನೆಟ್, ಟ್ಯಾಬ್ ಇತ್ಯಾದಿ ತಾಂತ್ರಿಕ ತೊಂದರೆಗಳು ತೊಡಕಾಗಿ ನಿಂತಿವೆ.

  First published: