ಕರ್ನಾಟಕ ರಾಜ್ಯಾದ್ಯಂತ ಅರ್ಧ ದಿನದಲ್ಲಿ 63 ಹೊಸ ಕೇಸ್; ಹಾಸನದಲ್ಲಿ ಅತ್ಯಧಿಕ; ಒಟ್ಟು ಪ್ರಕರಣ 1,458ಕ್ಕೇರಿಕೆ

Karnataka Coronavirus Cases: ಹಾಸನ 21, ಬೀದರ್ 10, ಮಂಡ್ಯ 8, ಕಲಬುರ್ಗಿ 7, ಉಡುಪಿ 6, ತುಮಕೂರು 4, ಬೆಂಗಳೂರು 4, ಉತ್ತರ ಕನ್ನಡ 1, ದಕ್ಷಿಣ ಕನ್ನಡ 1 ಮತ್ತು ಯಾದಗಿರಿಯಲ್ಲಿ 1 ಪ್ರಕರಣಗಳು ಇವತ್ತು ಬೆಳಕಿಗೆ ಬಂದಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಮೇ 20): ನಿನ್ನೆ ಸಂಜೆ 5ಗಂಟೆಯಿಂದ ಇಲ್ಲಿಯವರೆಗೆ 63 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ನಿನ್ನೆಗೆ ಹೋಲಿಸಿದರೆ ಪ್ರಕರಣಗಳ ಪ್ರಮಾಣ ತುಸು ಕಡಿಮೆ ಇದ್ದರೂ ಆತಂಕ ಮಾತ್ರ ಕಡಿಮೆ ಆಗಿಲ್ಲ. ಇಲ್ಲಿಯವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,458ಕ್ಕೆ ಏರಿದೆ. ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 40ಕ್ಕೆ ಹೆಚ್ಚಾಗಿದೆ. ಆದರೆ ಕೊರೋನಾ ಕಾರಣದಿಂದ ಸಾವು ಸಂಭವಿಸಿಲ್ಲ ಎಂಬ ಮಾಹಿತಿ ಇದೆ.

ಕಳೆದ 12 ಗಂಟೆಯಲ್ಲಿ ಒಟ್ಟು 10 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ಧಾರೆ. ಒಟ್ಟಾರೆ ಡಿಸ್​ಚಾರ್ಜ್ ಆದವರ ಪ್ರಮಾಣ 553 ತಲುಪಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 864 ಇದೆ.

ಇವತ್ತು ಬೆಳಕಿಗೆ ಬಂದಿರುವ 63 ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆ ಹಾಸನದ್ದೇ ಇದೆ. ಇಡೀ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಾಡುತ್ತಿದ್ದರೂ ಯಾವುದೇ ಸೋಂಕಿಲ್ಲದೆ ನೆಮ್ಮದಿಯಿಂದ ಇದ್ದ ಹಾಸನಕ್ಕೆ ಮಹಾ ಕಂಟಕ ವಕ್ಕರಿಸಿದೆ. ಇವತ್ತು ಬರೋಬ್ಬರಿ 21 ವ್ಯಕ್ತಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಕೆಲವೆ ದಿನಗಳಲ್ಲಿ 53ಕ್ಕೆ ಏರಿದಂತಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕಾಂಗ್ರೆಸ್ ಪ್ರತಿಭಟನೆ; ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಗುಡುಗು

ಹಾಸನ 21, ಬೀದರ್ 10, ಮಂಡ್ಯ 8, ಕಲಬುರ್ಗಿ 7, ಉಡುಪಿ 6, ತುಮಕೂರು 4, ಬೆಂಗಳೂರು 4, ಉತ್ತರ ಕನ್ನಡ 1, ದಕ್ಷಿಣ ಕನ್ನಡ 1 ಮತ್ತು ಯಾದಗಿರಿಯಲ್ಲಿ 1 ಪ್ರಕರಣಗಳು ಇವತ್ತು ಬೆಳಕಿಗೆ ಬಂದಿವೆ.

ಆ್ಯಕ್ಟಿವ್ ಕೇಸ್​ಗಳಲ್ಲಿ ಮಂಡ್ಯ ಜಿಲ್ಲೆಯೇ ಮುಂಚೂಣಿಯಲ್ಲಿದೆ. ಬೆಂಗಳೂರನ್ನೂ ಹಿಂದಿಕ್ಕಿರುವ ಮಂಡ್ಯದಲ್ಲಿ 147 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಲ್ಲಿ 117 ಇದೆ. ದಾವಣಗೆರೆಯಲ್ಲಿ ಶತಕ ಭಾರಿಸಲು 1 ಕಡಿಮೆ ಇದೆ. ಕಲಬುರ್ಗಿ, ಬೆಳಗಾವಿ ಮತ್ತು ಹಾಸನದಲ್ಲಿ 50ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

First published: