HOME » NEWS » Coronavirus-latest-news » KARNATAKA REPORTS 50112 NEW CASES 346 DEATHS IN SINGLE DAY KVD

ಕರ್ನಾಟಕದಲ್ಲಿ ಒಂದೇ ದಿನ ಅರ್ಧ ಲಕ್ಷ ಮಂದಿಗೆ ಸೋಂಕು.. ಮತ್ತಷ್ಟು ಬಿಗಡಾಯಿಸಿತು ಪರಿಸ್ಥಿತಿ!

ಬೆಂಗಳೂರಿನಲ್ಲಿ ಇಂದು 23,106 ಕೇಸ್ ಪತ್ತೆಯಾಗಿದ್ದು, ಬರೋಬ್ಬರಿ 161 ಮಂದಿ ಸಾವನ್ನಪ್ಪಿದ್ದಾರೆ.

Kavya V | news18-kannada
Updated:May 5, 2021, 8:22 PM IST
ಕರ್ನಾಟಕದಲ್ಲಿ ಒಂದೇ ದಿನ ಅರ್ಧ ಲಕ್ಷ ಮಂದಿಗೆ ಸೋಂಕು.. ಮತ್ತಷ್ಟು ಬಿಗಡಾಯಿಸಿತು ಪರಿಸ್ಥಿತಿ!
ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಇಂದು ವಿರಾಟ ರೂಪ ತಾಳಿದೆ. ತನ್ನದೇ ದಾಖಲೆಯನ್ನು ಮುರಿದು ಕೊರೋನಾ ಹೊಸ ದಾಖಲೆ ಸೃಷ್ಟಿಸಿದೆ. ಮೊದಲ ಬಾರಿಗೆ ರಾಜ್ಯದಲ್ಲಿ ಅರ್ಧ ಲಕ್ಷ ಮಂದಿ 24 ಗಂಟೆಗಳ ಅವಧಿಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ಇಂದು ಒಂದೇ ದಿನ ರಾಜ್ಯಾದ್ಯಂತ 50,112 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 17,41,053ಕ್ಕೆ ಏರಿಕೆಯಾಗಿದೆ. ಇದರಲ್ಲಿ 4,87,288 ಸಕ್ರಿಯ ಪ್ರಕರಣಗಳಿವೆ. ಇನ್ನು ಸಾವಿನ ಸಂಖ್ಯೆಯೂ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ.24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ 346 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈವರೆಗೆ ಸೋಂಕಿನಿಂದ 16,884 ಮಂದಿ ಸಾವನ್ನಪ್ಪಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲೂ ಕೊರೋನಾ ಆರ್ಭಟ ಕೊಂಚವೂ ತಗ್ಗಿಲ್ಲ. ಇಂದು  23,106 ಪಾಸಿಟಿವ್​ ಪ್ರಕರಣಗಳು 8,63,380ಕ್ಕೆ ಏರಿಕೆಯಾಗಿದೆ. ಇನ್ನು 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 161 ಮಂದಿ ಕೊರೋನಾದಿಂದ ಪ್ರಾಣ ಬಿಟ್ಟಿದ್ದಾರೆ.  11,343 ಗುಣಮುಖರಾಗಿದ್ದು, ಸದ್ಯ ರಾಜ್ಯಾದ್ಯಂತ 3,13,314 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳಲ್ಲಿ ಕೊರೋನಾ ಮರಣ ಮೃದಂಗ ಹೆಚ್ಚಾಗಿದೆ. ಬಳ್ಳಾರಿ,  ಮಂಡ್ಯದಲ್ಲಿ ಒಂದೇ ದಿನ ತಲಾ 19 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 15 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.  ತುಮಕೂರಿನಲ್ಲಿ 12 ಮಂದಿ, ಹಾಸನದಲ್ಲಿ 11 ಮಂದಿ, ಮೈಸೂರಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರು ನಂತರದ ಸ್ಥಾನದಲ್ಲಿ ಮೈಸೂರಿದ್ದು, ಒಂದೇ ದಿನ 2790 ಪಾಸಿಟಿವ್​ ಕೇಸ್​ಗಳು ದಾಖಲಾಗಿವೆ. ತುಮಕೂರಲ್ಲಿ 2335,  ಉಡುಪಿಯಲ್ಲಿ 1655 ,  ಬೆಂಗಳೂರು ಗ್ರಾಮಾಂತರದಲ್ಲಿ 1033 ,  ಚಿಕ್ಕಮಗಳೂರಿನಲ್ಲಿ 1009,  ದಕ್ಷಿಣ ಕನ್ನಡದಲ್ಲಿ 1529 , ಧಾರವಾಡದಲ್ಲಿ 1030 , ಹಾಸನದಲ್ಲಿ 1604 , ಕಲಬುರಗಿಯಲ್ಲಿ 1097, ಕೋಲಾರದಲ್ಲಿ 1115,  ಮಂಡ್ಯದಲ್ಲಿ 1621 ಪಾಸಿಟಿವ್​ ಕೇಸ್​ಗಳು ದಾಖಲಾಗಿವೆ. ಉಳಿದ ಜಿಲ್ಲೆಗಳಲ್ಲಿ ಸಾವಿರಕ್ಕೂ ಕಡಿಮೆ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ.
Published by: Kavya V
First published: May 5, 2021, 8:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories