ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಇಂದು 9 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 110ಕ್ಕೇರಿಕೆ

ಇನ್ನು, 105 ಪ್ರಕರಣಗಳ ಪೈಕಿ ಬೆಂಗಳೂರು- 46, ಮೈಸೂರು- 17, ಚಿಕ್ಕಬಳ್ಳಾಪುರ- 9, ದಕ್ಷಿಣ ಕನ್ನಡ- 8, ಉತ್ತರ ಕನ್ನಡ- 8, ಕಲಬುರಗಿ- 4, ದಾವಣಗೆರೆ- 3, ಉಡುಪಿ- 3, ಕೊಡಗು- 1, ಧಾರವಾಡ- 1, ತುಮಕೂರರಿನಲ್ಲಿ ಇಬ್ಬರಿಗೆ ಸೋಂಕು ಬಂದಿದೆ. ಇದರಲ್ಲಿ 8 ರೋಗಿಗಳು ಆಸ್ಪತ್ರೆಯಿಂದ‌ ಡಿಸ್ಚಾರ್ಜ್ ಆಗಿದ್ದಾರೆ.

news18-kannada
Updated:April 1, 2020, 8:09 PM IST
ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಇಂದು 9 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 110ಕ್ಕೇರಿಕೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಏ.01): ರಾಜ್ಯದಲ್ಲಿ ಮಾರಕ ಕೊರೋನಾ ಹಾವಳಿ ಮುಂದುವರೆದ ಪರಿಣಾಮ ಇಂದು 4 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 105ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಇನ್ನು, ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಬೆಂಗಳೂರು- 48, ಮೈಸೂರು- 19, ಚಿಕ್ಕಬಳ್ಳಾಪುರ- 9, ದಕ್ಷಿಣ ಕನ್ನಡ- 9, ಉತ್ತರ ಕನ್ನಡ- 8, ಕಲಬುರಗಿ- 4, ದಾವಣಗೆರೆ- 3, ಉಡುಪಿ- 3, ಕೊಡಗು- 1, ಧಾರವಾಡ- 1, ತುಮಕೂರಿನಲ್ಲಿ ಇಬ್ಬರಿಗೆ ಸೋಂಕು ಬಂದಿದೆ. ಇದರಲ್ಲಿ 8 ರೋಗಿಗಳು ಆಸ್ಪತ್ರೆಯಿಂದ‌ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಪತ್ತೆಯಾದ ಕೇಸುಗಳ ವಿವರ ಹೀಗಿದೆ..

P1
- 24 ವರ್ಷದ ಪುರುಷ, ಬೆಂಗಳೂರಿನ ನಿವಾಸಿ
- ವಿವರವಾದ ತನಿಖೆಯು ಪ್ರಗತಿಯಲ್ಲಿರುತ್ತದೆ
- ‎ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆP2
- 37 ವರ್ಷದ ಪುರುಷ, ನಂಜನಗೂಡು, ಮೈಸೂರು ಜಿಲ್ಲೆಯ ನಿವಾಸಿ
- ಪ್ರಾಥಮಿಕ ತನಿಖೆಗಳ ಪ್ರಕಾರ ಈ ವ್ಯಕ್ತಿಯು P52 ಕೆಲಸ ನಿರ್ವಹಿಸುತ್ತಿದ್ದ ಔಷಧಿ ತಯಾರಿಕೆ ಕಂಪನಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ
- ಮೈಸೂರು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

P3
- 27 ವರ್ಷದ ಪುರುಷ, ನಂಜನಗೂಡು, ಮೈಸೂರು ಜಿಲ್ಲೆಯ ನಿವಾಸಿ
- ಪ್ರಾಥಮಿಕ ತನಿಖೆಗಳ ಪ್ರಕಾರ ಈ ವ್ಯಕ್ತಿಯು P52 ಕೆಲಸ ನಿರ್ವಹಿಸುತ್ತಿದ್ದ ಔಷಧಿ ತಯಾರಿಕೆ ಕಂಪನಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ

P4
- 33 ವರ್ಷದ ಪುರುಷ, ಬೆಂಗಳೂರು ನಿವಾಸಿ
- P103 ಸಂಪರ್ಕಿತ
- ಮೈಸೂರು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ 112 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 120ಕ್ಕೇರಿಕೆ - ಸಿಎಂ ಕೇಜ್ರಿವಾಲ್​​​

ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಎಂದಿನಂತೆಯೇ ಮುಂದುವರೆದಿದೆ. ಇಂದು ಮಹಾರಾಷ್ಟ್ರದಲ್ಲಿ ಮತ್ತೋರ್ವ ವ್ಯಕ್ತಿ ಸೋಂಕಿಗೆ ಬಲಿಯಾದ ಕಾರಣ ಮೃತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಸುಮಾರು 242 ಮಂದಿಗೆ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಕೊರೋನಾ ಪೀಡಿತರ ಸಂಖ್ಯೆ 1,637ಕ್ಕೆ ಏರಿಕೆಯಾಗಿದೆ. ಈ ಪೈಕಿ 133 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading