ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದ್ದು, ಸರ್ವಕಾಲಿಕ ದಾಖಲೆ ಬರೆದಿದೆ. ಒಂದೇ ದಿನ ಬರೋಬ್ಬರಿ 50 ಸಾವಿರ ಸಮೀಪ ಪಾಸಿಟಿವ್ ಕೇಸ್ಗಳ ಸಂಖ್ಯೆ ತಲುಪಿದೆ. ಇಂದು ಒಂದೇ ದಿನ ರಾಜ್ಯಾದ್ಯಂತ 48,296 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅರ್ಧ ಲಕ್ಷದಷ್ಟು ಜನರ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ರಾಜ್ಯದಲ್ಲಿ ಕೊರೋನಾ ಕೇಸ್ಗಳ ಸಂಖ್ಯೆ 15,23,142ಕ್ಕೆ ಏರಿಕೆ ಆಗಿದೆ. ಇನ್ನು ಇಂದು ಒಂದೇ ದಿನ ಕೊರೋನಾದಿಂದ ರಾಜ್ಯಾದ್ಯಂತ 217 ಮಂದಿ ಮೃತಪಟ್ಟಿದ್ದಾರೆ. ಆಮೂಲಕ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 15,523ಕ್ಕೆ ಏರಿಕೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸೋಂಕು ಸರ್ವವ್ಯಾಪಿಯಾಗಿದ್ದು, ಒಂದೇ ದಿನ 26,756 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇಂದು ಬೆಂಗಳೂರಿನಲ್ಲಿ 93 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ 14,884 ಮಂದಿ ಗುಣಮುಖರಾಗಿದ್ದಾರೆ. ಲಾಕ್ಡೌನ್ ಹೇರಿಕೆಯ ಆಚೆಗೂ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.
ಹಾಸನದಲ್ಲಿ ಇಂದು ಒಂದೇ ದಿನ ಕೊರೋನಾಗೆ 19 ಮಂದಿ ಬಲಿಯಾಗಿದ್ದಾರೆ. ಮೈಸೂರಲ್ಲಿ 13 ಮಂದಿ, ಬಳ್ಳಾರಿಯಲ್ಲಿ 11 ಮಂದಿ ಮೃಪಟ್ಟಿದ್ದಾರೆ. ಬೀದರ್, ಕಲಬುರಗಿ, ಶಿವಮೊಗ್ಗ, ತುಮಕೂರಲ್ಲಿ ತಲಾ 6 ಮಂದಿ ಸಾವನ್ನಪ್ಪಿದ್ದಾರೆ. ಕೊಡಗು, ರಾಮನಗರ, ಉತ್ತರ ಕನ್ನಡದಲ್ಲಿ ತಲಾ ಐವರು ಸೋಂಕಿನಿಂದ ಸಾವಿನ ಮನೆ ಸೇರಿದ್ದಾರೆ. ಬಾಗಲಕೋಟೆ, ವಿಜಯಪುರ, ಕೋಲಾರದಲ್ಲಿ ತಲಾ ಮೂವರು ಕೊರೋನಾಗೆ ಬಲಿಯಾಗಿದ್ದಾರೆ.
ಇನ್ನು ಬೆಂಗಳೂರು ನಂತರದ ಸ್ಥಾನದಲ್ಲಿ ಮೈಸೂರ ಜಿಲ್ಲೆಯಿದ್ದು, 3500 ಪಾಸಿಟಿವ್ ಕೇಸ್ಗಳು ದಾಖಲಾಗಿವೆ. ತುಮಕೂರಲ್ಲಿ 1,801 , ಬಳ್ಳಾರಿಯಲ್ಲಿ 1,282 , ಕಲಬುರಗಿಯಲ್ಲಿ 1,256 , ದಕ್ಷಿಣ ಕನ್ನಡದಲ್ಲಿ 1,205 ಪಾಸಿಟಿವ್ ಕೇಸ್ಗಳು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ