HOME » NEWS » Coronavirus-latest-news » KARNATAKA RECORDS HIGHEST COVID CASE IN ONE DAY 23 THOUSAND TODAY CASES SESR

Karnataka Covid: ಬೆಂಗಳೂರಿನಲ್ಲಿ ಕೊರೋನಾ ಸ್ಪೋಟ; ರಾಜ್ಯದಲ್ಲಿಂದು 23 ಸಾವಿರ ಸೋಂಕು ಪ್ರಕರಣ ದಾಖಲು

ರಾಜಧಾನಿಯಲ್ಲಿಯೇ ಇಂದು  13,640 ಮಂದಿ ಸೋಂಕಿಗೆ ತುತ್ತಾಗಿದ್ದು, 70 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

news18-kannada
Updated:April 21, 2021, 8:58 PM IST
Karnataka Covid: ಬೆಂಗಳೂರಿನಲ್ಲಿ ಕೊರೋನಾ ಸ್ಪೋಟ; ರಾಜ್ಯದಲ್ಲಿಂದು 23 ಸಾವಿರ ಸೋಂಕು ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏ. 21): ರಾಜ್ಯದಲ್ಲಿ ಕೊರೋನಾ ಸೋಂಕು ಅಂಕೆ ಮೀರಿದ್ದು, ದಾಖಲೆ ಪ್ರಮಾಣದ ಪ್ರಕರಣಗಳು ಇಂದು ವರದಿಯಾಗಿದೆ. ಕಳೆದ 24 ಗಂಟೆಯೊಳಗೆ ರಾಜ್ಯದಲ್ಲಿ 23,558 ಕೊರೋನಾ ಪ್ರಕರಣ ಪತ್ತೆಯಾಗಿದ್ದು, 116 ಜನ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಕೋವಿಡ್​ ಸೋಂಕು ನಿಯಂತ್ರಣ ಮೀರಿರುವುದು ಸ್ಪಷ್ಟವಾಗಿದೆ. ರಾಜಧಾನಿಯಲ್ಲಿಯೇ ಇಂದು  13,640 ಮಂದಿ ಸೋಂಕಿಗೆ ತುತ್ತಾಗಿದ್ದು, 70 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಒಟ್ಟು 1,76,188 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 13,762 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಹೊರತು ಪಡಿಸಿ ತುಮಕೂರು 1176, ಮೈಸೂರಿನಲ್ಲಿ 975, ಬಳ್ಳಾರಿ 792 ಉಡುಪಿ 471, ಬೆಂಗಳೂರು ಗ್ರಾಮಾಂತರ 544 ಪ್ರಕರಣ ಪತ್ತೆಯಾಗಿದೆ.

ಸಾವಿನ ಸಂಖ್ಯೆಯಲ್ಲೂ ಏರಿಕೆ

ರಾಜಧಾನಿಯಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಚಿತಾಗಾರದ ಮುಂದೆ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಅಂಬ್ಯುಲೆನ್ಸ್​ ಸಾಲುಗಳು ಮುಂದುವರೆದಿದೆ. ಚಿತಾಗಾರದ ಸಿಬ್ಬಂದಿಗಳಿಂದ ಬಿಡುವಿಲ್ಲದೇ ಅಂತ್ಯ  ಕ್ರಿಯೆ ನಡೆಯುತ್ತಿದೆ. ಕೂಡ್ಲು ವಿದ್ಯುತ್ ಚಿತಾಗಾರದಲ್ಲಿ ಒಂದೇ ದಿನ 37 ಮೃತು ದೇಹ ಅಂತ್ಯಕ್ರಿಯೆ ನಡೆಸಲಾಗಿದ್ದು, ಅಂತ್ಯಕ್ರಿಯೆಯಿಂದಾಗಿ ಸಿಬ್ಬಂದಿ ಹೈರಾಣಾಗಿದ್ದಾರೆ. ಈ ಕುರಿತು ಅಳಲು ತೊಡಿಕೊಂಡಿರುವ ಸಿಬ್ಬಂದಿಗಳು ದಿನಾ ಹೀಗೆ ಆದ್ರೆ ಹೇಗೆ ಸರ್ ಏನಾದ್ರು ವ್ಯವಸ್ಥೆ ಮಾಡಿ ಎಂದಿದ್ದಾರೆ.

ಇದನ್ನು ಓದಿ: ರಾಜಧಾನಿಯಲ್ಲಿ ಸೋಂಕಿತರ ಅಂತ್ಯಕ್ರಿಯೆಗೆ ಸರ್ಕಾರ ಗೋಮಾಳದ ಜಮೀನು; ಸ್ಥಳ ಪರಿಶೀಲನೆ ನಡೆಸಿದ ಸಚಿವ ಅಶೋಕ್

ಇನ್ನು ಚಿತಾಗಾರದ ಮುಂದೆ ಆಂಬ್ಯುಲೆನ್ಸ್​ ಸಾಲು ಹೆಚ್ಚಾಗುತ್ತಿರವ ಹಿನ್ನಲೆ ಪರ್ಯಾಯ  ವ್ಯವಸ್ಥೆ ಕಲ್ಪಿಸಿರುವ ಸರ್ಕಾರ  ಗೋಮಳದ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡಿದೆದೆ. ತಾತ್ಕಲಿಕವಾಗಿ ಎರಡು ತಿಂಗಳು ಕಾಲ ಶವ ಸುಡಲು ತಾವರೆಕೆರೆ ಬಳಿ ಕುರುಬರಹಳ್ಳಿ ಮತ್ತು ಕಿತ್ತನಹಳ್ಳಿಗಳಲ್ಲಿ ಎರಡು ಕಡೆ ಪರ್ಯಾಯ ಗೋಮಾಳ ಸ್ಥಳಗಳಲ್ಲಿ  ವ್ಯವಸ್ಥೆ ಮಾಡಲಾಗಿದೆ. ಸ

ಬೆಡ್​ ವ್ಯವಸ್ಥೆ: ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನಲೆ ಬೆಂಗಳೂರಿನ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ 2000 ಬೆಡ್​ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಿ ಕೂಡ ತಮ್ಮ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಐಸಿಯು ಮತ್ತು ಬೆಡ್​ಗಳನ್ನು ಸೋಂಕಿತರಿಗೆ ಕಾಯ್ದಿರಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ್​ ತಿಳಿಸಿದ್ದಾರೆ.
ಇನ್ನು 20 ಬೆಡ್​ಗಿಂತ ಕಡಿಮೆ ಆಸ್ಪತ್ರೆಗಳು ಕೋವಿಡೇತ್ತರ ರೋಗಿಗಳ ಚಿಕಿತ್ಸೆಗೆ ಗಮನಕೊಡುವಲ್ಲಿ ಗಮನಹರಿಸಬೇಕು. ಸೋಂಕಿರತ ಜೊತೆ ಸಾಮಾನ್ಯ ರೋಗಿಗಳ ಆರೋಗ್ಯ ಕೂಡ ಮುಖ್ಯ ಎಂದಿದ್ದಾರೆ.ಇಂದಿನಿಂದ ಬಿಗಿ ಕ್ರಮ

ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವ ಹಿನ್ನಲೆ ಇಂದಿನಿಂದ 14 ದಿನಗಳ ಕಾಲ ಕರ್ಫ್ಯೂ ಹೇರಲಾಗಿದ್ದು, ವಿಕೇಂಡ್​ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದ ಕೋವಿಡ್​ ಸೋಂಕಿನ ಸರಪಳಿ ತುಂಡಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ಫ್ಯೂ ಹಿನ್ನಲೆ ಜನರು ಗುಂಪುಗೂಡುವುದಕ್ಕೆ ನಿಷೇಧಿಸಲಾಗಿದ್ದು, ಸಾಕಷ್ಟು ಮುಂಜಾಗ್ರತೆವಹಿಸುವಂತೆ ಸೂಚಿಸಲಾಗಿದೆ.  ಇಂದಿನಿಂದ ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದಲೇ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ವೀಕೆಂಡ್ ಲಾಕ್​ಡೌನ್​ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
Published by: Seema R
First published: April 21, 2021, 7:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories