ಕೊರೋನಾ ಭೀತಿ: ಮಾ. 31ರವರೆಗೆ ಬಂದ್ ಮುಂದುವರಿಕೆ; ಕಮೀಷನರ್ ಭಾಸ್ಕರ್ ರಾವ್​ ಆದೇಶ

ಮೈಸೂರಿನಲ್ಲಿ ಇಂದು ಸಂಜೆ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್​ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟೂ ಸಂಖ್ಯೆ 20ಕ್ಕೇರಿದೆ. ಈ ಮೂಲಕ ಮೈಸೂರಿನಲ್ಲೂ ಮೊದಲ ಪ್ರಕರಣ ದಾಖಲಾಗಿದೆ.

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

 • Share this:
  ಬೆಂಗಳೂರು(ಮಾ.21): ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಾರ್ಚ್ 31ರವರೆಗೆ ಬಂದ್ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಎಂದಿನಂತೆಯೇ ಸಾರ್ವಜನಿಕ ಸಭೆ, ಸಮಾರಂಭಗಳು, ಅದ್ದೂರಿ ಮದುವೆಗಳು, ಸಿನಿಮಾ ಪ್ರದರ್ಶನ, ಮಾಲ್​​ಗಳು, ಪಬ್ ಮೇಲಿನ ನಿರ್ಬಂಧ ಮಾರ್ಚ್ 31 ರವರೆಗೆ ಮುಂದುವರೆಯಲಿದೆ ಎಂದು ಬೆಂಗಳೂರು ನಗರ ಪೊಲೀಸ್​​ ಆಯುಕ್ತ ಭಾಸ್ಕರ್​​ ರಾವ್​​ ಆದೇಶ ಹೊರಡಿಸಿದ್ದಾರೆ.

  ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಬಗ್ಗೆ ರಾಜ್ಯದಲ್ಲಿ ಆತಂಕ ಹೆಚ್ಚುತ್ತಿರುವ ನಡುವೆಯೇ ಸೋಂಕಿತರ ಸಂಖ್ಯೆಯೂ ಏರಿಕೆ ಆಗುತ್ತಿದೆ. ಇಂದು ರಾಜ್ಯದಲ್ಲಿ ಐದು ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

  ಮೈಸೂರಿನಲ್ಲಿ ಇಂದು ಸಂಜೆ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್​ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟೂ ಸಂಖ್ಯೆ 20ಕ್ಕೇರಿದೆ. ಈ ಮೂಲಕ ಮೈಸೂರಿನಲ್ಲೂ ಮೊದಲ ಪ್ರಕರಣ ದಾಖಲಾಗಿದೆ.

  ಇಂದು ಬೆಳಗ್ಗೆ ಹೊತ್ತಿಗೆ ಕರ್ನಾಟಕದಲ್ಲಿ ಒಟ್ಟೂ 19 ಸೋಂಕಿತರು ಪತ್ತೆಯಾಗಿದ್ದರು. ಈ ಸಂಬಂಧ ಬೆಳಗ್ಗೆ ಟ್ವೀಟ್​ ಮಾಡಿದ್ದ ಆರೋಗ್ಯ ಸಚಿವ ಶ್ರೀರಾಮುಲು, "ಮೆಕ್ಕಾ ಪ್ರವಾಸದಿಂದ ಹಿಂತಿರುಗಿದ್ದ ಚಿಕ್ಕಬಳ್ಳಾಪುರದ ಗೌರಿಬಿದನೂರಿನ 32 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಡಪಟ್ಟಿದೆ," ಎಂದು ಹೇಳಿದ್ದರು. ಇದಾದ ಬೆನ್ನಲೇ ಮತ್ತೊಂದು ಟ್ವೀಟ್​ ಮಾಡಿದ್ದ ಶ್ರೀರಾಮುಲು ಕೊರೋನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ ಆಗಿರುವ ವಿಚಾರವನ್ನು ದೃಢಪಡಿಸಿದ್ದರು.

  !function(e,i,n,s){var t="InfogramEmbeds",d=e.getElementsByTagName("script")[0];if(window[t]&&window[t].initialized)window[t].process&&window[t].process();else if(!e.getElementById(n)){var o=e.createElement("script");o.async=1,o.id=n,o.src="https://e.infogram.com/js/dist/embed-loader-min.js",d.parentNode.insertBefore(o,d)}}(document,0,"infogram-async");
  First published: