Tik Tok - ಮೊಲ ಬೇಟೆಯಾಡಿ ಟಿಕ್ ಟಾಕ್​ನಲ್ಲಿ ಅಟ್ಟಹಾಸ ಮಾಡಿ ಬಂಧಿತರಾದ ಯುವಕರು

ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಕಾನೂನುಗಳನ್ನು ಉಲ್ಲಂಘನೆ ಮಾಡಿರುವುದನ್ನ ಅರಿತ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳನ್ನು ಹಿಡಿದಿದ್ದಾರೆ.

news18-kannada
Updated:May 22, 2020, 1:26 PM IST
Tik Tok - ಮೊಲ ಬೇಟೆಯಾಡಿ ಟಿಕ್ ಟಾಕ್​ನಲ್ಲಿ ಅಟ್ಟಹಾಸ ಮಾಡಿ ಬಂಧಿತರಾದ ಯುವಕರು
ಆರೋಪಿಗಳು
  • Share this:
ರಾಯಚೂರು(ಮೇ.22): ಈಗ ಎಲ್ಲಾ ಕಡೆ  ಟಿಕ್ ಟಾಕ್​ನದ್ದೇ ಸದ್ದು,  ಮೊಲ ಬೇಟೆಯಾಡಿ ಟಿಕ್ ಟಾಕ್ ಮಾಡಿ ಖುಷಿಯಲ್ಲಿ ಮೊಲಗಳ ಚರ್ಮ ಸುಲಿದು ಕೈಯಲ್ಲಿಡಿದು ಡ್ಯಾನ್ಸ್ ಮಾಡುವ ವಿಡಿಯೋಗಳನ್ನೆಲ್ಲ ಟಿಕ್​​ ಟಾಕ್​​ನಲ್ಲಿ ಅಪ್ಲೋಡ್ ಮಾಡಿ ಇಬ್ಬರು ಯುವಕರು ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೆ ಸುಲಭವಾಗಿ ಸಿಕ್ಕಿಕೊಂಡಿದ್ದಾರೆ. ಬಂಧಿತರನ್ನು ತಾಲೂಕಿನ ಚಂದ್ರಬಂಡ ಹೋಬಳಿಯ ಸರ್ಜಾಪುರ ಗ್ರಾಮದ 19 ವರ್ಷದ ಪವನ್ ನಾಯಕ್  ಹಾಗೂ 21 ವರ್ಷದ ಸ್ವಾಮಿ ನಾಯಕ ಎಂದು ಗುರುತಿಸಲಾಗಿದೆ.

ಇವರು ತಮ್ಮ ಸಾಕು ನಾಯಿಗಳೊಂದಿಗೆ ಸರ್ಜಾಪುರ ಗ್ರಾಮದ ಸುತ್ತಲೂ  ಹೊಲ-ಗದ್ದೆಗಳಲ್ಲಿ ಮೆ 19 ರಂದು ನಾಯಿಗಳ ಮೂಲಕ ಮೊಲಗಳನ್ನು ಬೇಟೆಯಾಡಿದ್ದಾರೆ. ಸಾಮಾಜಿಕ ಜಾಲತಾಣವಾದ ಟಿಕ್ ಟಾಕ್​ನಲ್ಲಿ ಬೇಟೆಯಾಡಿದ ಮೊಲಗಳ ಚರ್ಮ ಸುಲಿದು ಕೈಯಲ್ಲಿಡಿದು ಡ್ಯಾನ್ಸ್ ಮಾಡುವ ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದರು.  ಅರಣ್ಯ ಇಲಾಖೆಯ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಕಾನೂನುಗಳನ್ನು ಉಲ್ಲಂಘನೆ ಮಾಡಿರುವುದನ್ನ ಅರಿತ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳನ್ನು ಹಿಡಿದಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಗೌಪ್ಯವಾಗಿ ತಂಡವೊಂದನ್ನು ರಚಿಸಿ ಬಲೆಬೀಸಿದರು. ಉಪವಲಯ ಅರಣ್ಯ ಅಧಿಕಾರಿಗಳಾದ ನೀಲಕಂಠ, ಸಾಲಾರ್ ಹುಸೇನ್, ಅರಣ್ಯ ರಕ್ಷಕರಾದ ಯಲ್ಲಪ್ಪ ಎಮ್, ರಾಘವೇಂದ್ರ, ವಾಹನ ಚಾಲಕ ಅಬ್ದುಲ್ ಬಾಷಾ,  ಇವರನ್ನೊಳಗೊಂಡ ತಂಡ ಸರ್ಜಾಪುರ ಗ್ರಾಮದಲ್ಲಿ ಮೊಲಗಳನ್ನು ಕೊಂದ ವಿಡಿಯೋಗಳನ್ನು ಅಪ್ಲೋಡ್ ಮಾಡಿದ ವ್ಯಕ್ತಿಗಳ ಬಗ್ಗೆ ಗುಪ್ತವಾಗಿ ಮಾಹಿತಿ ಕಲೆ ಹಾಕಿದರು. ಟಿಕ್ ಟಾಕ್ ನಲ್ಲಿ ಕೆಲವೊಂದು ವಿಡಿಯೋಗಳನ್ನು ಪರಿಶೀಲನೆ ಮಾಡಿ ಅದರಲ್ಲಿ ಬರುವ ವಾಹನಗಳ ಸಂಖ್ಯೆ ಮತ್ತು ವ್ಯಕ್ತಿಗಳ ಚಿತ್ರಗಳನ್ನು ಆಧರಿಸಿ  ಮಾಹಿತಿ ಪಡೆದು ಅಪರಾಧ ಮಾಡಿದ ಪವನ್ ಮತ್ತು ಸ್ವಾಮಿ ಎನ್ನುವ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಮೇ 20 ರಂದು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ :  Kalaburagi Cylinder Blast: ಸಿಲಿಂಡರ್ ಸ್ಫೋಟ ; ಓರ್ವ ಸಾವು - ಮೂವರಿಗೆ ಗಂಭೀರ ಗಾಯ

ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸಿದರು. ತಾವು ಮೊಲಗಳನ್ನು ಬೇಟೆಯಾಡಿ ಕೊಂದು ಮಾಂಸವನ್ನು ಹಂಚಿಕೊಳ್ಳುತ್ತಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವುದು ಹಾಗೂ ಸಾಕು ನಾಯಿಗಳಿಂದ ಮೊಲಗಳನ್ನು ಭೇಟಿಯಾಡಿಸಿದ್ದು ನಿಜ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
First published: May 22, 2020, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading