Bengaluru News: ಬೆಂಗಳೂರಿನಲ್ಲಿ ಉತ್ತರ ಭಾರತದ ಕೂಲಿ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ

Bangalore News: ಮೆಟ್ರೋ ಕಾಮಗಾರಿಗಳಲ್ಲಿ ಕೆಲಸ ಮಾಡು್ತಿದ್ದ ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್​ನ 900 ಕೂಲಿ ಕಾರ್ಮಿಕರಲ್ಲಿ ಕೆಲವರು ಬೊಮ್ಮನಹಳ್ಳಿ ಸಿಗ್ನಲ್ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ಧಾರೆ.

news18-kannada
Updated:May 3, 2020, 8:21 PM IST
Bengaluru News: ಬೆಂಗಳೂರಿನಲ್ಲಿ ಉತ್ತರ ಭಾರತದ ಕೂಲಿ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ
ಮೆಟ್ರೋ ಕಾಮಗಾರಿಯಲ್ಲಿರುವ ಕಾರ್ಮಿಕರು
  • Share this:
ಬೆಂಗಳೂರು(ಮೇ 03): ಕೊರೋನಾ ವೈರಸ್ ಸೋಂಕು ಹರಡದಂತೆ ಜನಸಂಚಾರ ಮತ್ತು ವಾಹನ ಸಂಚಾರ ತಡೆಯುತ್ತಿರುವ ಹಾಗೂ ಸಾಮಾಜಿಕ ಅಂತರ ಪಾಲನೆ ಮೊದಲಾದ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು ಹಗಲೂ ರಾತ್ರಿ ಶ್ರಮಿಸುತ್ತಿರುವ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಅಲ್ಲಲ್ಲಿ ಹಲ್ಲೆ, ಅವಮಾನಗಳು ಆಗುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ. ಇದೀಗ ಬೊಮ್ಮನಹಳ್ಳಿಯಲ್ಲಿ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರು ಪೊಲೀಸರ ಮೇಲೆ ಹಲ್ಲೆ ಎಸಗಿರುವುದು ವರದಿಯಾಗಿದೆ.

ಮೆಟ್ರೋ ಕಾಮಗಾರಿಗಳಲ್ಲಿ ಕೆಲಸ ಮಾಡು್ತಿದ್ದ ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್​ನ 900 ಕೂಲಿ ಕಾರ್ಮಿಕರಲ್ಲಿ ಕೆಲವರು ಬೊಮ್ಮನಹಳ್ಳಿ ಸಿಗ್ನಲ್ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ಧಾರೆ. ಬೀಟ್​ಗೆ ಬಂದಿದ್ದ ಇಬ್ಬರು ಪೊಲೀಸರು ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದಾಗ ಕಾರ್ಮಿಕರು ದುರ್ವರ್ತನೆ ತೋರಿದ್ದಾರೆ. ತಮ್ಮ ರಾಜ್ಯಗಳಿಗೆ ವಾಪಸ್ ಕಳುಹಿಸಿಕೊಟ್ಟಿಲ್ಲವೆಂಬುದು ಈ ಕಾರ್ಮಿಕರ ಆಕ್ರೋಶ. ಇವರು ಕಲ್ಲು ತೂರಾಟ ನಡೆಸುತ್ತಿದ್ದಂತೆಯೇ ಇಬ್ಬರು ಪೊಲೀಸರು ತಮ್ಮ ಬೈಕನ್ನು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್-19 ಪ್ರಕರಣ 614ಕ್ಕೆ ಏರಿಕೆ; ಭಾನುವಾರ ಕಲಬುರ್ಗಿಯಲ್ಲಿ 6 ಹೊಸ ಕೇಸ್ ಪತ್ತೆ

ಈ ಘಟನೆಯ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಇಲಾಖೆಯಿಂದ ಇನ್ನೂ ಅಧಿಕೃತ ಹೇಳಿಕೆ ಬರಬೇಕಿದೆ.

ಪಾದರಾಯನಪುರದಲ್ಲಿ ನೂರಾರು ಜನರು ಗಲಾಟೆ ನಡೆಸಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಸಂಗ ಇತ್ತೀಚೆಗಷ್ಟೇ ನಡೆದಿತ್ತು. ಆ ಪ್ರಕರಣದಲ್ಲಿ ಹಲವಾರು ಜನರನ್ನು ಬಂಧಿಸಿ ಸದ್ಯ ಹಜ್ ಭವನದಲ್ಲಿ ಕೈದುಗೊಳಿಸಲಾಗಿದೆ. ಕಾನೂನು ಅನುಷ್ಠಾನಗೊಳಿಸಲು ಸಾರ್ವಜನಿಕವಾಗಿ ಓಡಾಡುವ ಪೊಲೀಸರಿಗೆ ಸದಾ ಕೊರೋನಾ ಸೋಂಕಿನ ಅಪಾಯ ಇದ್ದೇ ಇರುತ್ತದೆ. ಅದರ ಜೊತೆಗೆ ಕೆಲ ಜನರಿಂದ ಪ್ರತಿಭಟನೆ, ಹಲ್ಲೆಗಳ ಕೃತ್ಯ ಎದುರಿಸಬೇಕಾಗುತ್ತದೆ.

ದೇಶಾದ್ಯಂತ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಎಸಗಿರುವ ಹಲವು ಪ್ರಕರಣಗಳುಂಟು. ಕೊರೋನಾ ವಾರಿಯರ್ಸ್​ಗೆ ಇದು ತಾಳ್ಮೆಯ ಪರೀಕ್ಷೆಯ ಕಾಲವಾಗಿದೆ.

First published: May 3, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading