ರಾಜ್ಯದಲ್ಲಿ ಕೋವಿಡ್-19 ಪ್ರಕರಣ 614ಕ್ಕೆ ಏರಿಕೆ; ಭಾನುವಾರ ಕಲಬುರ್ಗಿಯಲ್ಲಿ 6 ಹೊಸ ಕೇಸ್ ಪತ್ತೆ

Karnataka Coronavirus News: ಶನಿವಾರ ಸಂಜೆ 5ರಿಂದ ಭಾನುವಾರ ಸಂಜೆ 5ರವರೆಗೆ ಒಟ್ಟು 13 ಹೊಸ ಪ್ರಕರಣ ಬೆಳಕಿಗೆ ಬಂದಿವೆ. ಇದರಲ್ಲಿ ಕಲಬುರ್ಗಿಯಲ್ಲಿ 6, ಬೆಂಗಳೂರಿನಲ್ಲಿ 4 ಪ್ರಕರಣಗಳಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು(ಮೇ 03): ರಾಜ್ಯದಲ್ಲಿ ಶನಿವಾರ ಸಂಜೆ 5ಗಂಟೆಯಿಂದೀಚೆ 13 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟಾರೆ ಪ್ರಕರಣಗಳ ಸಂಖ್ಯೆ 614ಕ್ಕೇರಿದೆ. ಬೆಂಗಳೂರಿನಲ್ಲಿ 4, ಕಲಬುರ್ಗಿಯಲ್ಲಿ 6 ಮತ್ತು ಬಾಗಲಕೋಟೆಯಲ್ಲಿ 3 ಪ್ರಕರಣಗಳು ಇವತ್ತು ಬೆಳಕಿಗೆ ಬಂದಿರುವಂಥವು. ರಾಜ್ಯದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಸಂಜೆಯ ಬುಲೆಟಿನ್​ನಲ್ಲಿ ಈ ಮಾಹಿತಿ ಇದೆ. ಅದರ ಪ್ರಕಾರ, ಇವತ್ತು 22 ಮಂದಿ ಗುಣಮುಖರಾಗಿ ಹೊರಬಂದಿದ್ದಾರೆ. ಅಲ್ಲಿಗೆ 293 ಮಂದಿ ಡಿಸ್​ಚಾರ್ಜ್ ಆದಂತಾಗಿದೆ.

  ರಾಜ್ಯದಲ್ಲಿ ಈವರೆಗೆ 25 ಮಂದಿ ಸಾವನ್ನಪ್ಪಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಆ್ಯಕ್ಟಿವ್ ಕೇಸ್​ಗಳ ಸಂಖ್ಯೆ 295 ಮಾತ್ರ ಇದೆ. ಐಸಿಯುನಲ್ಲಿರುವ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಇದೀಗ ಮೂವರು ಮಾತ್ರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿ-101, ಪಿ-349 ಮತ್ತು ಪಿ-536 ಅವರು ಐಸಿಯುನಲ್ಲಿರುವ ರೋಗಿಗಳು. ಇನ್ನುಳಿದ 293 ರೋಗಿಗಳ ಆರೋಗ್ಯದಲ್ಲಿ ಅಷ್ಟೇನೂ ಏರುಪೇರಾಗಿಲ್ಲ. ಈ ಎಲ್ಲರೂ ಕೂಡ ವಿವಿಧ ಆಸ್ಪತ್ರೆಗಳಲ್ಲಿ ಐಸೋಲೇಶನ್ ವಾರ್ಡ್​ಗಳಲ್ಲಿ ದಾಖಲಾಗಿದ್ದಾರೆ.

  ಮೈಸೂರಿನಲ್ಲಿ ಕೊರೋನಾ ಸೋಂಕಿನಿಂದ ದಾಖಲಾಗಿದ್ದ 88 ರೋಗಿಗಳ ಪೈಕಿ ಈವರೆಗೆ 75 ಮಂದಿ ಡಿಸ್​ಚಾರ್ಜ್ ಆಗಿದ್ಧಾರೆ. ಅಲ್ಲಿ ಕೇವಲ 13 ಆ್ಯಕ್ಟಿವ್ ಕೇಸ್​ಗಳು ಮಾತ್ರ ಉಳಿದಿವೆ. ಈ ಮೂಲಕ ಮೈಸೂರು ಹೆಚ್ಚೂಕಡಿಮೆ ಅಪಾಯದಿಂದ ಪಾರಾಗಿದೆ.

  ಇದನ್ನೂ ಓದಿ: ಕೊರೋನಾ ವಾರ್ಡ್​ನಲ್ಲಿ ಟ್ಯಾಬ್ ವ್ಯವಸ್ಥೆ: ರೋಗಿಗಳ ಜೊತೆ ಸಂಬಂಧಿಕರ ಸಂಪರ್ಕಕ್ಕೆ ವಿನೂತನ ತಂತ್ರ

  ಆಕ್ಟಿವ್ ಕೇಸ್​ಗಳಲ್ಲಿ ಅತಿ ಹೆಚ್ಚು ಇರುವುದು ಬೆಂಗಳೂರಲ್ಲೇ. ಇಲ್ಲಿ 70 ಮಂದಿ ಸೋಂಕಿತರಿದ್ದಾರೆ. ಬೆಳಗಾವಿ, ಕಲಬುರ್ಇ, ವಿಜಯಪುರ, ಬಾಗಲಕೋಟೆ, ಮಂಡ್ಯ ಜಿಲ್ಲೆಗಳಲ್ಲಿ ಹಾಲಿ ಸೋಂಕಿತರ ಸಂಖ್ಯೆ ಎರಡಂಕಿ ಇದೆ.

  ರಾಜ್ಯದಲ್ಲಿ ಕೊರೋನಾ ಆಕ್ಟಿವ್ ಪ್ರಕರಣಗಳ ಪಟ್ಟಿ:
  ಒಟ್ಟು: 295

  ಬೆಂಗಳೂರು: 70
  ಬೆಳಗಾವಿ: 55
  ಕಲಬುರ್ಗಿ: 38
  ವಿಜಯಪುರ: 29
  ಬಾಗಲಕೋಟೆ: 22
  ಮಂಡ್ಯ: 22
  ದಕ್ಷಿಣ ಕನ್ನಡ: 9
  ದಾವಣಗೆರೆ: 7
  ಚಿಕ್ಕಬಳ್ಳಾಪುರ: 6
  ಧಾರವಾಡ: 6
  ಬಳ್ಳಾರಿ: 5
  ತುಮಕೂರು: 4
  ಗದಗ: 3
  ಇತರೆ: 2

  First published: