SSLC: ಇಂದಿನಿಂದ 1 ತಿಂಗಳು ಚಂದನ ವಾಹಿನಿಯಲ್ಲಿ ಆಂಗ್ಲ ಮಾಧ್ಯಮದಲ್ಲೂ ಎಸ್​ಎಸ್​ಎಲ್​ಸಿ ಪಠ್ಯ ಬೋಧನೆ ಆರಂಭ

ಮೇ 9ರಿಂದ (ಇಂದಿನಿಂದ) ಪ್ರತಿದಿನ ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ಚಂದನ ವಾಹಿನಿಯಲ್ಲಿ ಈ ತರಗತಿಗಳು ಪ್ರಸಾರವಾಗಲಿವೆ. ಈ ತರಗತಿಗಳ ಮುದ್ರಿತ ಭಾಗವನ್ನು ಮಕ್ಕಳ ವಾಣಿ ಯೂಟ್ಯೂಬ್ ಚಾನೆಲ್​ನಲ್ಲೂ ಅಪ್ಲೋಡ್​ ಮಾಡಲಾಗುತ್ತದೆ. ಯಾವಾಗ ಬೇಕಾದರೂ ವಿದ್ಯಾರ್ಥಿಗಳು ಇಲ್ಲಿ ತರಗತಿಗಳ ವೀಕ್ಷಿಸಬಹುದು.

ಆನ್​​ ಲೈನ್​​ಲ್ಲಿ ಪಾಠ ಮಾಡುತ್ತಿರುವ ಶಿಕ್ಷಕ

ಆನ್​​ ಲೈನ್​​ಲ್ಲಿ ಪಾಠ ಮಾಡುತ್ತಿರುವ ಶಿಕ್ಷಕ

  • Share this:
    ಬೆಂಗಳೂರು: ಏಪ್ರಿಲ್  29ರಿಂದ ಚಂದನ ವಾಹಿನಿಯಲ್ಲಿ ಆರಂಭಿಸಲಾಗಿರುವ ಎಸ್​ಎಸ್​ಎಲ್​ಸಿ ಪುನರ್​ಮನನ ತರಗತಿಗಳನ್ನು ಇಂದಿನಿಂದ ಆಂಗ್ಲ ಮಾಧ್ಯಮದಲ್ಲೂ ಸಹ ಪ್ರಾರಂಭವಾಗಲಿದೆ.

    ಕನ್ನಡ ಮಾಧ್ಯಮದಲ್ಲಿ ಆರಂಭಿಸಲಾಗಿರುವ ಪುನರ್​ಮನನ ತರಗತಿಗಳನ್ನು ರಾಜ್ಯದ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದು, ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಪುನರ್​ಮನನ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಮುಂದಿನ 30 ದಿನಗಳ ಅವಧಿಯಲ್ಲಿ ಮೊದಲ 16 ದಿನ ಗಣಿತ ಹಾಗೂ ವಿಜ್ಞಾನ, ನಂತರ 10 ದಿನ ಸಮಾಜ ವಿಜ್ಞಾನ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗತ್ತದೆ. ಸಮಾಜ ವಿಜ್ಞಾನ ಬೋಧನೆ ಪೂರ್ಣಗೊಂಡ ಬಳಿಕ ಆರು ದಿನಗಳ ಕಾಲ ಹಿಂದಿ, ಸಂಸ್ಕೃತ ಹಾಗೂ ಉರ್ದು ಮೊದಲ ಭಾಷೆಗಳ ತರಗತಿಗಳನ್ನೂ ಬೋಧಿಸಲಾಗುವುದು ಎಂದು ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಇದನ್ನು ಓದಿ: ಜುಲೈ ಮೊದಲಾರ್ಧ ಅವಧಿಯಲ್ಲಿ ನಡೆಯಲಿವೆ ಸಿಬಿಎಸ್​ಇ 10, 12ನೇ ತರಗತಿ ಪರೀಕ್ಷೆಗಳು

    ಮೇ 9ರಿಂದ (ಇಂದಿನಿಂದ) ಪ್ರತಿದಿನ ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ಚಂದನ ವಾಹಿನಿಯಲ್ಲಿ ಈ ತರಗತಿಗಳು ಪ್ರಸಾರವಾಗಲಿವೆ. ಈ ತರಗತಿಗಳ ಮುದ್ರಿತ ಭಾಗವನ್ನು ಮಕ್ಕಳ ವಾಣಿ ಯೂಟ್ಯೂಬ್ ಚಾನೆಲ್​ನಲ್ಲೂ ಅಪ್ಲೋಡ್​ ಮಾಡಲಾಗುತ್ತದೆ. ಯಾವಾಗ ಬೇಕಾದರೂ ವಿದ್ಯಾರ್ಥಿಗಳು ಇಲ್ಲಿ ತರಗತಿಗಳ ವೀಕ್ಷಿಸಬಹುದು.
    First published: