ಬಿಗಿಯಾದ ಲಾಕ್​​ಡೌನ್​​ನಿಂದ ಸುಧಾರಣೆ ಕಂಡ ಬೆಂಗಳೂರು: ಕಳೆದ 3 ದಿನಗಳಿಂದ ದಾಖಲಾಗಿಲ್ಲ ಒಂದೇ ಒಂದು ಹೊಸ ಕೋವಿಡ್​​-19 ಪ್ರಕರಣ

Coronavirus Cases In Bangalore: ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ, ಬೆಂಗಳೂರಿನ 89 ಸೋಂಕಿತರ ಪೈಕಿ 41 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ. ಹಾಗಾಗಿ ಸದ್ಯ 37 ಆ್ಯಕ್ಟೀವ್​​ ಕೇಸುಗಳ ಮಾತ್ರ ಇವೆ. ಇದು ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕಟ್ಟುನಿಟ್ಟಿಂದ ಲಾಕ್​​ಡೌನ್​​ ಜಾಡಿ ಮಾಡಿದ್ದಾರೆ. ಜನರು ಸಾಮಾಜಿಕ ಅಂತರ ಪಾಲಿಸುವಂತೆ ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ ಎಂಬುದು ತೋರಿಸುತ್ತದೆ.

news18-kannada
Updated:April 22, 2020, 7:56 PM IST
ಬಿಗಿಯಾದ ಲಾಕ್​​ಡೌನ್​​ನಿಂದ ಸುಧಾರಣೆ ಕಂಡ ಬೆಂಗಳೂರು: ಕಳೆದ 3 ದಿನಗಳಿಂದ ದಾಖಲಾಗಿಲ್ಲ ಒಂದೇ ಒಂದು ಹೊಸ ಕೋವಿಡ್​​-19 ಪ್ರಕರಣ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಏ.22): ದೇಶವ್ಯಾಪಿಯಾಗಿ ತೀವ್ರವಾಗಿ ಹರಡುತ್ತಿದ್ದ ಕೊರೋನಾ ನಿಗ್ರಹಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿರುವ ಎರಡನೇ ಹಂತದ ಲಾಕ್​​ಡೌನ್​​ ಫಲ ಕೊಟ್ಟಿದೆ. ಹಾಗಾಗಿಯೇ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಪಾಸಿಟಿವ್​​ ದಾಖಲಾಗುತ್ತಿದ್ದ ಬೆಂಗಳೂರಿನಲ್ಲೀಗ ದಿನೇದಿನೇ ಸುಧಾರಣೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯೇ ಕಳೆದ 3 ದಿನಗಳಿಂದ ಯಾವುದೇ ಕೋವಿಡ್​​-19 ಹೊಸ ಪ್ರಕರಣಗಳು ರಾಜಧಾನಿಯಲ್ಲ ಪತ್ತೆಯಾಗಿಲ್ಲ ಎಂಬ ಖುಷಿ ವಿಚಾರ.

ಹೌದು, ಇತ್ತೀಚೆಗೆ ಕರ್ನಾಟಕದಲ್ಲಿ ಕೊರೋನಾ ಆರ್ಭಟವೂ ತುಸು ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೇವಲ 9 ಕೇಸುಗಳು ಮಾತ್ರ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿನ ಸೋಂಕಿತರ ಸಂಖ್ಯೆ 418ಕ್ಕೇರಿದೆ. ಈ ಪೈಕಿ ಬೆಂಗಳೂರಿನಲ್ಲಿ ಕೇವಲ 89 ಕೇಸುಗಳು ಮಾತ್ರ ದಾಖಲಾಗಿದೆ. ಖುಷಿ ವಿಚಾರವೆಂದರೇ ಕಳೆದ ಮೂರು ದಿನಗಳಲ್ಲಿ ಯಾವುದೇ ಒಂದೇ ಒಂದು ಹೊಸ ಕೇಸು ಕೂಡ ರಾಜಧಾನಿಯಲ್ಲಿ ಪತ್ತೆಯಾಗಿಲ್ಲ ಎನ್ನುವುದು.

ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ, ಬೆಂಗಳೂರಿನ 89 ಸೋಂಕಿತರ ಪೈಕಿ 41 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ. ಹಾಗಾಗಿ ಸದ್ಯ 37 ಆ್ಯಕ್ಟೀವ್​​ ಕೇಸುಗಳ ಮಾತ್ರ ಇವೆ.  ಇದು ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕಟ್ಟುನಿಟ್ಟಿಂದ ಲಾಕ್​​ಡೌನ್​​ ಜಾಡಿ ಮಾಡಿದ್ದಾರೆ. ಜನರು ಸಾಮಾಜಿಕ ಅಂತರ ಪಾಲಿಸುವಂತೆ ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ ಎಂಬುದು ತೋರಿಸುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊರೋನಾ ಆರ್ಭಟ: ಇಂದು 10 ಕೋವಿಡ್​​-19 ಪಾಸಿಟಿವ್​​ ಪ್ರಕರಣ: 418ಕ್ಕೇರಿದ ಸೋಂಕಿತರ ಸಂಖ್ಯೆ

ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಅತ್ತ ಮೈಸೂರು, ಕಲಬುರ್ಗಿ, ಬೀದರ್​​, ಬೆಳಗಾವಿಯಲ್ಲಿ ದಿನೇದಿನೇ ಕೋವಿಡ್​​-19 ಪ್ರಕರಣಗಳು ಹೆಚ್ಚಾಗುತ್ತಿದ್ದರೇ ಬೆಂಗಳೂರಿನಲ್ಲಿ ಮಾತ್ರ ಕಡಿಮೆಯಾಗುತ್ತಿದೆ. ಇದರರ್ಥ ನಾವು ಮುಂದೆ ಬೆಂಗಳೂರನ್ನು ಗ್ರೀನ್​​ ಜೋನ್​​ ಆಗಿ ನೋಡಬಹುದಾಗಿದೆ. ಇದಕ್ಕೆ ಬಿಬಿಎಂಪಿ ಮತ್ತು ಸರ್ಕಾರ ಶ್ರಮ ಸಾಕಷ್ಟಿದೆ ಎನ್ನುತ್ತಾರೆ ಕರ್ನಾಟಕ ಟಾಸ್ಕ್​​ ಫೋರ್ಸ್​​ ಸದಸ್ಯರು ಮತ್ತು ಜಯದೇವ ಆಸ್ಪತ್ರೆ ವೈದ್ಯರಾದ ಡಾ. ಸಿ.ಎನ್​​ ಮಂಜುನಾಥ್​.
First published: April 22, 2020, 7:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading