• Home
 • »
 • News
 • »
 • coronavirus-latest-news
 • »
 • ಜನರ ಸಂಕಷ್ಟಕ್ಕೆ ಸ್ಪಂದಿಸಿದ ಮಾಲೂರು ಶಾಸಕ ನಂಜೇಗೌಡ; 55 ಸಾವಿರ ಕುಟುಂಬಕ್ಕೆ ದಿನಸಿ, ತರಕಾರಿ ವಿತರಣೆ

ಜನರ ಸಂಕಷ್ಟಕ್ಕೆ ಸ್ಪಂದಿಸಿದ ಮಾಲೂರು ಶಾಸಕ ನಂಜೇಗೌಡ; 55 ಸಾವಿರ ಕುಟುಂಬಕ್ಕೆ ದಿನಸಿ, ತರಕಾರಿ ವಿತರಣೆ

ಕೆವೈ ನಂಜೇಗೌಡ

ಕೆವೈ ನಂಜೇಗೌಡ

ಕೆವೈ ನಂಜೇಗೌಡರು ಕೊರೋನಾ ವಾರಿಯರ್ಸ್​ಗೆ ದಿನಸಿ,  ಸೀರೆ ಬಟ್ಟೆ, ತರಕಾರಿ ವಿತರಣೆ ಮಾಡುವ ಮೂಲಕ ಗೌರವ ಸೂಚಿಸಿದರು. ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

 • Share this:

  ಕೋಲಾರ: ಕೊರೊನಾ ಮಹಾಮಾರಿ ತಡೆಗಟ್ಟಲು ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದು ಅಸಂಘಟಿತ ವಲಯದ ಮೇಲೆ ಪ್ರತಿಕೂಲ‌ ಪರಿಣಾಮ‌ ಬೀರಿದೆ. ಕೇಂದ್ರ, ರಾಜ್ಯ ಸರ್ಕಾರ ಬಡವರ ನೆರವಿಗೆ ದಾವಿಸಿದ್ದು ಹಲವು ಪ್ಯಾಕೇಜ್ ಘೋಷಿಸಿದೆ. ಇದರ ಜೊತೆಗೆ ಬಡವರಿಗೆ ಕೈಲಾದಷ್ಟು ಸಹಾಯ ಮಾಡುವಂತೆಯೂ ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಸಿಎಂ ಯಡಿಯೂರಪ್ಪ ಹಾಗು ರಾಜ್ಯದ ನಾಯಕರು ಕೋರಿದ್ದಾರೆ. ರಾಜ್ಯದೆಲ್ಲೆಡೆ ದಾನಿಗಳು ತಮ್ಮ ಕೈಲಾದಷ್ಟು ದಾನ ಧರ್ಮ‌ ಮಾಡುತ್ತಾ ಬಡವರ ನೆರವಿಗೆ ಧಾವಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನಲ್ಲೂ ಶಾಸಕ ಕೆವೈ ನಂಜೇಗೌಡ ತಮ್ಮ ಕ್ಷೇತ್ರದಲ್ಲಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.


  ರೈತರಿಂದ ತರಕಾರಿ ಕೊಂಡು, 55 ಸಾವಿರ ಕುಟುಂಬಗಳಿಗೆ ದಿನಸಿ ಪದಾರ್ಥ ವಿತರಣೆ:


  ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಓಬಟ್ಟಿ ಗ್ರಾಮದ ರೈತ ವೆಂಕಟರಮಣಪ್ಪ ತಮ್ಮ ಮೂರು ಎಕರೆ ಪ್ರದೇಶದಲ್ಲಿ 4 ಲಕ್ಷ ರೂ ಬಂಡವಾಳ ಹಾಕಿ ಎಲೆ ಕೋಸು ಬೆಳೆದಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳೆ ಕೊಳ್ಳೋರು ಇಲ್ಲದೆ ನಾಶ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಈ ವಿಚಾರ ತಿಳಿದ ಮಾಲೂರು ಶಾಸಕ ಕೆವೈ ನಂಜೇಗೌಡ ಗ್ರಾಮಕ್ಕೆ ಧಾವಿಸಿ ರೈತನಿಗೆ 50 ಸಾವಿರ ಹಣ ನೀಡಿ, ಬಡವರಿಗೆ ಉಚಿತವಾಗಿ ಕೋಸು ವಿತರಣೆ ಮಾಡಲು ಬೆಳೆ ದಾನವಾಗಿ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿದ ರೈತ ವೆಂಕಟರಮಣಪ್ಪ ತನ್ನ ಮೂರು ಎಕರೆಯ ಕೋಸನ್ನ ಶಾಸಕರಿಗೆ ನೀಡಲು ಒಪ್ಪಿದ್ದರು.


  ಇನ್ನು ಮಾಲೂರಿನ ಬಡ ಜನತೆಗೆ ತರಕಾರಿ ವಿತರಣೆ ಮಾಡುವ ಉದ್ದೇಶದಿಂದ ಪಕ್ಕದ ಕದಿರೇನಹಳ್ಳಿ, ಅನಿಗಾನಹಳ್ಳಿ ಗ್ರಾಮದಲ್ಲಿ ಸಂಕಷ್ಟದಲ್ಲಿದ್ದ ರೈತರ  ಟೊಮೆಟೊ, ಕುಂಬಳಕಾಯಿ ಬೆಳೆಯನ್ನೂ ಶಾಸಕ ನಂಜೇಗೌಡ ಖರೀದಿ ಮಾಡಿದ್ದರು. ದಿನಸಿ ತರಕಾರಿ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದ್ದರು. ತರಕಾರಿ ಜೊತೆಗೆ ಒಂದೂವರೆ ಕೆಜಿ ಗೋಧಿ ಹಿಟ್ಟನ್ನೂ ಸಹ ವಿತರಣೆ ಮಾಡಿದ್ದರು.


  ಇದನ್ನೂ ಓದಿ: ಲಾಕ್ ಡೌನ್ ಸಡಿಲಿಕೆಯಿಂದ ರಾಮನಗರಕ್ಕೆ ಅಪಾಯ; ಜನರ ಕಾರುಬಾರು ಜೋರು


  ಕೊರೊನಾ ವಾರಿಯರ್ಸ್​ಗೆ ದಿನಸಿ, ತರಕಾರಿ, ಸೀರೆ, ಬಟ್ಟೆ, ವಿತರಣೆ ಮಾಡಿದ ಸಿದ್ದರಾಮಯ್ಯ:


  ಇದೇ ವೇಳೆ, ಕೆವೈ ನಂಜೇಗೌಡರು ಕೊರೋನಾ ವಾರಿಯರ್ಸ್​ಗೆ ದಿನಸಿ,  ಸೀರೆ ಬಟ್ಟೆ, ತರಕಾರಿ ವಿತರಣೆ ಮಾಡುವ ಮೂಲಕ ಗೌರವ ಸೂಚಿಸಿದರು. ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೊಮ್ಮನಹಳ್ಳಿ ಗ್ರಾಮದ ಬೈರೇಶ್ವರ ದೇಗುಲದ ಬಳಿ ಆಯೊಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನ ವೀಕ್ಷಿಸಲು ಕಾರ್ಯಕರ್ತರು, ಅಭಿಮಾನಿಗಳು ಮುಗಿಬಿದ್ದರು.


  ಕೊಮ್ಮನಹಳ್ಳಿ ಗ್ರಾಮದ ರಸ್ತೆಯ ಎರಡು ಬದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತಿನಿಂದ ನಿಂತಿದ್ದ  ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರಿಗೆ ಸೀರೆ, ಅರಿಶಿನಿ, ಕುಂಕುಮ, ಹೂ, ದಿನಸಿ ಕಿಟ್   ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ  ಸಿದ್ದರಾಮಯ್ಯ ಚಾಲನೆ ನೀಡಿದರು. ಹಾಗೆಯೇ, ವಾಟರ್ ಮೆನ್, ಅಂಗನವಾಡಿ ಸಹಾಯಕರಿಗೂ ಕಿಟ್ ಹಂಚಲಾಯಿತು.


  ಸಿದ್ದರಾಮಯ್ಯ ಸಹ ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಕೈ ಮುಗಿದು ಗೌರವ ಸಲ್ಲಿಸಿದರು, ಮಾಲೂರು ತಾಲೂಕಿನಾದ್ಯಂತ 5 ಸಾವಿರಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್​ಗೆ ದಿನಸಿ, ಪುರುಷರಿಗೆ ಬಟ್ಟೆ, ಮಹಿಳೆಯರಿಗೆ ಸೀರೆ, ತರಕಾರಿ ನೀಡುವ ಮೂಲಕ ಶಾಸಕ‌ ಕೆವೈ ನಂಜೇಗೌಡ ಗೌರವ ಸಲ್ಲಿಸಿದರು.


  ಇದನ್ನೂ ಓದಿ: ಕೊಪ್ಪಳಕ್ಕೂ ಬಂತಾ ಕೊರೋನಾ ಗುಮ್ಮ?; ಭೀತಿಗೆ ಕಾರಣವಾಗಿದೆ ಆ ಒಂದು ಮದುವೆ!


  ಕಾರ್ಯಕ್ರಮ ನಂತರ ಶಾಸಕ ಕೆವೈ ನಂಜೇಗೌಡ ನಿವಾಸದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ಘೋಷಿಸಿರೊ ಆರ್ಥಿಕ ಪ್ಯಾಕೇಜ್ ಯಾವ ಮೂಲೆಗೆ ಸಾಲಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾನು ವಾರದ ಹಿಂದೆಯೇ ಎಲ್ಲಾ ಸಂಪ್ರದಾಯ ವೃತ್ತಿ ಮಾಡುವರ ಸಭೆ ಕರೆದಿದ್ದೆ. ಸಿಎಂ ಯಡಿಯೂರಪ್ಪರಿಗೂ ಆರ್ಥಿಕ ಪ್ಯಾಕೇಜ್ ಘೋಷಿಸಲು ಪತ್ರ ಬರೆದಿದ್ದೆ. ಬಹಳ ವಲಯದ ಜನರನ್ನ ಪ್ಯಾಕೇಜ್​ನಲ್ಲಿ ಕೈಬಿಟ್ಟಿದ್ದಾರೆ ಎಂದರು. ಜೊತೆಗೆ ಪುಷ್ಪೋದ್ಯಮಕ್ಕೆ ಸರ್ಕಾರ ಘೋಷಿಸಿರುವ ಪರಿಹಾರ ಸಾಕಾಗಲ್ಲ. 25 ಸಾವಿರ ಹಣ ಒಂದು ಬಾರಿಗೆ ಔಷಧಿ ಸಿಂಪಡನೆ ಮಾಡಲು ಸಾಲಲ್ಲ. ತರಕಾರಿ, ಹಣ್ಣು  ರೈತರಿಗೆ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.


  ಒಟ್ಟಿನಲ್ಲಿ ಕೊರೊನಾ ಲಾಕ್​ಡೌನ್ ವೇಳೆ ಜನತೆಯ ಜೊತೆಗಿದ್ದು ತಮ್ಮ ಕೈಲಾದಷ್ಟು ಸಹಾಯವನ್ನ ಅದೆಷ್ಟೋ ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಲೂರು ಶಾಸಕ ಕೆವೈ ನಂಜೇಗೌಡ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಇತರರಿಗು ಮಾದರಿಯಾಗಿದ್ದಾರೆ.


  ವರದಿ: ರಘುರಾಜ್

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು