ಭಾರತದಲ್ಲಿ ಕೊರೋನಾಗೆ 645 ಬಲಿ; 20 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಈಗಾಗಲೇ ವಿಶ್ವಾದ್ಯಂತ ಕೊರೋನಾ ವೈರಸ್​ನಿಂದ 1.77 ಲಕ್ಷ ಜನರು ಸಾವನ್ನಪ್ಪಿದ್ದಾರೆ. 25.57 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದೆ.

Sushma Chakre | news18-kannada
Updated:April 22, 2020, 10:54 AM IST
ಭಾರತದಲ್ಲಿ ಕೊರೋನಾಗೆ 645 ಬಲಿ; 20 ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಏ. 22): ಲಾಕ್​ಡೌನ್​ ನಡುವೆಯೂ ಕೊರೋನಾ ವೈರಸ್​ನಿಂದಾಗಿ ಭಾರತದಲ್ಲಿ ಈಗಾಗಲೇ 645 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ದಾಟಿದ್ದು, ಕೊರೋನಾ ನಿಯಂತ್ರಿಸುವುದೇ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿದೆ.

ಇಂದಿನವರೆಗೆ ದೇಶದಲ್ಲಿ 20,111 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೋನಾದಿಂದ ಈಗಾಗಲೇ 645 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರಲ್ಲಿ 3,975 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 25 ಗಂಟೆಗಳಲ್ಲೇ ಭಾರತದಲ್ಲಿ 50 ಜನ ಸಾವನ್ನಪ್ಪಿದ್ದು, 1,300 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ: ಕೊರೋನಾಗೆ ಬೆಚ್ಚಿದ ಅಮೆರಿಕ; ಒಂದೇ ದಿನ 2,100 ಜನ ಸಾವು; 45 ಸಾವಿರಕ್ಕೇರಿದ ಮೃತರ ಸಂಖ್ಯೆ

ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲೂ ಕೊರೋನಾ ಅಟ್ಟಹಾಸ ನಡೆಯುತ್ತಿದೆ. ಈಗಾಗಲೇ ವಿಶ್ವಾದ್ಯಂತ ಕೊರೋನಾ ವೈರಸ್​ನಿಂದ 1.77 ಲಕ್ಷ ಜನರು ಸಾವನ್ನಪ್ಪಿದ್ದಾರೆ. 25.57 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದೆ. ಅವರಲ್ಲಿ 6.95 ಲಕ್ಷ ಜನರು ಚಿಕಿತ್ಸೆ ಪಡೆದು, ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೊರೋನಾ ಸೋಂಕಿತ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 8.19 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ ಅಮೆರಿಕದಲ್ಲಿ 45,343 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. 2ನೇ ಸ್ಥಾನದಲ್ಲಿರುವ ಸ್ಪೇನ್​ನಲ್ಲಿ 2.4 ಲಕ್ಷ ಜನರಿಗೆ ಸೋಂಕು ಪತ್ತೆಯಾಗಿದ್ದು, 21,283 ಜನ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಸಾವನ್ನಪ್ಪಿದವರ ಸಂಖ್ಯೆ 24,648 ಆಗಿದೆ.
First published: April 22, 2020, 10:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading