Coronavirus In Mysore: ಜುಬಿಲೆಂಟ್ಸ್ ಕಾರ್ಖಾನೆ ಕೊರೋನಾ ಸೋಂಕು ಕೇಸ್: ತನಿಖಾಧಿಕಾರಿ ಹರ್ಷಗುಪ್ತರಿಂದ ಅಪೂರ್ಣ ವರದಿ ಸಲ್ಲಿಕೆ

Lockdown News: ತನಿಖೆಯ ವರದಿಯಲ್ಲಿ ಸೋಂಕಿನ ಮೂಲ ಪತ್ತೆಯಾಗಿರೋ ಬಗ್ಗೆ ಯಾವುದೇ ಅಂಶಗಳ ಉಲ್ಲೇಖ ಮಾಡಿಲ್ಲ. ಸೋಂಕು ಹರಡೋಕೆ ಕಾರಣವೇನು ಅನ್ನೋ ಅಂಶವನ್ನ ತನಿಖಾಧಿಕಾರಿ ಹರ್ಷಗುಪ್ತ ಉಲ್ಲೇಖಿಸಿದ್ದಾರೆ.

news18-kannada
Updated:May 3, 2020, 10:00 PM IST
Coronavirus In Mysore: ಜುಬಿಲೆಂಟ್ಸ್ ಕಾರ್ಖಾನೆ ಕೊರೋನಾ ಸೋಂಕು ಕೇಸ್: ತನಿಖಾಧಿಕಾರಿ ಹರ್ಷಗುಪ್ತರಿಂದ ಅಪೂರ್ಣ ವರದಿ ಸಲ್ಲಿಕೆ
ಮೈಸೂರಿನ ಅಧಿಕಾರಿಗಳು
  • Share this:
ಮೈಸೂರು(ಮೇ 03): ಜುಬಿಲೆಂಟ್ಸ್ ಕಾರ್ಖಾನೆಗೆ ಕೊರೋನಾ ಸೋಂಕು ತಗುಲಿದ್ದರ ಬಗ್ಗೆ ಸರ್ಕಾರ ಆದೇಶಿಸಿದ್ದ ತನಿಖೆಯ  ಕೇಸ್‌ನ ವರದಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ವಿಶೇಷಾಧಿಕಾರಿ ಹರ್ಷಗುಪ್ತ ಜುಬಿಲೆಂಟ್ಸ್ ತನಿಖೆ ಕುರಿತ ವರದಿಯನ್ನ ಮುಖ್ಯ ಕಾರ್ಯದರ್ಶಿ ಹಾಗೂ ಆಹಾರ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

ಆದರೆ, ಜುಬಿಲೆಂಟ್ಸ್ ಕಾರ್ಖಾನೆಯ P52ಗೆ ಸೋಂಕು ತಗುಲಿದ್ದರ ಬಗ್ಗೆ ತನಿಖೆ ನಡೆಸುವಂತೆ ನೇಮಕವಾಗಿದ್ದ ಹರ್ಷಗುಪ್ತ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅಪೂರ್ಣವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ತನಿಖೆಯ ಮಾಹಿತಿ ಕೇಳಿ ಹಲವು ಇಲಾಖೆಗೆ ಪತ್ರ ಬರೆದಿದ್ದ ತನಿಖಾಧಿಕಾರಿ ಹರ್ಷಗುಪ್ತ, ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಅಪೂರ್ಣ ವರದಿ ಸಲ್ಲಿಕೆ ಮಾಡಿದ್ದಾರೆ. ತಮ್ಮಲ್ಲಿರುವ ಅಂಶಗಳನ್ನ ಉಲ್ಲೇಖಿಸಿ ವರದಿ ಸಲ್ಲಿಸಿರುವ ತನಿಖಾಧಿಕಾರಿ ಹರ್ಷಗುಪ್ತ ಇಲಾಖೆಗಳ ಅಸಹಕಾರಕ್ಕೂ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನಲ್ಲಿರುವ ಮಾಹಿತಿ ಹಾಗೂ ತಾಂತ್ರಿಕ ತಜ್ಞರ ಮಾಹಿತಿ ಆಧರಿಸಿ ವರದಿ ನೀಡಿದ್ದೇನೆ. ನನಗೆ ಒಂದು ವಾರದಲ್ಲಿ ವರದಿ ನೀಡುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಒಂದು ವಾರದ ಒಳಗಾಗಿ ವರದಿ ನೀಡಿದ್ದೇನೆ.  ಕೆಲವು ಮಾಹಿತಿಗಳು ಸಿಕ್ಕಿಲ್ಲ. ಕೆಲವನ್ನ ಹೇಗೆ ಮುಂದುವರೆಸಬೇಕು ಅನ್ನೋದನ್ನು ವರದಿಯಲ್ಲಿ ನೀಡಿದ್ದೇನೆ. ಮತ್ತೊಮ್ಮೆ ನಾನು ಅಲ್ಲಿ ಬಂದು ತನಿಖೆ ಮಾಡುವ ಅಗತ್ಯವಿಲ್ಲ. ಸದ್ಯ ನನ್ನ ವಿವೇಚನಾಧಾರಿತ ಎಲ್ಲ ಅಂಶಗಳನ್ನೊಂಡ ವರದಿ ನೀಡಿದ್ದೇನೆ ಅಂತ ನ್ಯೂಸ್18ಗ ಜೊತೆ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದ ತನಿಖಾಧಿಕಾರಿ ಹರ್ಷಗುಪ್ತ ವರದಿಯ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಉತ್ತರ ಭಾರತದ ಕೂಲಿ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ

ತನಿಖೆಯ ವರದಿಯಲ್ಲಿ ಸೋಂಕಿನ ಮೂಲ ಪತ್ತೆಯಾಗಿರೋ ಬಗ್ಗೆ ಯಾವುದೇ ಅಂಶಗಳ ಉಲ್ಲೇಖ ಮಾಡಿಲ್ಲ. ಸೋಂಕು ಹರಡೋಕೆ ಕಾರಣವೇನು ಅನ್ನೋ ಅಂಶವನ್ನ ತನಿಖಾಧಿಕಾರಿ ಹರ್ಷಗುಪ್ತ ಉಲ್ಲೇಖಿಸಿದ್ದಾರೆ. P52 ನಿಂದ ಸೋಂಕು ಹರಡುವ ಸಾಧ್ಯತೆ ಇದ್ದರೂ ಕಾರ್ಮಿಕರನ್ನ ಅವರವರ ಕುಟುಂಬದ ಜೊತೆ ವಾಸ ಮಾಡಲು ಬಿಟ್ಟಿದ್ದು ತಪ್ಪಾಗಿದೆ. ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕದ ವ್ಯಕ್ತಿಗಳನ್ನ ಕ್ವಾರಂಟೈನ್ ಮಾಡುವ ವಿಧಾನ ಬದಲಾಗಿದ್ದರೆ ಜುಬಿಲೆಂಟ್ಸ್‌ನಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ತಜ್ಞರನ್ನು ಸಂಪರ್ಕಿಸಿ ಅವರೊಂದಿಗೂ ಮಾಹಿತಿ ಕಲೆ ಹಾಕಿರುವ ತನಿಖಾಧಿಕಾರಿ, ಕಾರ್ಖಾನೆಯ ಯಾವುದೇ ಕಚ್ಛಾ ವಸ್ತುವಿನಿಂದ ಸೋಂಕು ಹರಡಿಲಿಲ್ಲ. ಹೀಗಾಗಿ ಆ ಬಗ್ಗೆ ಅನುಮಾನ ವ್ಯಕ್ತ ಪಡಿಸೋದು ಬೇಡ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​​: ಕಾರವಾರದಲ್ಲಿ ಊಟಕ್ಕೂ ಗತಿಯಿಲ್ಲದೇ ಪರದಾಡುತ್ತಿರುವ ಹೊರ ರಾಜ್ಯದ ಕಟ್ಟಡ ಕಾರ್ಮಿಕರುಮೈಸೂರು ಜಿಲ್ಲಾ ಪೊಲೀಸರು ನೀಡಿದ ಪೊಲೀಸ್ ತನಿಖಾ ವರದಿಯಲ್ಲಿನ ಅಂಶಗಳನ್ನು ಉಲ್ಲೇಖಿಸಿರುವ ಹರ್ಷಗುಪ್ತ, P52 ಟ್ರಾವಲ್ ಹಿಸ್ಟರಿ ಹಾಗೂ ಕಂಪನಿಗೆ ಬಂದಂತಹ ವಿದೇಶಿಗರ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಿದ್ದು, ಇವುಗಳ ಬಗ್ಗೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿ ಅಂತ ತಿಳಿಸಿದ್ದಾರೆ.

ಇವೆಲ್ಲದ ಜೊತೆಗೆ ಸೋಂಕು ಯಾವ ಮೂಲದಿಂದ ಬಂತು ಅನ್ನೋ ಬಗ್ಗೆ ತನಿಖೆಯಲ್ಲೂ  ಸ್ಪಷ್ಟತೆ ಸಿಗದಂತಾಗಿದೆ.  ಮೊದಲು ಕೊರೋನಾ ನಿಯಂತ್ರಣಕ್ಕೆ ಬಂದಿದ್ದ ವಿಶೇಷಾಧಿಕಾರಿ ಹರ್ಷಗುಪ್ತರನ್ನ ಜುಬಿಲೆಂಟ್ಸ್ ಕಾರ್ಖಾನೆ ಕೇಸ್ ತನಿಖೆ ನಡೆಸೋಕೆ ನೇಮಕ ಮಾಡಲಾಗಿತ್ತು. ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ವಾರದಲ್ಲೆ ತನಿಖೆ ನಡೆಸಿದ ಇಲಾಖೆಗಳ ಅಸಹಕಾರದ ಜೊತೆ ಸೋಂಕಿನ ಮೂಲವನ್ನು ಹುಡುಕದ ತನಿಖಾಧಿಕಾರಿ ಅರ್ಧಕ್ಕೆ ವಾಪಸ್ ಆಗಿದ್ದಾರೆ.  ಇಷ್ಟಾದರೂ ಜುಬಿಲೆಂಟ್ಸ್‌ ಕಾರ್ಖಾನೆಗೆ P52ಗೆ ಸೋಂಕು ಬಂದಿದ್ದಾರೂ ಹೇಗೆ ಅನ್ನೋದು ಎಲ್ಲರಲ್ಲೂ ಕಾಡುವ ಪ್ರಶ್ನೆಯಾಗಿದೆ.  ಸದ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಸರ್ಕಾರ ವರದಿ ಆಧಾರ ಮೇಲೆ ಅದ್ಯಾವ ಕ್ರಮ ಕೈಗೊಳ್ಳಲಿದೆ ಹಾಗೂ ಯಾವ ತಪ್ಪಿತ್ತಸ್ಥರಿಗೆ ಶಿಕ್ಷೆ ಆಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ವರದಿ: ಪುಟ್ಟಪ್ಪ

First published: May 3, 2020, 7:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading