ಬಾಗಲಕೋಟೆಯಲ್ಲಿ ನಿನ್ನೆ ಸಂಜೆಯಿಂದ 13 ಕೊರೋನಾ ಕೇಸ್ ಪತ್ತೆ; ಕರ್ನಾಟಕದಲ್ಲಿ 692 ಜನರಿಗೆ ಸೋಂಕು

Bagalkot Coronavirus Cases: ಬಾಗಲಕೋಟೆಯ ಬದಾಮಿಯಲ್ಲಿ 13, ದಕ್ಷಿಣ ಕನ್ನಡದಲ್ಲಿ 3, ಬೆಂಗಳೂರಿನಲ್ಲಿ 2 ಮತ್ತು ಕಲಬುರ್ಗಿಯಲ್ಲಿ 1 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 6): ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮೇ 17ರವರೆಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಆದರೆ, ರಾಜ್ಯದಲ್ಲಿ ಲಾಕ್​ಡೌನ್​ ಸಡಿಲಿಸಲಾಗಿದ್ದು, ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ನಡುವೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಏರಿಕೆಯಾಗುತ್ತಲೇ ಇದೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ 19 ಕೊರೋನಾ ಕೇಸುಗಳು ಪತ್ತೆಯಾಗಿವೆ.

ನಿನ್ನೆ ಸಂಜೆಯಿಂದ ರಾಜ್ಯದಲ್ಲಿ 19 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗುತ್ತಿದೆ. ಕೊರೋನಾದಿಂದಾಗಿ 29 ಜನರು ಸಾವನ್ನಪ್ಪಿದ್ದು, ಓರ್ವ ರೋಗಿ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾನೆ. ಸೋಂಕಿತರ ಪೈಕಿ 345 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಇದನ್ನೂ ಓದಿ: ಯಾವ ರಾಷ್ಟ್ರಗಳಿಂದ, ಎಷ್ಟು ಜನರು ಬೆಂಗಳೂರಿಗೆ ಬರಲಿದ್ದಾರೆ ಗೊತ್ತಾ?; ಇಲ್ಲಿದೆ ಪೂರ್ತಿ ಮಾಹಿತಿ...ಬಾಗಲಕೋಟೆಯ ಬದಾಮಿಯಲ್ಲಿ 13, ದಕ್ಷಿಣ ಕನ್ನಡದಲ್ಲಿ 3, ಬೆಂಗಳೂರಿನಲ್ಲಿ 2 ಮತ್ತು ಕಲಬುರ್ಗಿಯಲ್ಲಿ 1 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಬಾಗಲಕೋಟೆಯಲ್ಲಿ ಅತ್ಯಧಿಕ ಸೋಂಕಿತ ಕೇಸುಗಳು ಪತ್ತೆಯಾಗಿದ್ದು, ಈ ಸಂಖ್ಯೆ ಸಂಜೆಯ ವೇಳೆಗೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆಯ ಓರ್ವ ಯುವತಿಯನ್ನು ಹೊರತುಪಡಿಸಿ ಎಲ್ಲ ಹೊಸ ಸೋಂಕಿತರು ರೋಗಿ ನಂಬರ್ 607 ಅವರ ಸಂಪರ್ಕಕ್ಕೆ ಬಂದವರಾಗಿದ್ದಾರೆ.
First published: