ರಸ್ತೆಯಲ್ಲಿ ಓಡಾಡುತ್ತುರುವ ಜನರು
ಕಾರವಾರ(ಮೇ.04): ಮೂರನೇ ಹಂತದ ಲಾಕ್ ಡೌನ್ ಇಂದಿನಿಂದ ಆರಂಭವಾಗಿದೆ. ಈ ಮದ್ಯೆ ಸರಕಾರ ಆರೇಂಜ್ ಜೋನ್ ನಲ್ಲಿ ಕೊಂಚ ಸಡಿಲಿಕೆ ನೀಡಿದೆ. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ನಿರ್ಬಂಧಿತ ಭಟ್ಕಳ ತಾಲೂಕು ಹೊರತು ಪಡಿಸಿ ಎಲ್ಲಡೆ ನಗರದಲ್ಲಿ ಜನ ಸಂಚಾರ ಆರಂಭವಾಗಿದ್ದು, ಅಗತ್ಯ ವಸ್ತುಗಳ ಖರೀದಿಯಲ್ಲಿ ಜನ ತೊಡಗಿಕೊಂಡು ಇಷ್ಟು ದಿನದಿಂದ ಬಿಕೋ ಎನ್ನುತ್ತಿದ್ದ ನಗರಕ್ಕೆ ಕಳೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ಎಲ್ಲ ನಗರಗಳು ಕಳೆದ 42 ದಿನದಿಂದ ಜನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿತ್ತು. ಆದರೆ, ಇವತ್ತು ಲಾಕ್ ಡೌನ್ ಸಡಿಲಿಕೆ ಆಗಿರುವುದರಿಂದ ನಿರ್ಬಂಧಿತ ಭಟ್ಕಳ ತಾಲೂಕಿನಲ್ಲಿ ಹೊರತು ಪಡಿಸಿ ಅನುಮತಿ ಇರುವ ಎಲ್ಲ ತಾಲೂಕಿನಲ್ಲಿ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದು, ನಗರಕ್ಕೆ ಕಳೆ ಬಂದಂತಾಗಿದೆ. ಜನ ಸಂಚಾರ ತುಂಬಾ ದಟ್ಟವಾಗಿಯೇ ಕಂಡು ಬರುತ್ತಿದೆ. ಪ್ರಮುಖ ವೃತ್ತಗಳು ಸೇರಿ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಕಂಡು ಬಂದಿದ್ದು, ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿಕೊಂಡಿದ್ದಾರೆ. ಮುಂದೆ ಮಳೆಗಾಲ ಆರಂಭವಾಗಿರುವುದರಿಂದ ಮನೆ ದುರಸ್ತಿ ಅದು ಇದು ಕೆಲಸದ ಅಗತ್ಯ ವಸ್ತುಗಳ ಖರೀದಿಗೆ ಜನ ಆಗಮಿಸಿದ್ದಾರೆ.
ಇನ್ನು ಇನ್ನೊಂದೆಡೆ 42ದಿನಗಳ ಬಳಿಕ ಮದ್ಯ ಪ್ರಿಯರ ಆಸೆ ಇಡೇರಿತು. ದೀರ್ಘಾವದಿಯ ತಪಸ್ಸಿನ ಪಲವಾಗಿ ಇವತ್ತು ಲಾಕ್ ಡೌನ್ ಸಡಿಲಿಕೆಯಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ಭಟ್ಕಳ ಹೊರತು ಪಡಿಸಿ ಎಲ್ಲ ತಾಲೂಕಿನಲ್ಲಿ ಮದ್ಯದ ಅಂಗಡಿ ತೆರೆದುಕೊಂಡು ವ್ಯಾಪಾರ ಶುರು ಮಾಡಿವೆ. ಪಾನ ಪ್ರಿಯರು ಸರದಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಜವಾಬ್ದಾರಿಯುತವಾಗಿ ಮದ್ಯವನ್ನ ಖರೀದಿಸುವ ದೃಶ್ಯ ಇವತ್ತು ಮೊದಲನೇ ದಿನ ಕಂಡು ಬಂತು. ಜತೆಗೆ ದಿನಸಿ ಅಂಗಡಿ ವ್ಯಾಪಾರಿಗಳು ಅಂಗಡಿ ತೆರೆದು ವ್ಯಾಪಾರ ಮಾಡಿದರು.
ಇದನ್ನೂ ಓದಿ :
ಲಕ್ಷಗಟ್ಟಲೆ ಕಾರ್ಮಿಕರು ವಾಪಸ್ ಹೋಗಿಬಿಟ್ಟರೆ ಬೆಂಗಳೂರು ಕಥೆ ಏನು? ಸರ್ಕಾರಕ್ಕೀಗ ಹೊಸ ಚಿಂತೆ
ಒಟ್ಟಾರೆ ಲಾಕ್ ಡೌನ್ ಸಡಿಲಿಕೆಯ ಲಾಭವನ್ನ ಇವತ್ತು ಉತ್ತರ ಕನ್ನಡ ಜಿಲ್ಲೆಯ ಜನ ಪಡೆದುಕೊಂಡರು. ಭಟ್ಕಳ ತಾಲೂಕು ಹೊರತು ಪಡಿಸಿ ಎಲ್ಲ ತಾಲೂಕಿನಲ್ಲಿ ನಿಧಾನವಾಗಿ ಕಾರ್ಯಚಟುವಟಿಕೆಗಳು ಆರಂಭವಾಗಿದೆ.
(ವರದಿ : ದರ್ಶನ್ ನಾಯ್ಕ)
First published:
May 4, 2020, 3:07 PM IST