‘ನಾಳೆಯಿಂದ ಬೆಂಗಳೂರಿನಲ್ಲಿ ಬಹುತೇಕ ಸೇವೆಗಳು ಲಭ್ಯ, ಸಾರ್ವಜನಿಕರ ಓಡಾಟಕ್ಕೆ ಅವಕಾಶ, ಷರತ್ತುಗಳು ಅನ್ವಯ’- ಭಾಸ್ಕರ್​​ ರಾವ್​​

Karnataka News: ಹೀಗೆ ಮುಂದುವರೆದ ಅವರು, ಮುಖ್ಯ ರಸ್ತೆಗಳು ಬಂದ್ ಆಗಿಯೇ ಇರುತ್ತೆ. ವಾಹನಗಳು ನಿಧಾನವಾಗಿ ಚಲಿಸಬೇಕು, 30 ಕಿಲೋ ಸ್ಫೀಡ್ ಇರಬೇಕು. ನಾವು ನಿಗಾ ವಹಿಸ್ತೇವೆ. ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ಬೇಕು. ಹೆಲ್ಮೆಟ್​, ಸಿಗ್ನಲ್ ಕಡ್ಡಾಯ. ಆರುವರೆಗೆ ಅಂಗಡಿ ಕ್ಲೋಸ್​ ಮಾಡಿ ಮತ್ತೆ ಬೆಳಿಗ್ಗೆಯೇ ಓಪನ್ ಮಾಡಬೇಕು ಎಂದು ಹೇಳಿದರು.

ಭಾಸ್ಕರ್​ ರಾವ್​

ಭಾಸ್ಕರ್​ ರಾವ್​

 • Share this:
  ಬೆಂಗಳೂರು(ಮೇ.03): ಕೊರೋನಾ ಹರಡದಂತೆ ತಡೆಯಲು ದೇಶಾದ್ಯಂತ ಮೂರನೇ ಬಾರಿಗೆ ಲಾಕ್​ಡೌನ್​​​​ ಮೇ 17ರವರೆಗೂ ವಿಸ್ತರಣೆ ಮಾಡಲಾಗಿದೆ. ಹೀಗಿದ್ದರೂ, ಕೆಲವು ವಲಯಗಳಲ್ಲಿ ಲಾಕ್​​ಡೌನ್ ನಿಯಮಗಳಲ್ಲಿ ಸಡಿಲಗೊಳಿಸಲಾಗಿದೆ. ಜತೆಗೆ ಜನ ಯಾವುದೇ ಕಾರಣಕ್ಕೂ ಗುಂಪು ಸೇರದಂತೆ ನಿಗಾ ಇಡಲು ಸರ್ಕಾರ ಮುಂದಾಗಿದೆ. ಲಾಕ್​ಡೌನ್​​​ ಸಡಿಲಗೊಳಿಸಿದರೂ ಈ ಮಾರ್ಗಸೂಚಿಗಳನ್ನು ಮಾತ್ರ ಜನರು ಪಾಲಿಸಲೇಬೇಕು ಎಂದು ಬೆಂಗಳೂರು ಆಯುಕ್ತ ಭಾಸ್ಕರ್​​ ರಾವ್​​ ತಿಳಿಸಿದ್ಧಾರೆ.

  ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಭಾಸ್ಕರ್​​ ರಾವ್​​, ಬೆಂಗಳೂರು ಪೊಲೀಸ್ ವತಿಯಿಂದ ಸಾರ್ವಜನಿಕರ ಚಲನವಲನಗಳ ನಿಗಾ ಇಡಲಾಗುವುದು. ಬಿಬಿಎಂಪಿ ವ್ಯಾಪ್ತಿಗೆ ಬರುವ 22 ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಎಲ್ಲಾ ಕಡೆಯೂ ನಾಳೆಯಿಂದ ಎಂದಿನಂತೆ ಇರುತ್ತದೆ. ಸಾಯಂಕಾಲ ಏಳು ಗಂಟೆಯಿಂದ ಬೆಳಗ್ಗೆ ಏಳು ಗಂಟೆವರೆಗೂ ಮುಚ್ಚಬೇಕು ಎಂದರು.

  ಇನ್ನು, ಪಾತ್ರೆ , ಟೆಕ್ಸ್, ಚಿನ್ನ, ಬೆಳ್ಳಿ ಅಂಗಡಿ ಎಲ್ಲಾ ಓಪನ್ ಇರುತ್ತೆ. ನಾಳೆ ಬೆಳಗ್ಗೆಯಿಂದ ಸಾಯಂಕಾಲವರೆಗೂ ಯಾವುದೇ ಪಾಸ್ ಚೆಕ್ ಮಾಡಲ್ಲ. ಅನುಮಾನ ಬಂದರೆ ಮಾತ್ರ ಚೆಕ್ ಮಾಡ್ತೀವಿ. ಈಗ ಮಾಡುತ್ತಿರುವ ತಪಾಸಣೆ ನಿಲಿಸುತ್ತೇವೆ. ಸುಖಾ ಸುಮ್ಮನೆ ರಸ್ತೆಗೆ ಯಾರೂ ಬರುವಂತಿಲ್ಲ. ನೀವು ಹೊರಗೆ ಬಂದರೆ ಐಡಿ ಕಾರ್ಡ್ ಕಡ್ಡಾಯ, ಅಗತ್ಯ ಇದ್ದರೆ ಮಾತ್ರ ಬರಬೇಕು ಎಂದು ಭಾಸ್ಕರ್​​ ಎಚ್ಚರಿಕೆ ನೀಡಿದ್ಧಾರೆ.

  ಹೀಗೆ ಮುಂದುವರೆದ ಅವರು, ಮುಖ್ಯ ರಸ್ತೆಗಳು ಬಂದ್ ಆಗಿಯೇ ಇರುತ್ತೆ. ವಾಹನಗಳು ನಿಧಾನವಾಗಿ ಚಲಿಸಬೇಕು, 30 ಕಿಲೋ ಸ್ಫೀಡ್ ಇರಬೇಕು. ನಾವು ನಿಗಾ ವಹಿಸ್ತೇವೆ. ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ಬೇಕು. ಹೆಲ್ಮೆಟ್​, ಸಿಗ್ನಲ್ ಕಡ್ಡಾಯ. ಆರುವರೆಗೆ ಅಂಗಡಿ ಕ್ಲೋಸ್​ ಮಾಡಿ ಮತ್ತೆ ಬೆಳಿಗ್ಗೆಯೇ ಓಪನ್ ಮಾಡಬೇಕು ಎಂದು ಹೇಳಿದರು.

  ಇದನ್ನೂ ಓದಿ: KS Nissar ahmed passes away: ನಿತ್ಯೋತ್ಸವ ಕವಿ ಕೆ.ಎಸ್ ನಿಸಾರ್ ಅಹಮದ್ ಇನ್ನಿಲ್ಲ

  ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಸ್ಟೀಲ್ ಪಾತ್ರೆ ಅಂಗಡಿ, ಚಿನ್ನ ಮಳಿಗೆ , ಏನೇ ಆಗಲಿ ಷರತ್ತು ಅನ್ವಯವಾಗಲಿದೆ. ಲಿಕ್ಕರ್ ಶಾಪ್ ಆರು ಗಂಟೆಗೆ ಕ್ಲೋಸ್ ಮಾಡಲು ಅಬಕಾರಿ ಇಲಾಖೆಗೆ ತಿಳಿಸಲಾಗಿದೆ. ಬಾರ್​​ಗಳ ಓಪನ್​ ಮಾಡಿದರೇ ಬ್ಯಾರಿಕೇಡ್ ಹಾಕಿರಬೇಕು, ಸಾಮಾಜಿಕ ಅಂತರ, ಮಾಸ್ಕ್ ಇರಬೇಕು. ಪ್ರವೇಟ್ ಸೆಕ್ಯೂರಿಟಿ, ಸಿಸಿಟಿವಿ, ಡಿವಿಆರ್ ಕಡ್ಡಾಯ. ಯಾರು ಅಂಗಡಿಗೆ ಬರ್ತಾರೋ ಅವರ ಮೇಲೆ ಅಂಗಡಿಯವರು ನಿಗಾ ವಹಿಸಬೇಕು. ಇಲ್ಲಂದ್ರೆ ಅನುಮತಿ ಇಲ್ಲ‌. ಎಲ್ಲಾ ಪಾಸರ್ಲ್ ತಗಂಡು ಮನೆಗೆ ಹೋಗಬೇಕು ಎಂದು ತಿಳಿಸಿದರು.

  ಮನೆ ಮುಂದೆ ಶೆಡ್ ಇದೆ ಅಂತ ಕುಳಿತುಕೊಳ್ಳುವಂತಿಲ್ಲ. ಹೀಗೆ ಮಾಡಿದರೇ ಕೇಸ್​ ಹಾಕ್ತೀವಿ. ಕೇಂದ್ರ ಸರ್ಕಾರ ಕೊಟ್ಟಿರುವ ಸಡಿಲಿಕೆಯನ್ನ ದುರುಪಯೋಗ ಪಡಿಸಿಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮದುವೆ, ಸಾವು, ಕೌಟುಂಬಿಕ ಕಾರ್ಯಕ್ರಮಗಳಲ್ಲಿ 50 ಮಂದಿ ಮಾತ್ರ ಭಾಗವಹಸಿಬೇಕು. ದೇವಸ್ಥಾನ, ಮಸೀದಿ, ಮಂದಿರ ಕ್ಲೋಸ್ ಇರಲಿದೆ. ಜತೆಗೆ ಯಾವುದೇ ಬಿಎಂಟಿಸಿ, ಮೆಟ್ರೋ ಇರೋದಿಲ್ಲ ಎಂದರು.

  ಎಲ್ಲೆಡೆಯೂ ಪೊಲೀಸ್​​ ಚೆಕ್ ಪೋಸ್ಟ್ ಗಳಿರುತ್ತೆ, ತಪಾಸಣೆ ನಡೀತಿರುತ್ತೆ. ಅವಶ್ಯಕತೆ ಇದ್ದರೆ ಮಾತ್ರ ಬನ್ನಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡ್ತೀನಿ. ಐಟಿ ಬಿಟಿಯವರು ನೈಟ್ ಶಿಫ್ಟ್​ನಲ್ಲಿದ್ದಾಗ ಸ್ಪೆಷಲ್ ಪಾಸ್ ಕೊಡ್ತೇವೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್​ ಮಾತ್ರ ಓಪನ್ ಇರುತ್ತೆ. ಎಲ್ಲರೂ ದೇವರ ಸೇವೆ ಮನೆಯಲ್ಲಿ ಮಾಡ್ಬೇಕು. ಕಂಟೋನ್ಮೆಂಟ್ ಜೋನ್​​ಗಳಲ್ಲಿ ಯಾವುದೇ ಶಾಪ್ ಓಪನ್ ಇರೋದಿಲ್ಲ. ರಾತ್ರಿವೇಳೆ ಏಳು ಗಂಟೆಯಿಂದ ಬೆಳಗ್ಗೆವರೆಗೆ ಕರ್ಪ್ಯೂ ರೀತಿ ಇರುತ್ತೆ ಎಂದು ಹೇಳಿದರು.
  First published: