ಏನಿದು ಕೊರೋನಾ ಸ್ಟೇಜ್ 3?; ಈ ಹಂತಕ್ಕೆ ಹೋಗಲು ಸಜ್ಜಾಗಿದೆಯಾ ಕರ್ನಾಟಕ?

ಕೊರೋನಾ ವೈರಸ್​ ಒಂದು ದೇಶಕ್ಕೆ ಕಾಲಿಟ್ಟ ನಂತರ ಅದನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗುತ್ತದೆ.  ಸೋಂಕು ತಗುಲಿದವರು ಬೇರೆ ರಾಷ್ಟ್ರಗಳಿಂದ ನಮ್ಮ ದೇಶಕ್ಕೆ ಬಂದು ಸೋಂಕು ದೃಢಪಟ್ಟರೆ ಅದನ್ನು ಸ್ಟೇಜ್ 1 ಎಂದು ಪರಿಗಣಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ.24): ದೇಶದಲ್ಲಿ ಕೊರೋನಾ ವೈರಸ್​​​ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ವ್ಯಕ್ತಿ ಕೊರೋನಾ ವೈರಸ್​​ನಿಂದಾಗಿ ಮೃತಪಟ್ಟಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಕೊರೋನಾ ವೈರಸ್​ ಯಾವ ಹಂತದಲ್ಲಿದೆ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಈ ಸ್ಟೋರಿಯಲ್ಲಿದೆ ಉತ್ತರ.

ಕೊರೋನಾ ವೈರಸ್​ ಒಂದು ದೇಶಕ್ಕೆ ಕಾಲಿಟ್ಟ ನಂತರ ಅದನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗುತ್ತದೆ. ಬೇರೆ ರಾಷ್ಟ್ರಗಳಿಂದ ನಮ್ಮ ದೇಶಕ್ಕೆ ಬಂದು ಅವರಲ್ಲಿ ಸೋಂಕು ದೃಢಪಟ್ಟರೆ ಅದನ್ನು ಸ್ಟೇಜ್ 1 ಎಂದು ಪರಿಗಣಿಸಲಾಗುತ್ತದೆ.

ಇನ್ನು, ವಿದೇಶ ಪ್ರವಾಸದಿಂದ ಬಂದ ಒಟ್ಟು ಜನರಲ್ಲಿ 1/3rd ಜನರಿಗೆ ಸೋಂಕು ದೃಢವಾದರೆ - ಸ್ಟೇಜ್ 2 ಎಂದು ಪರಿಗಣಿಸಲಾಗುತ್ತದೆ. ಕೊರೋನಾ ಅಂಟಿದ ವ್ಯಕ್ತಿ ಇರುವ ಸ್ಥಳದ ಸುತ್ತಮುತ್ತ ಸೋಂಕು ವ್ಯಾಪಿಸಿದರೆ ಅದು ಸ್ಟೇಜ್ 3 ಎಂದು ಕರೆಯಲಾಗುತ್ತದೆ. ರಾಜ್ಯ/ದೇಶದ ಬಹುಪಾಲು ಜನಸಂಖ್ಯೆ ಸೋಂಕಿಗೆ ತುತ್ತಾಗಿದ್ದರೆ ಅದನ್ನು ಸ್ಟೇಜ್ 4 ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮುಂಬೈನಲ್ಲಿ ಕೊರೋನಾಗೆ ಮೂರನೇ ಬಲಿ; ದೇಶದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಈಗಿನ ಲಾಕ್​ಡೌನ್ ಏಕೆ ಮುಖ್ಯ?:

15 ದಿನ‌ಗಳ ಕಾಲ ಎಲ್ಲವನ್ನೂ ಸ್ಥಗಿತ ಮಾಡಿದರೆ ಸೋಂಕು ಹರಡುವುದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ವಿಮಾನ ನಿಲ್ದಾಣಗಳನ್ನೇ ಮುಚ್ಚುವ ಮೂಲಕ ಸೋಂಕಿನ ಮೂಲವನ್ನೇ ನಾವು ಕಟ್ ಆಫ್ ಮಾಡಿದಂತಾಗುತ್ತದೆ. ಕೊರೋನಾ ಪ್ರಕರಣ ಹೆಚ್ಚಿರುವ ದೇಶಗಳಿಂದ ಯಾವ ರೋಗಿಯೂ ಬರದಂತೆ ತಡೆದಂತಾಗುತ್ತದೆ.  ಹೀಗೆ ಮಾಡಿದರೆ, ಕೊರೋನಾ 3rd ಸ್ಟೇಜ್​ಗೆ ಹೋಗುವುದನ್ನು ತಡೆಯಬಹುದಾಗಿದೆ.
First published: