Karnataka Lockdown: ಕೊರೊನಾ ಹತೋಟಿಗೆ ಬರಲು ಲಾಕ್‌ಡೌನ್ ಶೇ. 80ರಷ್ಟು ಅನಿವಾರ್ಯ; IISc ಸಲಹೆ

Karnataka Covid-19: ಲಾಕ್‌ಡೌನ್ ಅವಧಿಯಲ್ಲಿ ಕೋವಿಡ್ -19 ಪ್ರಕರಣಗಳು ಕಡಿಮೆಯಾಗಿದ್ದು, ಕರ್ನಾಟಕದಲ್ಲಿ ಲಾಕ್‌ಡೌನ್ ಶೇ. 80ರಷ್ಟು ಪರಿಣಾಮಕಾರಿಯಾಗಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಪ್ರಾಧ್ಯಾಪಕರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಬೆಂಗಳೂರು (ಮೇ 21): ಈಗಾಗಲೇ ಎರಡು ವಾರಗಳ ಕಾಲ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಕೆಂದರೆ ಈ ಹಿಂದೆ ನಿಯಂತ್ರಣದಲ್ಲಿದ್ದ ಕೊರೋನಾ ಸೋಂಕು ಈಗ ಮತ್ತೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಈ ಬಗ್ಗೆ ಅಧ್ಯಯನ ನಡೆಸಿದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಪ್ರಾಧ್ಯಾಪಕರು, ಲಾಕ್‌ಡೌನ್ ಅವಧಿಯಲ್ಲಿ ಕೋವಿಡ್ -19 ಪ್ರಕರಣಗಳು ಕಡಿಮೆಯಾಗಿದ್ದು, ಕರ್ನಾಟಕದಲ್ಲಿ ಲಾಕ್‌ಡೌನ್ ಶೇಕಡಾ 80ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ.


ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಉಲ್ಭಣಗೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೊರೋನಾ ಎರಡನೇ ಅಲೆಯನ್ನು ನಿಲ್ಲಿಸಬೇಕೆಂದರೆ ಲಾಕ್‌ಡೌನ್ ಅವಧಿಯನ್ನು ವಿಸ್ತರಣೆ ಮಾಡಬೇಕೆಂದು IISc ಪ್ರಾಧ್ಯಾಪಕರು ಶಿಫಾರಸು ಮಾಡಿದ್ದಾರೆ.


"ಕೊರೋನಾ ಎರಡನೇ ಅಲೆಯಲ್ಲಿ ಪ್ರತಿದಿನದ ಪ್ರಕರಣಗಳು ಮೇ ತಿಂಗಳ ಮೊದಲ ವಾರದಲ್ಲಿ ತೀವ್ರವಾಗಿತ್ತು. ಆದರೆ ತದನಂತರ ಸಕ್ರಿಯ ಪ್ರಕರಣ ಎರಡನೇ ವಾರದಲ್ಲಿ ಏರಿಕೆಯಾಗಿತ್ತು. ನಾವು ಲಾಕ್‌ಡೌನ್ ತರಹದ ನಿರ್ಬಂಧಗಳು, ಕೋವಿಡ್-ಸೂಕ್ತವಾದ ನಡವಳಿಕೆ ಮತ್ತು ಪರೀಕ್ಷೆಯನ್ನು ಸಡಿಲಿಸಿದರೆ ಈ ಪ್ರಕರಣಗಳನ್ನು ಸ್ಥಳೀಯ ಪ್ರಕರಣಗಳಾಗಿ ಪರಿಣಮಿಸಬಹುದು” ಎಂದು ಗಣೇಶನ್ ಹೇಳಿದರು. ಕೆಲವೇ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಹೆಚ್ಚು ಪರಿಣಾಮಕಾರಿಯಾಗಿತ್ತೆಂದು ಗಣೇಶನ್ ಅಭಿಪ್ರಾಯಪಟ್ಟಿದ್ದಾರೆ. ಮಧ್ಯಪ್ರದೇಶ, ಛತ್ತೀಸ್ಗಢ, ಗುಜರಾತ್, ಸಿಕ್ಕಿಂ, ಹರಿಯಾಣ ಮತ್ತು ತೆಲಂಗಾಣ ಇತ್ಯಾದಿ ರಾಜ್ಯಗಳಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗಿದೆ. ಬಿಹಾರ, ಒಡಿಶಾ, ಆಂಧ್ರಪ್ರದೇಶ, ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಕರ್ನಾಟಕಕ್ಕೆ ಹೋಲಿಸಿದರೆ ಕೊರೋನಾ ಹತೋಟಿಗೆ ತರುವಲ್ಲಿ ಹಿನ್ನೆಡೆಯಾಗಿದೆ.


ಕರ್ನಾಟಕದಲ್ಲಿ ಬೀದರ್, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ ಮುಂತಾದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗಿದ್ದು, ಕೋವಿಡ್ -19 ಹರಡುವಿಕೆಯನ್ನು ತಡೆಯುವಲ್ಲಿ ಲಾಕ್‌ಡೌನ್ ಶೇಕಡಾ 118 ರಷ್ಟು ಪರಿಣಾಮಕಾರಿಯಾಗಿದೆ. ಆದರೆ ಹಾವೇರಿ, ರಾಮನಗರ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಲಾಕ್‌ಡೌನ್ ಯಾವುದೇ ರೀತಿ ಪರಿಣಾಮಕಾರಿಯಾಗಿ ಕಂಡುಬಂದಿಲ್ಲ.


ಇದನ್ನೂ ಓದಿ: Israel- Palestine Conflict: ಇಸ್ರೇಲ್​ನಿಂದ ಗಾಜಾದಲ್ಲಿ ಕದನವಿರಾಮ ಘೋಷಣೆ; ಪ್ಯಾಲೆಸ್ತೀನ್​ನ ಜಯ ಎಂದ ಹಮಾಸ್

ರಾಜ್ಯದಲ್ಲಿ ಜನರಿಗೆ ಕೊರೋನಾ ಪರೀಕ್ಷೆಯನ್ನು ಹೆಚ್ಚಿಸಿದ್ದರೆ ಲಾಕ್‌ಡೌನ್ ಹೆಚ್ಚು ಪರಿಣಾಮಕಾರಿಯಾಗಬಹುದೆಂದು ದಿ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಪ್ರಾಧ್ಯಾಪಕ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಿರಿಧರ ಬಾಬು ಹೇಳಿದ್ದಾರೆ. "ಸಂಭವನೀಯ ಪ್ರತಿಯೊಂದು ಪ್ರಕರಣವನ್ನು ಕಂಡುಹಿಡಿಯುವ ಮತ್ತು ಅವುಗಳನ್ನು ಪ್ರತ್ಯೇಕಿಸುವ ಅವಶ್ಯಕತೆಯಿದೆ. ಲಾಕ್‌ಡೌನ್ ಅನ್ನು ಪರಿಚಯಿಸುವ ಸಂಪೂರ್ಣ ಉದ್ದೇಶವಾಗಿದೆ ” ಎಂದು ಅವರು ಹೇಳಿದರು. “ಬಿಬಿಎಂಪಿ ದಿನಕ್ಕೆ 40,000 ಮಾದರಿಗಳನ್ನು ಪರೀಕ್ಷಿಸುತ್ತಿದೆ. ತಾತ್ತ್ವಿಕವಾಗಿ, ಇದು ಒಂದು ಲಕ್ಷ ಆಗಿರಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಅವರು ಸಲಹೆ ನೀಡಿದ್ದಾರೆ.


ಮತ್ತೊಂದೆಡೆ, ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಶನಿವಾರ ಸಭೆ ನಡೆಸುವ ಸಾಧ್ಯತೆ ಇದೆ. ಕ್ಯಾಬಿನೆಟ್‌ನಲ್ಲಿದ್ದ ಕೆಲವು ಮಂತ್ರಿಗಳು ಲಾಕ್‌ಡೌನ್ ಪರವಾಗಿದ್ದಾರೆಂದು ಹೇಳಲಾಗಿದೆ.


IIsc, ಮತ್ತು ಇತರ ಸಂಸ್ಥೆಗಳಿಂದ ಹಮ್ಮಿಕೊಂಡ ವಿವರವಾದ ಕೋವಿಡ್ ಯೋಜನೆಗಳು:


ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ‘ನಿಶಾಂಕ್’ ಅವರು IISc ಮತ್ತು ಇತರ ಸಂಸ್ಥೆಗಳ ನಿರ್ದೇಶಕರೊಂದಿಗೆ ಸಭೆ ನಡೆಸಿದರು. ಅವರು ತಮ್ಮ ರಾಜ್ಯಗಳ ಪರಿಸ್ಥಿತಿಯ ಅರಿವು ಮತ್ತು ನಿರ್ವಹಣೆಗಾಗಿ ಸ್ಥಳೀಯ ಆಡಳಿತಕ್ಕೆ ವಿಸ್ತರಿಸಿದ ತಮ್ಮ ಕೋವಿಡ್ -19 ನಿರ್ವಹಣಾ ತಂತ್ರ ಮತ್ತು ಸ್ವಯಂಪ್ರೇರಿತ ಸೇವೆಗಳ ಬಗ್ಗೆ ವಿವರಣೆಯನ್ನು ಹಂಚಿಕೊಂಡರು.


ಇದನ್ನೂ ಓದಿ: Tauktae Cyclone: ಮುಂಬೈನಲ್ಲಿ ಬಾರ್ಜ್ ಮುಳುಗಿ 24 ಜನ ನಾಪತ್ತೆ; ಸಾವಿನ ಸಂಖ್ಯೆ 51ಕ್ಕೆ ಏರಿಕೆ

ಆರೋಗ್ಯ ಕೇಂದ್ರಗಳಲ್ಲಿ ಕೈಗೊಂಡ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆಯೂ ಸಂಸ್ಥೆಗಳು ತಿಳಿಸಿವೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಈ ಸಂಸ್ಥೆಗಳು ಕೈಗೊಂಡ ಸಂಶೋಧನೆಯ ಕುರಿತು ಚರ್ಚಿಸಲಾಯಿತು.


ಕೋವಿಡ್ ಪ್ರವೃತ್ತಿಗಳನ್ನು ಕಂಡುಕೊಳ್ಳಲು ಕಡಿಮೆ ವೆಚ್ಚದ ಆರ್‌ಟಿ-ಪಿಸಿಆರ್ ಯಂತ್ರಗಳು, ಕಿಟ್‌ಗಳು, ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅವುಗಳನ್ನು ರಾಜ್ಯ ಆರೋಗ್ಯ ಇಲಾಖೆಗಳ ವಿಲೇವಾರಿಯಲ್ಲಿ ಕಂಡುಕೊಂಡ ಸಕರಾತ್ಮಕ ಪ್ರಗತಿಯ ಅಂಕಿ ಅಂಶಗಳ ಬಗ್ಗೆ ಸಚಿವರು ಶ್ಲಾಘಿಸಿದರು.
ಈಗಾಗಲೇ IISc, ಮತ್ತು ಇತರ ಸಂಸ್ಥೆಗಳಿಂದ ಹಮ್ಮಿಕೊಂಡಿರುವ ಕೊರೋನಾ ಬಗೆಗಿನ ಯೋಜನೆಗಳು ಸರ್ಕಾರದ ಗಮನ ಸೆಳೆದಿದ್ದು, ಮುಂಬರುವ ದಿನಗಳಲ್ಲಿ ಕೊರೋನಾ ಹತೋಟಿ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.


Published by:Sushma Chakre
First published: