• Home
 • »
 • News
 • »
 • coronavirus-latest-news
 • »
 • ಲಾಕ್​ಡೌನ್​ನಿಂದ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ 1,431 ಕೋಟಿ ರೂ. ನಷ್ಟ; 1.5 ಲಕ್ಷ ಸಿಬ್ಬಂದಿಗೆ ನಿರುದ್ಯೋಗ ಭೀತಿ

ಲಾಕ್​ಡೌನ್​ನಿಂದ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ 1,431 ಕೋಟಿ ರೂ. ನಷ್ಟ; 1.5 ಲಕ್ಷ ಸಿಬ್ಬಂದಿಗೆ ನಿರುದ್ಯೋಗ ಭೀತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Lockdown News: ಲಾಕ್​ಡೌನ್​ ಬಳಿಕ ಬೆಂಗಳೂರಿನಲ್ಲಿರುವ ಎಲ್ಲ ಹೋಟೆಲ್​, ರೆಸ್ಟೋರೆಂಟ್​ಗಳನ್ನು ಮುಚ್ಚಿರುವುದರಿಂದ ಪ್ರತಿ ದಿನಕ್ಕೆ 25 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್​ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.

 • Share this:

  ಬೆಂಗಳೂರು (ಮೇ 12): ಲಾಕ್​ಡೌನ್​ನಿಂದಾಗಿ ದೇಶಾದ್ಯಂತ ಐಟಿ-ಬಿಟಿ ಕಂಪನಿಗಳು, ಉದ್ಯಮಗಳು ಸೇರಿದಂತೆ ಹೋಟೆಲ್, ಅಂಗಡಿ ವ್ಯಾಪಾರ ಮುಂತಾದ ಎಲ್ಲ ಕ್ಷೇತ್ರಗಳಿಗೂ ಭಾರೀ ನಷ್ಟ ಉಂಟಾಗಿದೆ. ದಿನಗೂಲಿ ನೌಕರರು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ಈ ನಡುವೆ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೂ ಭಾರೀ ಹೊಡೆತ ಬಿದ್ದಿದ್ದು, ಕಳೆದ 54 ದಿನಗಳಲ್ಲಿ 1,431 ಕೋಟಿ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ. ಇದರಿಂದಾಗಿ ಲಾಕ್​ಡೌನ್​ ಬಳಿಕ ಬೆಂಗಳೂರಿನ ಹೋಟೆಲ್​, ರೆಸ್ಟೋರೆಂಟ್​ಗಳ ಒಂದೂವರೆ ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

  ಲಾಕ್​ಡೌನ್​ನಿಂದಾಗಿ ಎಲ್ಲ ಹೋಟೆಲ್​, ರೆಸ್ಟೋರೆಂಟ್​ಗಳೂ ಮುಚ್ಚಲಾಗಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಹೋಟೆಲ್​ಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಪಾರ್ಸಲ್ ವ್ಯವಸ್ಥೆಗೆ ಮಾತ್ರ ಅನುಮತಿ ನೀಡಲಾಗಿದೆ. ಹೀಗಾಗಿ, ಕೊರೋನಾ ತಗುಲುವ ಭೀತಿಯಿಂದ ಜನರು ಹೋಟೆಲ್​ಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿರುವುದರಿಂದ ಹಾಗೂ ಒಂದೂವರೆ ತಿಂಗಳಿಂದ ಯಾವುದೇ ವಹಿವಾಟು ಇಲ್ಲದ ಕಾರಣ ಹೋಟೆಲ್​ ಮತ್ತು ರೆಸ್ಟೋರೆಂಟ್​ಗಳ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಲಾಕ್​ಡೌನ್​ ನಂತರ ಕೆಲವೇ ಸಿಬ್ಬಂದಿಗಳನ್ನು ಇಟ್ಟುಕೊಂಡು ಹೋಟೆಲ್​ ನಡೆಸಲು ಮಾಲೀಕರು ನಿರ್ಧರಿಸಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

  ಇದನ್ನೂ ಓದಿ: ಊರಿನತ್ತ ಹೊರಟ ಗರ್ಭಿಣಿಗೆ ರಸ್ತೆಬದಿಯಲ್ಲೇ ಹೆರಿಗೆ; ಕಂದಮ್ಮನನ್ನು ಹೊತ್ತು 160 ಕಿ.ಮೀ. ನಡೆದ ಮಹಿಳೆ!

  ಬೆಂಗಳೂರಿನಲ್ಲಿ ಸುಮಾರು 24,500 ನೋಂದಾಯಿತ ರೆಸ್ಟೋರೆಂಟ್​ ಮತ್ತು ಹೋಟೆಲ್​ಗಳಿವೆ. ಇವುಗಳಲ್ಲಿ ಸುಮಾರು 4.5 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ನೀಡಿರುವ ಮಾಹಿತಿ ಪ್ರಕಾರ 1.5 ಲಕ್ಷ ಹೋಟೆಲ್ ಮತ್ತು ರೆಸ್ಟೋರೆಂಟ್​ ಉದ್ಯೋಗಿಗಳ ಕೆಲಸ ಹೋಗುವ ಸಾಧ್ಯತೆ ಹೆಚ್ಚಾಗಿದೆ.

  ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದ ಉದ್ಯೋಗಿಗಳಿಗೂ ಆತಂಕ ಶುರುವಾಗಿದೆ. ಪ್ರವಾಸಿಗರ ಕೊರತೆಯಿಂದ ಪ್ರವಾಸೋದ್ಯಮ ಕ್ಷೇತ್ರ ಕೂಡ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಮೇ 18ರ ಬಳಿಕ ಲಾಕ್​ಡೌನ್​ ಮುಂದುವರಿಕೆಯಾಗದಿದ್ದರೆ ಹೋಟೆಲ್​, ರೆಸ್ಟೋರೆಂಟ್​ಗಳನ್ನು ತೆರೆಯಲಾಗುವುದು. ನಮ್ಮ 4.5 ಲಕ್ಷ ಜನರಲ್ಲಿ ಕಡಿಮೆಯೆಂದರೂ 1.5 ಲಕ್ಷ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ಯೋಚಿಸಲಾಗಿದೆ. ಲಾಕ್​ಡೌನ್​ ಯಾವಾಗ ಮುಗಿಯುತ್ತದೆ ಎಂಬ ಬಗ್ಗೆ ಸರ್ಕಾರ ನಿರ್ಧರಿಸಲಿದೆ. ಹೋಟೆಲ್​ ಉದ್ಯಮ ಮಾಮೂಲಿನಂತೆ ಕಾರ್ಯ ನಿರ್ವಹಿಸಲು ಇನ್ನೂ 100ರಿಂದ 120 ದಿನಗಳು ಬೇಕಾಗುತ್ತದೆ ಎಂದು ಬೃಹತ್ ಬೆಂಗಳೂರು ಹೋಟೆಲ್​ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.

  ಇದನ್ನೂ ಓದಿ: Vande Bharat Mission: ಇಂದು ಸಂಜೆ ದುಬೈ, ಸಿಂಗಾಪುರದಿಂದ ಕರ್ನಾಟಕಕ್ಕೆ ಭಾರತೀಯರು ವಾಪಾಸ್​

  ಲಾಕ್​ಡೌನ್​ ಬಳಿಕ ಬೆಂಗಳೂರಿನಲ್ಲಿರುವ ಎಲ್ಲ ಹೋಟೆಲ್​, ರೆಸ್ಟೋರೆಂಟ್​ಗಳನ್ನು ಮುಚ್ಚಿರುವುದರಿಂದ ಪ್ರತಿ ದಿನಕ್ಕೆ 25 ಕೋಟಿ ರೂ. ನಷ್ಟವಾಗುತ್ತಿದೆ. ಇದು ಅಂದಾಜು ಮೊತ್ತವಷ್ಟೇ. ವಾಸ್ತವವಾಗಿ ಇದಕ್ಕಿಂತಲೂ ಹೆಚ್ಚು ನಷ್ಟವಾಗುತ್ತಿದೆ. ಈ ನಷ್ಟವನ್ನು ತುಂಬಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗುತ್ತದೆ ಎಂದು ಪಿ.ಸಿ. ರಾವ್ ಮಾಹಿತಿ ನೀಡಿದ್ದಾರೆ.

  First published: