HOME » NEWS » Coronavirus-latest-news » KARNATAKA LOCKDOWN KARNATAKA CM BS YEDIYURAPPA DENIED SPECIAL PACKAGE ALLOCATION AMID OF LOCKDOWN SCT

Karnataka Lockdown: ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಿಸುವ ಚಿಂತನೆ ಇಲ್ಲ; ಸಿಎಂ ಯಡಿಯೂರಪ್ಪ ಸ್ಪಷ್ಟನೆ

CM BS Yediyurappa: ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಜನರು ನಮಗೆ ಸಹಕಾರ ಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

news18-kannada
Updated:May 11, 2021, 1:58 PM IST
Karnataka Lockdown: ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಿಸುವ ಚಿಂತನೆ ಇಲ್ಲ; ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಮೇ 11): ಕರ್ನಾಟಕದಲ್ಲಿ ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆಯಲ್ಲಿ ಬಡ ವರ್ಗಕ್ಕೆ, ಕೂಲಿ-ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಿರೋಧ ಪಕ್ಷಗಳು ಸೇರಿದಂತೆ ಸಾರ್ವಜನಿಕರಿಂದಲೂ ಒತ್ತಾಯಗಳು ಕೇಳಿಬರುತ್ತಿವೆ. ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡೊ ಬಗ್ಗೆ ಯಾವುದೇ ಚಿಂತನೆ ಇಲ್ಲ. ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಜನರು ನಮಗೆ ಸಹಕಾರ ಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಗೆ ಬರುತ್ತಿದೆ. ಆದರೂ ಭಾರತದಲ್ಲಿ ಇರುವ ಕೊರೋನಾ ಕೇಸ್​ಗಳ ಪೈಕಿ ಕರ್ನಾಟಕದಲ್ಲೇ ಹೆಚ್ಚಿದೆ. ಜನ ಮಾಸ್ಕ್ ಹಾಕಿ ಅಂತರ ಕಾಯ್ದುಕೊಳ್ಳಬೇಕು. ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ ಓಡಾಡಬೇಕು. ಜನರ ಸಹಕಾರ ಇದ್ದಾಗ ಮಾತ್ರ ಕೊರೋನಾ ನಿಯಂತ್ರಣ ಮಾಡಬಹುದು. ಜೆಮ್ ಶಡ್ ಪುರದಿಂದ ಆಕ್ಸಿಜನ್ ಬಂದಿದೆ. ಸ್ವತಃ ಪ್ರಧಾನಿ ಮೋದಿಯವರೇ ನನ್ನ ಜೊತೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಎಲ್ಲಾ ಸಹಕಾರ ಕೊಡ್ತಿದ್ದಾರೆ. ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಟೇಟ್ ವಾರ್ ರೂಂ, ಆರೋಗ್ಯ ಸೌಧ ಹಾಗೂ ಮಲ್ಲೇಶ್ವರದ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ. ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ವಾರ್ ರೂಂ ಕೆಲಸ ಮಾಡುತ್ತಿವೆ. ನಾನು ಸಲಹೆ ನೀಡಿದ್ದೇನೆ. ಅನಗತ್ಯವಾಗಿ ಮನೆಗೆ ಹೋಗಿ ಟ್ರೀಟ್‌ಮೆಂಟ್ ತೆಗೆದುಕೊಳ್ಳದೆ ಆಸ್ಪತ್ರೆಯಲ್ಲಿ ಇದ್ದಾರೆ. ಹೀಗಾಗಿ ಇದನ್ನು ನಿಯಂತ್ರಣ ಮಾಡೋಕೆ ಹೇಳಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: Indira Canteen: ಕರ್ನಾಟಕ ಲಾಕ್​ಡೌನ್; ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟ-ತಿಂಡಿ ಲಭ್ಯ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್  ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೊರೋನಾ ಬಗ್ಗೆ ದೆಹಲಿಯಲ್ಲಿ ಏನೇನು ಸಹಕಾರ ಬೇಕು, ಇಲ್ಲಿನ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ನನ್ನನ್ನು ಭೇಟಿಯಾಗಿದ್ದರು. ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಇಂದು ಈ ಎಲ್ಲಾ ವಿಚಾರಗಳ ಕುರಿತು ಚರ್ಚೆ ಮಾಡಿದೆವು ಎಂದು ತಿಳಿಸಿದ್ದಾರೆ.

ವಾರ್ ರೂಮ್ ವೀಕ್ಷಣೆ ಮಾಡಿದ್ದೇನೆ. ದೇಶದಲ್ಲೇ ಈ ರೀತಿ ವಾರ್ ರೂಮ್ ಎಲ್ಲೂ ಇಲ್ಲ. ಕೆಲವರು ಹುಷಾರಾಗಿ ಇಪ್ಪತ್ತು ದಿನ ಆದರೂ ಬೆಡ್ ಖಾಲಿ ಮಾಡಿಲ್ಲ. ಆ ರೀತಿ 503 ಜನ ಇದ್ದಾರೆ. ಆರಾಮಾದವರು ಬೆಡ್ ಬಿಟ್ಟು ಇನ್ನೊಬ್ಬರಿಗೆ ಸಹಕಾರ ನೀಡಬೇಕು. ಮನೆಗೆ ಹೋಗಿ ಎಂದು ವೈದ್ಯರು ಹೇಳಿದರೂ ಕೆಲವರು ಹೋಗೋದಿಲ್ಲ. ಈಗ ಜಾಸ್ತಿ ದಿನಗಳಿಂದ ಇರುವವರಿಗೆ ಹೊರಡಲು ಸೂಚನೆ ನೀಡಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
Youtube Video
ಕರ್ನಾಟಕದಲ್ಲಿ ಕೊರೋನಾ ಲಸಿಕೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಯಾರಿಗೂ ಗೊಂದಲ ಬೇಡ, ಆತಂಕ ಬೇಡ. ಆಸ್ಪತ್ರೆ ಮುಂದೆ ಹೋಗಿ ವ್ಯಾಕ್ಸಿನ್ ಗಾಗಿ ಬೊಬ್ಬೆ ಹೊಡೆಯಬೇಡಿ. ಲಸಿಕೆ ಬರುತ್ತಿದ್ದಂತೆ ಎಲ್ಲರಿಗೂ ಕೊಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
Published by: Sushma Chakre
First published: May 11, 2021, 1:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories