ಲಾಕ್​ಡೌನ್​ನಿಂದ ಕಂಗೆಟ್ಟವರನ್ನು ಐಎಎಸ್, ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಊರಿಗೆ ಕಳುಹಿಸಲು ಸರ್ಕಾರ ನಿರ್ಧಾರ

ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರನ್ನು ಕರೆತರುವ ಜವಾಬ್ದಾರಿಯನ್ನು ಕೂಡ ನೊಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ. ಹಾಗೇ, ಆಯಾ ರಾಜ್ಯಗಳ ಗಡಿ ಭಾಗದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಂಗಳೂರು (ಮೇ 1): ಲಾಕ್​ಡೌನ್​ನಿಂದಾಗಿ ಕರ್ನಾಟಕದಲ್ಲಿ ಸಿಲುಕಿಕೊಂಡಿದ್ದ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಕೆಲಸವೂ ಇಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ ಪರದಾಡುತ್ತಿದ್ದಾರೆ. ಉಳಿದುಕೊಳ್ಳಲು ಜಾಗ, ಒಂದು ಹೊತ್ತಿನ ಊಟಕ್ಕೂ ಹೆಣಗಾಡುತ್ತಿದ್ದ ಪರ ರಾಜ್ಯಗಳ ಕಾರ್ಮಿಕರನ್ನು ವಾಪಾಸ್ ಅವರ ಊರಿಗೆ ಕಳುಹಿಸಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ.

ಬೇರೆ ರಾಜ್ಯಗಳ ಕಾರ್ಮಿಕರ ಜೊತೆಗೆ ಹೊರ ರಾಜ್ಯಗಳ ವಿದ್ಯಾರ್ಥಿಗಳನ್ನು ಕೂಡ ಸುರಕ್ಷಿತವಾಗಿ ಅವರ ಊರಿಗೆ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. 41 ದಿನಗಳ ಲಾಕ್​ಡೌನ್​ ಅವಧಿ ಮುಗಿಯಲು ಕೇವಲ 2 ದಿನ ಬಾಕಿ ಇದೆ. ಹೀಗಾಗಿ, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲು ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಪ್ರತಿರಾಜ್ಯಕ್ಕೂ ಸಂಬಂಧಿಸಿದಂತೆ ಓರ್ವ ಐಎಎಸ್‌, ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಆ ಅಧಿಕಾರಿಗಳು ಸಂಬಂಧಪಟ್ಟ ರಾಜ್ಯದ ಅಧಿಕಾರಿಗಳ ಜೊತೆ ಚರ್ಚಿಸಿ ಕಾರ್ಮಿಕರು,‌ ವಿದ್ಯಾರ್ಥಿಗಳು, ಪ್ರವಾಸಿಗರು ತಮ್ಮ ರಾಜ್ಯಗಳಿಗೆ ತೆರಳಲು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ KSRTC, NERTC, NWRTC ಬಸ್​ಗಳನ್ನು ಒದಗಿಸಲಾಗುವುದು.

ಕೇಂದ್ರಾಡಳಿತ ಪ್ರದೇಶಗಳಿಗೆ ರಾಜಕುಮಾರ್ ಖತ್ರಿ -ಐಎಎಸ್‌, ಆರುಣ್ ಚಕ್ರವರ್ತಿ- ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ. ಹೊರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜುನಾಥ್ ಪ್ರಸಾದ್ -ಐಎಎಸ್‌, ಪಿ.ಎಸ್. ಸಂದು- ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ. ನವದೆಹಲಿಗೆ ಕಪಿಲ್ ಮೋಹನ್ - ಐಎಎಸ್‌, ಪಿ ಎಸ್ ಸಂದು- ಐಪಿಎಸ್, ರಾಜಸ್ಥಾನಕ್ಕೆ ಮನೋಜ್ ಕುಮಾರ್ ಮೀನಾ- ಐಎಎಸ್‌, ರಾಮ್ ನಿವಾಸ್ ಸೆಫಟ್- ಐಪಿಎಸ್, ಉತ್ತರ ಪ್ರದೇಶಕ್ಕೆ ತುಷಾರ್ ಗಿರಿನಾಥ್- ಐಎಎಸ್‌, ಸುನೀಲ್ ಅಗರವಾಲ್- ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ: ರಿಲಾಯನ್ಸ್​ 4ನೇ ತ್ರೈಮಾಸಿಕ ವರದಿ ಪ್ರಕಟ; ಇಲ್ಲಿವೆ ಹೈಲೆಟ್ಸ್​​

ಬಿಹಾರಕ್ಕೆ ಅಜುಂ ಪರ್ವೇಜ್- ಐಎಎಸ್‌, ವಿಕಾಸ್ ಕುಮಾರ್ ವಿಕಾಸ್ -ಐಪಿಎಸ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಿಗೆ ಮನೋಜ್ ಜೈನ್ -ಐಎಎಸ್‌, ನಿಶಾ ಜೇಮ್ಸ್ -ಐಪಿಎಸ್, ಜಾರ್ಖಂಡ್​ಗೆ ಉಜ್ವಲ್ ಕುಮಾರ್ ಘೋಷ್- ಐಎಎಸ್‌, ಸೀಮಂತ್ ಕುಮಾರ್ ಸಿಂಗ್ -ಐಪಿಎಸ್, ಒಡಿಶಾಗೆ ಡಾ. ರವಿಶಂಕರ್ -ಐಎಎಸ್‌, ಕೆ. ರಾಮಚಂದ್ರರಾವ್ -ಐಪಿಎಸ್, ಮಹಾರಾಷ್ಟ್ರಕ್ಕೆ ಗುಂಜನ್ ಕೃಷ್ಣ -ಐಎಎಸ್‌, ಪಾಟೀಲ್ ವಿನಾಯಕ್ ವಸಂತರಾವ್ - ಐಪಿಎಸ್, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಡಾ. ಎನ್​.ವಿ. ಪ್ರಸಾದ್ -ಐಎಎಸ್‌, ಮಾಲಿನಿ ಕೃಷ್ಣಮೂರ್ತಿ - ಐಪಿಎಸ್, ತಮಿಳುನಾಡಿಗೆ ವಿ. ಪೊನ್ನುರಾಜು - ಐಎಎಸ್‌, ಹರಿಶೇಖರನ್- ಐಪಿಎಸ್, ಕೇರಳಕ್ಕೆ ಎಂ.ಟಿ. ರಾಜು -ಐಎಎಸ್‌, ಸಿಮಿ ಮರಿಯಂ ಜಾರ್ಜ್ -ಐಪಿಎಸ್ ಅವರನ್ನು ನೊಡಲ್ ಅಧಿಕಾರಿಗಳಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.

ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರನ್ನು ಕರೆತರುವ ಜವಾಬ್ದಾರಿಯನ್ನು ಕೂಡ ನೊಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ. ಹಾಗೇ, ಆಯಾ ರಾಜ್ಯಗಳ ಗಡಿ ಭಾಗದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಲಾಕ್ ಡೌನ್​ನಿಂದ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಕೂಲಿ ಕಾರ್ಮಿಕರಿಗೆ ಪ್ರಯಾಣದ ವ್ಯವಸ್ಥೆ ಕಲ್ಪಿಸಿರುವುದರಿಂದ ಅವರೆಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಮೇ 5ಕ್ಕೆ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ

ಬಸ್​ಗಳಲ್ಲಿ ಊರು ತಲುಪಿದ ಉತ್ತರ ಕರ್ನಾಟಕ ಮಂದಿ:

ಜೊತೆಗೆ, ಕೊಪ್ಪಳ, ಬಾಗಲಕೋಟೆ, ಯಾದಗಿರಿ, ಗುಲ್ಬರ್ಗಾ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಾರ್ಮಿಕರಿಗೆ ಮನೆಗೆ ಹೋಗಲು ನಿನ್ನೆ ರಾತ್ರಿ  ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಇಲಾಖೆಯಿಂದ ಕೆಎಸ್​ಆರ್​​ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೀದರ್ ,ಯಾದಗಿರಿಗೆ ಹೋಗಲು ಮೂವತ್ತು ಮಂದಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ಕೊಟ್ಟು ಸಾಮಾಜಿಕ ಅಂತರದಲ್ಲಿ ಪ್ರಯಾಣ ಮಾಡಲು ಸೂಚಿಸಲಾಗಿದೆ. ಬೆಂಗಳೂರಿನಿಂದ ಹೊರಡುವ ಎಲ್ಲಾ ಬಸ್​ಗಳು ಮೊದಲು ಆಯಾ ಜಿಲ್ಲಾಡಳಿತ ತಲುಪಲಿದೆ. ನಂತರ ಅಲ್ಲಿಂದ ಜನ ತಮ್ಮ ಮನೆ ತಲುಪಲು ಸೂಚನೆ ನೀಡಲಾಗಿದೆ.

 
First published: