ಕೂಲಿ ಕಿತ್ತುಕೊಂಡ ಕೊರೋನಾ ; ಚಿಕಿತ್ಸೆಗೂ ಹಣವಿಲ್ಲದೆ ಕುಟುಂಬದ ಪರದಾಟ...!

ಕುಟುಂಬ ತಮ್ಮ ಬುದ್ಧಿಮಾಂದ್ಯ ಮಗನಿಗೆ ಚಿಕಿತ್ಸೆಗೂ ಹಣವಿಲ್ಲದೆ ಕಣ್ಣೀರು ಸುರಿಸುವಂತಾಗಿದೆ. ಕೂಲಿಯನ್ನೇ ನಂಬಿ ಅದರ ಆಸರೆಯಲ್ಲೇ ಬದುಕುತ್ತಿದ್ದ ಹರೀಶ್ ಅವರ ಕುಟುಂಬಕ್ಕೆ ಈಗ ಕೂಲಿಯೂ ಇಲ್ಲದೆ ಕಂಗಾಲಾಗಿದೆ

ಮಗನಿಗೆ ಊಟ ಮಾಡಿಸುತ್ತಿರುವ ತಾಯಿ

ಮಗನಿಗೆ ಊಟ ಮಾಡಿಸುತ್ತಿರುವ ತಾಯಿ

 • Share this:
  ಕೊಡಗು(ಮೇ.07): ಕೊರೋನಾ ಮಹಾಮಾರಿ ಸಾವಿರಾರು ಜನರ ಪ್ರಾಣ ಕಿತ್ತುಕೊಂಡಿದ್ದು ಅಷ್ಟೇ ಅಲ್ಲ. ಜೊತೆಗೆ ಲಕ್ಷಾಂತರ ಬಡ ಜನರ ಬದುಕನ್ನು ಕಿತ್ತುಕೊಂಡಿದೆ. ಕೊರೋನಾ  ನಿಯಂತ್ರಿಸಲು ಲಾಕ್‍ಡೌನ್ ಮಾಡಿದ್ದರ ಪರಿಣಾಮ ಲಕ್ಷಾಂತರ ಬಡ ಕುಟುಂಬಗಳು ಕನಿಷ್ಠ ಸೌಲಭ್ಯಗಳಿಲ್ಲದೆ ಪಡಬಾರದ ಕಷ್ಟ ಅನುಭವಿಸುವಂತಾಗಿದೆ.

  ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಅವರೆಗುಂದದ ಕುಟುಂಬವೊಂದು ಕೊರೋನಾ ಮಹಾಮಾರಿಯಿಂದ ಕೂಲಿಯೂ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಗ್ರಾಮದ ಹರೀಶ್, ಲೀಲಮ್ಮ ದಂಪತಿ ಕುಟುಂಬ ತಮ್ಮ ಬುದ್ಧಿಮಾಂದ್ಯ ಮಗನಿಗೆ ಚಿಕಿತ್ಸೆಗೂ ಹಣವಿಲ್ಲದೆ ಕಣ್ಣೀರು ಸುರಿಸುವಂತಾಗಿದೆ. ಕೂಲಿಯನ್ನೇ ನಂಬಿ ಅದರ ಆಸರೆಯಲ್ಲೇ ಬದುಕುತ್ತಿದ್ದ ಹರೀಶ್ ಅವರ ಕುಟುಂಬಕ್ಕೆ ಈಗ ಕೂಲಿಯೂ ಇಲ್ಲದೆ ಕಂಗಾಲಾಗಿದೆ.

  ಚಿಕ್ಕಪುಟ್ಟ ಕೂಲಿ ಕೆಲಸ ಮಾಡಿಕೊಂಡು ಸಂಸಾರ ದೂಡುತ್ತಿದ್ದ ಮನೆಯ ಯಜಮಾನ ಹರೀಶ್ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಮನೆಯ ಸ್ಥಿತಿ ತೀರ ಹದಗೆಟ್ಟಿದ್ದು, ಒಂದೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

  ಇದನ್ನೂ ಓದಿ : ಜಿಮ್ಸ್ ಎಡವಟ್ಟು - ಬಸವೇಶ್ವರ ಆಸ್ಪತ್ರೆಗೆ ಆಪತ್ತು ; 83 ಜನ ಸಿಬ್ಬಂದಿ ಕ್ವಾರಂಟೈನ್​​ಗೆ

  ನ್ಯಾಯಬೆಲೆ ಅಂಗಡಿಯಿಂದ ಎರಡು ತಿಂಗಳಿಗೆ 20 ಕೆ.ಜಿ. ಅಕ್ಕಿಕೊಟ್ಟಿದ್ದಾರೆ. ಇದನ್ನು ಬಿಟ್ಟರೆ ಮತ್ಯಾವ ಕನಿಷ್ಟ ಸೌಲಭ್ಯವೂ ಇಲ್ಲದೆ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದೆ. ಬುದ್ಧಿಮಾಂದ್ಯ ಮಗನನ್ನು ವೃದ್ಧ ತಾಯಿ ಲೀಲಮ್ಮ ನೋಡಿಕೊಳ್ಳಬೇಕಾಗಿದೆ. ಕೊರೋನಾದಿಂದ ಕೂಲಿಯನ್ನೂ ಕಳೆದುಕೊಂಡಿರುವ ಕುಟುಂಬ ನಿತ್ಯ ಬದುಕಿಗೆ ನರಕಯಾತನೆ ಅನುಭವಿಸುವಂತಾಗಿದೆ.
  First published: