ಬೆಂಗಳೂರಿನ ಚಿಕ್ಕಬಾಣಾವರದಿಂದ ಉತ್ತರ ರಾಜ್ಯಗಳಿಗೆ ಇಂದು ಒಟ್ಟು 6,160 ವಲಸಿಗರು ಪ್ರಯಾಣ

Karnataka Lockdown Extension: ಬೆಂಗಳೂರಿನ ವಿವಿಧೆಡೆ ನೆಲೆಸಿರುವ ಕಾರ್ಮಿಕರನ್ನು ಬಿಬಿಎಂಪಿ ಅಧಿಕಾರಿಗಳು ಬಿಎಂ‌ಟಿಸಿ ಬಸ್ ಮುಖಾಂತರ ಕರೆತರಲಿದ್ದು, ಎಲ್ಲರಿಗೂ ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು.

news18-kannada
Updated:May 18, 2020, 5:13 PM IST
ಬೆಂಗಳೂರಿನ ಚಿಕ್ಕಬಾಣಾವರದಿಂದ ಉತ್ತರ ರಾಜ್ಯಗಳಿಗೆ ಇಂದು ಒಟ್ಟು 6,160 ವಲಸಿಗರು ಪ್ರಯಾಣ
ರೈಲು ನಿಲ್ದಾಣದ ಬಳಿ ಕಾರ್ಮಿಕರು
  • Share this:
ಬೆಂಗಳೂರು(ಮೇ 18): ಎಂದಿನಂತೆ ಇಂದೂ ಸಹ ಉತ್ತರ ರಾಜ್ಯಗಳಿಗೆ ವಲಸಿಗರು ಪ್ರಯಾಣ ಬೆಳೆಸಲಿದ್ದು ಬೆಂಗಳೂರಿನ ಚಿಕ್ಕಬಾಣಾವರದಿಂದ ಉತ್ತರ ರಾಜ್ಯಗಳಿಗೆ ಇಂದು ಒಟ್ಟು 6160 ಜನ ವಲಸಿಗರು ಪ್ರಯಾಣ ಬೆಳಸಲಿದ್ದಾರೆ.  ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ದಿನಗೂಲಿ ಕಾರ್ಮಿಕರಿಗೆ ತಮ್ಮ ಸ್ವ ಗ್ರಾಮಗಳಿಗೆ ತೆರಳಲು ಕೇಂದ್ರ ಸರ್ಕಾರ ಶ್ರಮಿಕ್ ರೈಲು ಯೋಜನೆಯಡಿ ಅವಕಾಶ ಕಲ್ಪಿಸಿಕೊಟ್ಟಿದ್ದು, ಉಭಯ ರಾಜ್ಯಗಳ ಒಪ್ಪಿಗೆಯ ಮೇರೆಗೆ ರಾಜ್ಯದಿಂದ ರಾಜ್ಯಕ್ಕೆ ವಲಸೆ ಕಾರ್ಮಿಕರು ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಈಗಾಗಲೇ ಸಾವಿರಾರು ಜನ ವಲಸಿಗ ಕಾರ್ಮಿಕರು ಉತ್ತರ ಭಾರತದ ತಮ್ಮ ತಾಯ್ನಾಡಿಗೆ ತೆರಳಿದ್ದು ಇಂದು ಸಹ 6,160 ಜನ ವಲಸಿಗರು ಪ್ರಯಾಣ ಬೆಳೆಸಲಿದ್ದಾರೆ.

ಬೆಂಗಳೂರಿನ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಿಂದ ಸಂಜೆ 4ಕ್ಕೆ ಮೊದಲ ರೈಲು ಉತ್ತರ ಪ್ರದೇಶದ ಲಕ್ನೋಗೆ‌ ಹೊರಡಲಿದ್ದು 1529 ಜನ ವಲಸಿಗರು ಪ್ರಯಾಣ ಬೆಳಲಿದ್ದಾರೆ. ಸಂಜೆ 6ಕ್ಕೆ ಉತ್ತರ ಪ್ರದೇಶದ ಲಕ್ನೋಗೆ 2ನೇ ರೈಲಿನಲ್ಲಿ 1520 ಜನ ಪ್ರಯಾಣಿಕರು ತೆರಳಲಿದ್ದಾರೆ. ರಾತ್ರಿ 7ಕ್ಕೆ ರಾಜಸ್ಥಾನದ ಜೈಪುರಕ್ಕೆ 1520 ಜನ ಹಾಗೂ ರಾತ್ರಿ 8ಕ್ಕೆ ಜಮ್ಮುಕಾಶ್ಮೀರದ ಉದಂಪುರಕ್ಕೆ 1600 ವಲಸಿಗರು ಪ್ರಯಾಣ ಬೆಳೆಸಲಿದ್ದಾರೆ‌.

ಇದನ್ನೂ ಓದಿ: ಕರ್ನಾಟಕದಲ್ಲಿ ಜೂನ್ 18ಕ್ಕೆ ಪಿಯುಸಿ, ಜೂನ್ 25ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ

ಬೆಂಗಳೂರಿನ ವಿವಿಧೆಡೆ ನೆಲೆಸಿರುವ ಕಾರ್ಮಿಕರನ್ನು ಬಿಬಿಎಂಪಿ ಅಧಿಕಾರಿಗಳು ಬಿಎಂ‌ಟಿಸಿ ಬಸ್ ಮುಖಾಂತರ ಕರೆತರಲಿದ್ದು, ಎಲ್ಲರಿಗೂ ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಆರೋಗ್ಯವಂತರಿಗೆ ಮಾತ್ರ ತಾಯ್ನಾಡಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡಲಿದ್ದು, ಅನುಮಾನ ಬಂದಲ್ಲಿ ಹೆ‍‍ಚ್ಚಿನ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿವುದು. ಇನ್ನು ರೈಲು ನಿಲ್ದಾಣದ ಬಳಿ ಸೋಲದೇವನಹಳ್ಳಿ ಪೊಲೀಸ್ ಹಾಗೂ ರೈಲ್ವೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ‌

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
First published: May 18, 2020, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading