• Home
  • »
  • News
  • »
  • coronavirus-latest-news
  • »
  • ಪಾದರಾಯನಪುರದಲ್ಲಿ ನಿನ್ನೆಯಿಂದ 7 ಹೊಸ ಪ್ರಕರಣ; ಶಿವಾಜಿನಗರದ ಹಲವೆಡೆ ಸೀಲ್​ಡೌನ್

ಪಾದರಾಯನಪುರದಲ್ಲಿ ನಿನ್ನೆಯಿಂದ 7 ಹೊಸ ಪ್ರಕರಣ; ಶಿವಾಜಿನಗರದ ಹಲವೆಡೆ ಸೀಲ್​ಡೌನ್

ಪಾದರಾಯನಪುರದಲ್ಲಿ ಪೊಲೀಸ್ ಬಂದೋಬಸ್ತ್

ಪಾದರಾಯನಪುರದಲ್ಲಿ ಪೊಲೀಸ್ ಬಂದೋಬಸ್ತ್

ಪಾದರಾಯನಪುರದ ನಿವಾಸಿ 8 ತಿಂಗಳ ತುಂಬು ಗರ್ಭಿಣಿಗೆ ಪಾಸಿಟಿವ್ ಬಂದಿದೆ. ಪಿ-706 ರೋಗಿಯ ಪತ್ನಿಯಾದ ಈಕೆ ಹೊಟ್ಟೆ ನೋವು ಎಂದು ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ದರು. 19 ವರ್ಷದ ಈ ಗರ್ಭಿಣಿಯನ್ನು ಈಗ ಪಕ್ಕದ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

  • News18
  • Last Updated :
  • Share this:

ಬೆಂಗಳೂರು(ಮೇ 09): ಪಾದರಾಯನಪುರದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದೆ. ಇವತ್ತು ಮೂವರಿಗೆ ಸೋಂಕು ಇರುವುದು ಬೆಳಕಿಗೆ ಬಂದಿದೆ. ಅಲ್ಲಿಗೆ ನಿನ್ನೆಯಿಂದ ಪಾದರಾಯನಪುರದಲ್ಲಿ ಏಳು ಹೊಸ ಪ್ರಕರಣಗಳು ದೃಢಪಟ್ಟಂತಾಗಿವೆ. ಪಾದರಾಯನಪುರ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಕುಟುಂಬಸ್ಥರಲ್ಲಿ ಸೋಂಕು ಇರುವುದು ತಿಳಿದುಬಂದಿದೆ. ಪಿ-449 ಮತ್ತು ಪಿ-454 ಅವರ ಕುಟುಂಬದ ಸದಸ್ಯರಿಗೆ ಸೋಂಕು ಇರುವುದು ಖಾತ್ರಿಯಾಗಿದೆ. ಇವತ್ತು ಬೆಳಕಿಗೆ ಪಾದರಾಯನಪುರದ ಮೂರು ಪ್ರಕರಣಗಳಲ್ಲಿ ಇಬ್ಬರು ಯುವತಿಯರಿದ್ದಾರೆ.


ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಪಾದರಾಯನಪುರದಲ್ಲಿ ಹಿಂದಿಗಿಂತಲೂ ಹೈ ಅಲರ್ಟ್ ಘೋಷಿಸಲಾಗಿದೆ. ಕೇಸ್ ಪತ್ತೆಯಾದ ಆ ಪ್ರದೇಶದ 11ನೇ ಕ್ರಾಸ್ ರಸ್ತೆಯನ್ನು ಸಂಪೂರ್ಣವಾಗಿ ಸೀಲ್​ಡೌನ್ ಮಾಡಲಾಗಿದೆ. ಆ ರಸ್ತೆಗೆ ಯಾರಿಗೂ ಪ್ರವೇಶವಿಲ್ಲದಂತೆ ಪೊಲೀಸರು ಬಿಗಿಬಂದೋಬಸ್ತ್ ಮಾಡಿದ್ದಾರೆ.


ಇದನ್ನೂ ಓದಿ: ಗರ್ಭಿಣಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ; ಚೆಕಪ್ ಮಾಡಿದ್ದ ಆಸ್ಪತ್ರೆ ಬಂದ್


ಪಾದರಾಯನಪುರದ ನಿವಾಸಿ 8 ತಿಂಗಳ ತುಂಬು ಗರ್ಭಿಣಿಗೆ ಪಾಸಿಟಿವ್ ಬಂದಿದೆ. ಪಿ-706 ರೋಗಿಯ ಪತ್ನಿಯಾದ ಈಕೆ ಹೊಟ್ಟೆ ನೋವು ಎಂದು ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ದರು. 19 ವರ್ಷದ ಈ ಗರ್ಭಿಣಿಯನ್ನು ಈಗ ಪಕ್ಕದ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.


ಇನ್ನು ಕೊರೋನಾ ಪಾಸಿಟಿವ್ ಬಂದಿದ್ದ 9 ತಿಂಗಳ ಮತ್ತೊಬ್ಬ ತುಂಬುಗರ್ಭಿಣಿಯ ಹೆರಿಗೆಯಾಗಿದೆ. ಪಿ-738 ರೋಗಿಯಾದ ಈಕೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು. ಆರೋಗ್ಯವಂತ ಹೆಣ್ಮಗು ಜನಸಿದೆ. 34 ವರ್ಷದ ಈಕೆ ಕೂಡ ಪಾದರಾಯನಪುರ ನಿವಾಸಿಯೇ ಆಗಿದ್ದಾರೆ. ಅದೃಷ್ಟಕ್ಕೆ ನವಜಾತ ಶಿಶುವಿಗೆ ಸೋಂಕು ತಗುಲಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ.


ಇದನ್ನೂ ಓದಿ: ತಾಯ್ತನವನ್ನೇ ಕಸಿದ ಕೊರೋನಾ; ಬಾಗಲಕೋಟೆಯ ಸೋಂಕಿತ ಗರ್ಭಿಣಿಗೆ ವೈದ್ಯರಿಂದ ಗರ್ಭಪಾತ


ಶಿವಾಜಿನಗರದಲ್ಲಿ ಮೂರು ಗಲ್ಲಿ ಸೀಲ್​ಡೌನ್:


ಹೌಸ್ ಕೀಪಿಂಗ್ ಹುಡುಗನೊಬ್ಬನಿಂದ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಶಿವಾಜಿನಗರದ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರಸೆಲ್ ಮಾರ್ಕೆಟ್, ಚಾಂದನಿ ಚೌಕ್ ಮತ್ತು ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ. ಜೊತೆಗೆ, ಶಿವಾಜಿನಗರ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಬ್ಯಾರಿಕೇಡ್ ಹಾಕಿ ಪೊಲೀಸರು ಕಾವಲಿದ್ಧಾರೆ. ಲಾಕ್ ಡೌನ್ ವೇಳೆ ಶಿವಾಜಿನಗರದಲ್ಲಿ ಜನರು ಯಾವುದಕ್ಕೂ ಲೆಕ್ಕಿಸದೆ ರಾಜಾರೋಷವಾಗಿ ಓಡಾಡುತ್ತಿದ್ದುದು ಸೋಂಕು ವ್ಯಾಪಕವಾಗಿ ಹರಡಿರುವ ಭೀತಿ ಮೂಡಿದೆ.


Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು