‘ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರ ಕೈಬಿಡಿ‘ - ರಾಜ್ಯ ಸರ್ಕಾರಕ್ಕೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಒತ್ತಾಯ

ಜತೆಗೆ ಕೈಗಾರಿಕೆಗಳು ಏಳು ವರ್ಷವಾದ ಮೇಲೆ ಅವರಿಗೆ ನಷ್ಟವಾದರೆ, ಆಗ ಅಲ್ಲಿನ ನೌಕರರು ಅತಂತ್ರರಾಗಿರುತ್ತಾರೆ. ಹೀಗಾಗಿ ಯಾವ ಉದ್ದೇಶಕ್ಕೆ ಭೂಮಿಯನ್ನು ಬಳಸಿದ್ದಾರೆ. ಅದನ್ನು ಅದೇ ಉದ್ದೇಶಕ್ಕೆ ಬೇರೆಯವರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ವಿವರಿಸಿದ್ದರು.

ರೈತರ ಪ್ರತಿಭಟನೆ

ರೈತರ ಪ್ರತಿಭಟನೆ

 • Share this:
  ಬೆಂಗಳೂರು(ಮೇ.11): ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುಂದಾದ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕರ್ನಾಟಕ ಕಿಸಾನ್​​​ ಕಾಂಗ್ರೆಸ್ ಅಸಮಾಧಾನ ಹೊರಹಾಕಿದೆ. ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಇದೀಗ ರಾಜ್ಯಪಾಲರ ಅಂತಿಮ ಅನುಮೋದನೆಗೆ ಕಳಿಸಿದೆ. ಈ ಗವರ್ನರ್​​​ ಅಂಕಿತ ಹಾಕಿದರೇ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಜಾರಿ ಮಾಡಲಿದ್ದಾರೆ. ಈ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂಸರಿಯಿದಿದ್ದರೆ ರಾಜ್ಯ ಕಿಸಾನ್​​ ಕಾಂಗ್ರೆಸ್​ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.

  ಮಾರ್ಚ್​​ 19ನೇ ತಾರೀಕಿನಂದು ಪ್ರತಿಪಕ್ಷಗಳ ಸಭಾತ್ಯಾಗದ ಮಧ್ಯೆಯೂ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿತ್ತು. ಅಂದು ಈ ವಿಧೇಯಕ ಮಂಡನೆ ಮಾಡಿದ್ದ ಸಚಿವ ಆರ್​​. ಅಶೋಕ್​, ಏಳು ವರ್ಷಗಳ ಬಳಿಕ ಕೈಗಾರಿಕೋದ್ಯಮಿಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೆ. ತಾವು ಖರೀಸಿದ ಭೂಮಿಯನ್ನು ಮಾರಾಟ ಮಾಡಲು ಉದ್ದೇಶಿದರೆ, ಅದೇ ಉದ್ದೇಶಕ್ಕೆ ಇತರ ಕೈಗಾರಿಕೋದ್ಯಮಿಗೆ ಮಾರಾಟ ಮಾಡುವ ತಿದ್ದುಪಡಿ ವಿಧೇಯಕ ಇದಾಗಿದೆ ಎಂದಿದ್ದರು.

  ಜತೆಗೆ ಕೈಗಾರಿಕೆಗಳು ಏಳು ವರ್ಷವಾದ ಮೇಲೆ ಅವರಿಗೆ ನಷ್ಟವಾದರೆ, ಆಗ ಅಲ್ಲಿನ ನೌಕರರು ಅತಂತ್ರರಾಗಿರುತ್ತಾರೆ. ಹೀಗಾಗಿ ಯಾವ ಉದ್ದೇಶಕ್ಕೆ ಭೂಮಿಯನ್ನು ಬಳಸಿದ್ದಾರೆ. ಅದನ್ನು ಅದೇ ಉದ್ದೇಶಕ್ಕೆ ಬೇರೆಯವರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ವಿವರಿಸಿದರು.

  ರಾಜ್ಯಕ್ಕೆ ಬರುವ ಕೈಗಾರಿಕೋದ್ಯಮಿಗಳಿಗೆ ತೊಂದರೆ‌ ಆಗದಂತೆ ಅದನ್ನು ಸರಳೀಕರಣಗೊಳಿದ್ದೇವೆ. ರಾಜ್ಯಕ್ಕೆ ಆಗಮಿಸುವ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಕಾಯ್ದೆಯನ್ನು ತರಲಾಗಿದೆ ಎಂದಿದ್ದರು.

  ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಆರ್ಥಿಕ ಬಿಕ್ಕಟ್ಟು: ಇಂದು ಮಧ್ಯಾಹ್ನ ಅಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ

  ಇನ್ನೊಂದೆಡೆ ಈ ಕಾಯ್ದೆಯಿಂದ ರೈತರು ಬೀದಿಗೆ ಬರಬೇಕಾಗುತ್ತದೆ. ಸರ್ಕಾರ ನೀಡಿರುವ ಜಮೀನು ಕೈಗಾರಿಕೋದ್ಯಮಿಗಳಿಗೆ ಪಾಲಾಗಲಿದೆ. ಹೀಗಾಗಿ ಸರ್ಕಾರ ಭೂ ಸುದಾರಣೆ ಕಾಯ್ದೆ ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಿದ್ಧಾರೆ.
  First published: