ರಂಝಾನ್ ತಿಂಗಳಲ್ಲಿ ಈ ನಿಯಮಗಳನ್ನು ಪಾಲಿಸಲೇಬೇಕು

ಮೇ 3 ರವರೆಗೆ ದೇಶಾದ್ಯಂತ ಲಾಕ್​ಡೌನ್ ಇರಲಿದ್ದು, ಹೀಗಾಗಿ ರಂಝಾನ್ ಮೊದಲ ವಾರ ಎಲ್ಲರೂ ಮನೆಯಿಂದಲೇ ಪ್ರಾರ್ಥಿಸಬೇಕೆಂದು ಮುಸ್ಲಿಂ ಬಾಂಧವರಲ್ಲಿ  ಕರ್ನಾಟಕದ ಇಮಾರತ್‌-ಎ-ಶರಿಯಾ ಮನವಿ ಮಾಡಿದೆ.

muslims

muslims

  • Share this:
ಇಸ್ಲಾಂ ಧರ್ಮದ ಪವಿತ್ರ ಮಾಸ ರಮಳಾನ್ (ರಂಝಾನ್) ಇದೇ ತಿಂಗಳ 23 ರಿಂದ ಪ್ರಾರಂಭವಾಗಲಿದೆ. ಈ ಪವಿತ್ರ ತಿಂಗಳಲ್ಲಿ ಮುಸ್ಲಿಂ ಬಾಂಧವರು ಉಪವಾಸ ಇದ್ದು, ಅಲ್ಲಾಹುನನ್ನು ಸ್ಮರಿಸುತ್ತಾರೆ. ಆದರೆ ಈ ಬಾರಿ ಕೋವಿಡ್‌ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ, ಮಸೀದಿಗಳ ಭೇಟಿಗೆ ಅವಕಾಶ ಇರುವುದಿಲ್ಲ.

ಮೇ 3 ರವರೆಗೆ ದೇಶಾದ್ಯಂತ ಲಾಕ್​ಡೌನ್ ಇರಲಿದ್ದು, ಹೀಗಾಗಿ ರಂಝಾನ್ ಮೊದಲ ವಾರ ಎಲ್ಲರೂ ಮನೆಯಿಂದಲೇ ಪ್ರಾರ್ಥಿಸಬೇಕೆಂದು ಮುಸ್ಲಿಂ ಬಾಂಧವರಲ್ಲಿ  ಕರ್ನಾಟಕದ ಇಮಾರತ್‌-ಎ-ಶರಿಯಾ ಮನವಿ ಮಾಡಿದೆ. ಅಲ್ಲದೆ ಉಪವಾಸ ವೇಳೆ ಕಟ್ಟು ನಿಟ್ಟಾಗಿ ಪಾಲಿಸಬೇಕಾದ ಕೆಲ ನಿದರ್ಶನಗಳನ್ನು ಸಹ ನೀಡಿದೆ. ಅವುಗಳೆಂದರೆ...

1- ಧರ್ಮ ಸಮ್ಮತ ಕಾರಣಗಳಿಲ್ಲದೆ ಉಪವಾಸ ವೃತವನ್ನು ತ್ಯಜಿಸಬಾರದು.

2- ಐದು ಹೊತ್ತಿನ ನಮಾಜ​ಗಳನ್ನೂ ಮನೆಯೊಳಗೆ ಜಮಾತ್ ಸಹಿತ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಮಸೀದಿಗೆ ಹೋಗಬಾರದು.

3- ತರಾವೀಹ್​ ನಮಾಜ್ ಅನ್ನು ಕೂಡ ಮನೆ ಮಂದಿಯೆಲ್ಲಾ ಜಮಾಅತ್​ ಆಗಿ ಮನೆಯೊಳಗೆ ಸಲ್ಲಿಸಬೇಕು.

4- ಲಾಕ್​ ಡೌನ್​ ಅವಧಿಯಲ್ಲಿ ಸಾಮೂಹಿಕ ನಮಾಜ್ ಅಥವಾ ತರಾವೀಹ್ ನಮಾಜ್​ಗಾಗಿ ಜಮಾಅತ್ ಹೆಸರಿನಲ್ಲಿ ನೆರೆಹೊರೆಯವನರನ್ನು ನಿಮ್ಮ ಮನೆಯಲ್ಲಿ ಸೇರಿಸಬಾರದು. ಹಾಗೆಯೇ ಯಾವುದೇ ನಮಾಜ್​ಗೂ ಹೊರಗಿನವರನ್ನು ಒಟ್ಟುಗೂಡಿಸಬಾರದು.

5- ರಂಝಾನ್ ತಿಂಗಳ ಹಗಲಲ್ಲಾಗಲಿ ಅಥವಾ ರಾತ್ರಿ ವೇಳೆಯಯಾಗಲಿ ಯಾವ ಕಾರಣಕ್ಕೂ ಹೊರಗೆ ಬೀದಿ, ಪೇಟೆ ಇತ್ಯಾದಿ ಸ್ಥಳಗಳಲ್ಲಿ ತಿರುಗಾಡಬಾರದು.

6- ಲಾಕ್​ಡೌನ್ ಅವಧಿಯಲ್ಲಿ ರಂಝಾನ್ ತಿಂಗಳ ಮುಂಜಾನೆ ಸಹರಿಗಾಗಿ ಜನರನ್ನು ಎಬ್ಬಿಸಲು ಧ್ವನಿವರ್ಧಕವನ್ನು ಬಳಸಬಾರದು.

7- ಅವಶ್ಯಕ ವಸ್ತುಗಳ ಖರೀದಿಯ ವಿಷಯದಲ್ಲಿ ಸರಕಾರವು ವಿಧಿಸಿರುವ ಎಲ್ಲ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.

8- ಮನೆಯಲ್ಲಾಗಲಿ ಅಥವಾ ಬೇರೆ ಎಲ್ಲೇ ಆಗಲಿ ಲಾಕ್​ಡೌನ್ ವೇಳೆ ಸಾಮೂಹಿಕ ಖತಮ್ ಎ ಕುರ್​ಆನ್ ಮಾಡುವ ಕಾರ್ಯಕ್ರಮ ಏರ್ಪಡಿಸಬಾರದು.

9- ಮಸೀದಿಯಲ್ಲೇ ತಂಗಿರುವ ಇಮಾಮ್ ಮತ್ತು ಮುಅಜ್ಜಿನ್​ಗಳು ಸಹರಿ ಮತ್ತಯ ಇಫ್ತಾರ್​ಗೆ ಸಂಬಂಧಿಸಿ ಪ್ರಕಟಣೆಗಳನ್ನು ಎಂದಿನಂತೆ ಹೊರಡಿಸಬಹುದು.

10- ಎಲ್ಲೇ ಆಗಲಿ, ಯಾವುದೇ ತರದ ದಾವತ್ ಅಥವಾ ಇಫ್ತಾರ್ ಕೂಟಗಳನ್ನು ಏಪರ್ಡಿಸಬಾರದು.

11- ರಂಝಾನ್ ತಿಂಗಳಲ್ಲಿ ಸಮಾಜದ ಬಡವರು ಮತ್ತು ನಿರ್ಗತಿಕರ ಬಗ್ಗೆ ವಿಶೇಷ ಗಮನವಿರಲಿ. ನಿಮ್ಮ ಬಡ ಬಂಧುಗಳು, ನೆರೆಹೊರೆಯ ಬಡವರು ಮತ್ತು ಅನ್ಯ ಸಮುದಾಯಗಳ ಹಸಿದಿರುವ ಜನರಿಗೆ ನಿಮ್ಮಿಂದ ಸಾಧ್ಯವಾದಷ್ಟು ನೆರವು ನೀಡಿ.

12- ಪ್ರಾರ್ಥನೆ ವೇಳೆ, ವಿಶೇಷವಾಗಿ ಸಹರಿ ಮತ್ತು ಇಫ್ತಾರ್ ಸಮಯದಲ್ಲಿ ನಮ್ಮ ದೇಶ ಮಾತ್ರವಲ್ಲ, ಸಂಪೂರ್ಣ ಮಾನವ ಸಮಾಜದ ಹಿತಕ್ಕಾಗಿ ದುವಾ ಮಾಡಿ. ಮುಖ್ಯವಾಗಿ ಎಲ್ಲರನ್ನೂ ಕಾಡುತ್ತಿರುವ ಮಹಾಮಾರಿಯಿಂದ ಮುಕ್ತಿ ಸಿಗಲೆಂದು ಅಲ್ಲಾಹನಲ್ಲಿ ಪ್ರಾರ್ಥಿಸಿ.

13- ಹೆತ್ತವರು ಮತ್ತು ಪೋಷಕರು ತಮ್ಮ ಜೊತೆಗಿರುವ ಅಪ್ರಬುದ್ಧ ಮಕ್ಕಳು ಹಾಗೂ ಎಳೆಯರು ಸಮಾಜಕ್ಕೆ ಕಂಟಕವಾಗಬಲ್ಲ ಯಾವುದೇ ಅನುಚಿತ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರವಹಿಸಬೇಕು.

14- ನಮ್ಮ ಹದಿಹರೆಯದ ಯುವಕರು ಬೈಕುಗಳಲ್ಲಿ ತಿರುಗಾಡುವುದು, ರಸ್ತೆಗಳಲ್ಲಿ ವೀಲಿಂಗ್ ಮಾಡುವುದು ಇತ್ಯಾದಿ ಚಟುವಟಿಕೆಗಳಿಂದ ಸಂಪೂರ್ಣ ದೂರವಿರಬೇಕು ಎಂದು ಕರ್ನಾಟಕ ಇಮಾರತ್‌-ಎ-ಶರಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
First published: