LY Suhas - ಯೋಗಿ ನಾಡಲ್ಲಿ ಕನ್ನಡಿಗನ ಪ್ರತಾಪ; ಡಿಸಿಯಾಗಿಯೂ ಸೈ, ಕೊರೋನಾ ಬೇಟೆಗೂ ಜೈ

ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಶಿವಮೊಗ್ಗ ಮೂಲದ ವ್ಯಕ್ತಿ ಇವರಾಗಿದ್ದು, ಈಗ ನೋಯ್ಡಾ (ಡಿಎಂ) ಜಿಲ್ಲಾಧಿಕಾರಿ. ಶಿವಮೊಗ್ಗದ ವಿನೋಬ ನಗರದ  ಎಲ್.ವೈ. ಸುಹಾಸ್ ಅವರಿಗೆ ಉತ್ತರ ಪ್ರದೇಶದ ಸಿಎಂ ಹೆಚ್ಚಿನ ಜವಬ್ದಾರಿ ವಹಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಜೊತೆ ಐಎಎಸ್ ಅಧಿಕಾರಿ ಎಲ್​​ ವೈ ಸುಹಾಸ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಜೊತೆ ಐಎಎಸ್ ಅಧಿಕಾರಿ ಎಲ್​​ ವೈ ಸುಹಾಸ್

  • Share this:
ಶಿವಮೊಗ್ಗ(ಏ. 03): ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲಾಧಿಕಾರಿ ಕನ್ನಡಿಗ. ಇಲ್ಲಿಯೇ (ನೋಯ್ಡಾ) ಹೆಚ್ಚು ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಜಿಲ್ಲೆಯಲ್ಲಿ ಜನರನ್ನು ರಕ್ಷಿಸುವ ಹೊಣೆಯನ್ನು ಸಿಎಂ ಯೋಗಿ ಆಧಿತ್ಯನಾಥ್ ಈಗ ಕರ್ನಾಟಕ ಮೂಲಕ ವ್ಯಕ್ತಿಗೆ ವಹಿಸಿದ್ದಾರೆ. ಈಗಾಗಲೇ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಎಲ್.ವೈ. ಸುಹಾಸ್ ಕೊರೋನಾ ನಿಯಂತ್ರಣದಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಈ ಹಿಂದೆ ಇದ್ದ ಬಿ.ಎನ್. ಸಿಂಗ್ ಅವರ ಜಾಗಕ್ಕೆ ಸುಹಾಸ್ ಅವರನ್ನು ನೇಮಕ ಮಾಡಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಶಿವಮೊಗ್ಗ ಮೂಲದ ವ್ಯಕ್ತಿ ಇವರಾಗಿದ್ದು, ಈಗ ನೋಯ್ಡಾ (ಡಿಎಂ) ಜಿಲ್ಲಾಧಿಕಾರಿ. ಶಿವಮೊಗ್ಗದ ವಿನೋಬ ನಗರದ  ಎಲ್.ವೈ. ಸುಹಾಸ್ ಅವರಿಗೆ ಉತ್ತರ ಪ್ರದೇಶದ ಸಿಎಂ ಹೆಚ್ಚಿನ ಜವಬ್ದಾರಿ ವಹಿಸಿದ್ದಾರೆ. ಈಗಾಗಲೇ ನೋಯ್ಡಾದಲ್ಲಿ ಜವಾಬ್ದಾರಿ ವಹಿಸಿಕೊಂಡಿರುವ ಸುಹಾಸ್ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಮಾಡಲು ಕಾರ್ಯ ಪ್ರವೃತ್ತರಾಗಿದ್ದಾರೆ. ದಕ್ಷ ಅಧಿಕಾರಿಯಾಗಿರುವ ಸುಹಾಸ್, ಯಾವಾಗಲೂ ಜನಪರ ಕೆಲಸಗಳಿಂದ ಉತ್ತರ ಪ್ರದೇಶದಲ್ಲಿ ಮನೆ ಮಾತಾಗಿದ್ದಾರೆ.

2007 ರಲ್ಲಿ ಮೊದಲೇ ಪ್ರಯತ್ನದಲ್ಲೇ ಐಎಎಸ್ ಪಾಸ್ ಮಾಡಿರುವ ಸುಹಾಸ್. ಉತ್ತರ ಪ್ರದೇಶದ ರಾಜ್ಯ ಸೇವೆಗೆ ನೇಮಕಗೊಂಡಿದ್ದರು. ಶಿವಮೊಗ್ಗದಲ್ಲಿ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಡ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ ಚರ್ಚ್ ಶಾಲೆಯಲ್ಲಿ, ನಂತರ ಪಿಯುಸಿಯನ್ನು ಡಿವಿಎಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಇಂಜಿನಿಯರ್ ಪದವಿಯನ್ನು ಸುರತ್ಕಲ್ ನಲ್ಲಿ ಮುಗಿಸಿದ್ದರು. ನಂತರ 2007 ರಲ್ಲಿ ಐಎಎಸ್ ಪಾಸ್ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ಅಜಮ್ ಗಢ, ಪ್ರಯಾಗ್ ರಾಜ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ (ಡಿಎಂ) ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ias officer L Y Suhas
ಕನ್ನಡ ಮೂಲದ ಐಎಎಸ್ ಅಧಿಕಾರಿ ಎಲ್​ ವೈ ಸುಹಾಸ್


ಸದ್ಯ ಅವರು ಉತ್ತರ ಪ್ರದೇಶದ ಯೋಜನಾ ಆಯೋಗದ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸುಹಾಸ್ ಅವರ ಕಾರ್ಯ ಕ್ಷಮತೆಯನ್ನು ಅರಿತಿರುವ ಯುಪಿ ಸಿಎಂ  ಅವರು ಅತಿ ಹೆಚ್ಚು  ಕೊರೋನಾ ಸೊಂಕಿತ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಸುಹಾಸ್​ ಅವರನ್ನು ನೇಮಿಸಿ ಉನ್ನತ ಜವಾಬ್ದಾರಿಯನ್ನು ನೀಡಿದ್ದಾರೆ.

ಸುಹಾಸ್ ಗೆ ಯಾವುದೇ  ಜವಾಬ್ದಾರಿ ನೀಡಿದರೂ, ಅದನ್ನು ಅಚ್ಚುಕಚ್ಚಾಗಿ ಮಾಡುತ್ತಾರೆ ಎಂದು ಕುಟುಂಬ ವರ್ಗ ತಿಳಿಸಿದೆ. ಈ ಹಿಂದೆ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭ ಮೇಳದ ಜವಾಬ್ದಾರಿಯನ್ನು ಉತ್ತಮವಾಗಿ  ಸುಹಾಸ್ ನಿರ್ವಹಿಸಿದ್ದಾರೆ. ಅಚ್ಚುಕಟ್ಟಾಗಿ ಅಲ್ಲಿ ನಿರ್ವಹಣೆ ಮಾಡಿದ್ದರು. ಇದನ್ನು ಸಹ ಗಮನಿಸಿ ಈ ಜವಾಬ್ದಾರಿಯನ್ನು ಸಿಎಂ  ನೀಡಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಭಾರತೀಯ ವೃತ್ತಿಪರ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ ಸುಹಾಸ್. 2016 ರಲ್ಲಿ ಬೀಜಿಂಗ್ ನ ಲ್ಲಿ ನಡೆದ ಏಷ್ಯಾ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.  ಪ್ರಸ್ತುತ ವಿಶ್ವದ 3 ನೇ ಸ್ಥಾನದಲ್ಲಿದ್ದಾರೆ. ವಿವಿಧ ಬಿಡಬ್ಲ್ಯೂಎಫ್ (ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್) ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆದ್ದಿದ್ದಾರೆ. ಇಂಡೋನೇಷ್ಯಾ 2018 ರ ಜಕಾರ್ತದಲ್ಲಿ ನಡೆದ ಏಷ್ಯಾ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಇದನ್ನೂ ಓದಿ :  ಓದಿದ್ದು ಇಂಜಿನಿಯರಿಂಗ್ - ಮಾಡೋದು ಸೋಡಾ ಮಾರುವ ಕೆಲಸ - ಈತನ ದಿನದ ಗಳಿಕೆ ಎಷ್ಟು ಗೊತ್ತಾ..?

ಇತ್ತೀಚೆಗೆ ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದಾರೆ. (2020  ಫೆಬ್ರವರಿಯಲ್ಲಿ) ಪೆರು ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್  ನಲ್ಲಿ ಸಹ ಚಿನ್ನದ ಪದಕ ಗಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ 2016ರ ಡಿಸೆಂಬರ್ 1 ರಂದು  ಉತ್ತರ ಪ್ರದೇಶದ ಅತ್ಯುನ್ನತ ನಾಗರೀಕ ಗೌರವವಾದ ಯಶ್ ಭಾರತಿಯನ್ನು ನೀಡಿ ಗೌರವಿಸಿದೆ.
First published: