HOME » NEWS » Coronavirus-latest-news » KARNATAKA HEALTH MINISTER MADE A MEETING WITH OFFICERS AHEAD OF DAUGHTERS MARRIAGE AS CORONAVIRUS PATIENT FOUND IN BANGALORE MAK

ರಾಜ್ಯಕ್ಕೂ ಕಾಲಿಟ್ಟ ಕೊರೊನ ವೈರಸ್?; ಮಗಳ ಮದುವೆ ಬದಿಗಿಟ್ಟು ಆರೋಗ್ಯ ಸಚಿವ ಶ್ರೀರಾಮುಲು ತುರ್ತು ಸಭೆ

ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮುಂದಿನ 28 ದಿನಗಳ ಕಾಲ ಕೊರೊನಾ ಪೀಡಿತ ರಾಷ್ಟ್ರಗಳಿಂದ ಮರಳಿದ ಜನರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಲಾಗಿದೆ.

MAshok Kumar | news18-kannada
Updated:March 3, 2020, 8:02 AM IST
ರಾಜ್ಯಕ್ಕೂ ಕಾಲಿಟ್ಟ ಕೊರೊನ ವೈರಸ್?; ಮಗಳ ಮದುವೆ ಬದಿಗಿಟ್ಟು ಆರೋಗ್ಯ ಸಚಿವ ಶ್ರೀರಾಮುಲು ತುರ್ತು ಸಭೆ
ಆರೋಗ್ಯ ಸಚಿವ ಶ್ರೀರಾಮುಲು
  • Share this:
ಕರ್ನಾಟಕ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಡರಾತ್ರಿ ಮಾಡಿರುವ ಟ್ವಿಟ್ ಭಾರತದ ಟೆಕ್ ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಮಾರಣಾಂತಿಕ ಕೊರೊನಾ ವೈರಸ್ ಕುರಿತು ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.

ಬೆಂಗಳೂರಿನಲ್ಲಿ ಹೈದ್ರಾಬಾದ್ ಮೂಲಕ ಟೆಕ್ಕಿಯೊಬ್ಬರಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವೈರಸ್ ಹರಡದಂತೆ ತಡೆಯಲು ಸೂಕ್ತ ಕ್ರಮ ಜರಿಗಿಸುವ ಕುರಿತು ರಾಮುಲು ನಿನ್ನೆ ರಾತ್ರಿ ತಮ್ಮ ಮನೆಯಲ್ಲೇ ಅಧಿಕಾರಿಗಳ ಸಭೆ ಕರೆದಿದ್ದಾರೆ. ಮಗಳ ಮದುವೆಯನ್ನೂ ಬದಿಗಿಟ್ಟು ಅಧಿಕಾರಿಗಳ ಸಭೆ ಕರೆದಿರುವ ರಾಮುಲು ಟ್ವಿಟ್ ಮಾಡುವ ಮೂಲಕ ಮಾರಣಾಂತಿಕ ವೈರಸ್ ಕುರಿತು ಎಚ್ಚರಿಕೆಯಿಂದಿರಲು ಕರೆ ನೀಡಿದ್ದಾರೆ.
ಇದಲ್ಲದೆ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮುಂದಿನ 28 ದಿನಗಳ ಕಾಲ ಕೊರೊನಾ ಪೀಡಿತ ರಾಷ್ಟ್ರಗಳಿಂದ ಮರಳಿದ ಜನರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಲಾಗಿದೆ.

ನ್ಯೂಸ್ 18 ಗೆ ಈ ಕುರಿತು ಮಾಹಿತಿ ನೀಡಿರುವ ಮಹಿಳಾ ವೈದ್ಯರೊಬ್ಬರು,ಕೊರೊನಾ ಪೀಡಿತ ದೇಶಗಳಿಂದ ಹಿಂದಿರುಗಿದ ಜನರನ್ನು ಭೇಟಿ ಮಾಡಲು ನಮಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದಲ್ಲಿನ ವಲಸೆ ಇಲಾಖೆ ತಮ್ಮ ಬಳಿ ಇರುವ ವಿವರಗಳನ್ನು ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಂಡಿದೆ.ಹೀಗಾಗಿ ಮುಂದಿನ 28 ದಿನಗಳ ಕಾಲ ನಾವು ಪ್ರತಿದಿನ ಭೇಟಿ ಮಾಡಬೇಕು. ನಿಜಕ್ಕೂ ಇದು ಬೇಸರದ ಕೆಲಸ. ದುರದೃಷ್ಟವಶಾತ್, ನಮಗೆ ಯಾವುದೇ ಭದ್ರತಾ ಸೂಟ್ಗಳನ್ನು ನೀಡಲಾಗಿಲ್ಲ. ನಮಗೆ ಮುಖಗವಸು ಅಥವಾ ಇತರೆ ಯಾವುದೇ ಸಾಧನಗಳನ್ನೂ ನೀಡಲಾಗಿಲ್ಲ. ಇದನ್ನು ನಮ್ಮ ಜೇಬಿನಿಂದಲೇ ನಾವು ಖರೀದಿಸಬೇಕು. ಅಲ್ಲದೆ, ನಾವೂ ಸಹ ಈ ಸೋಂಕಿಗೆ ಒಳಗಾಗುವ ಭಯ ಕಾಡುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ವಿಶ್ವದ 60 ದೇಶಗಳಲ್ಲಿ ಕೊರೊನಾ ವೈರಸ್ ಪತ್ತೆ; ಅಮೆರಿಕ, ಆಸ್ಟ್ರೇಲಿಯದಲ್ಲಿ ಮೊದಲ ಸಾವು
First published: March 3, 2020, 8:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories