• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೊನಾ ಗೆದ್ದವರ ಜೀವ ಹಿಂಡುತ್ತಿದೆ ಬ್ಲಾಕ್ ಫಂಗಸ್, ಇದಕ್ಕೂ ಔಷಧ ಇಲ್ಲ, ಸೋಂಕಿತರ ಅಂಕಿ-ಅಂಶವೂ ಆರೋಗ್ಯ ಸಚಿವರ ಬಳಿ ಇಲ್ಲ !

ಕೊರೊನಾ ಗೆದ್ದವರ ಜೀವ ಹಿಂಡುತ್ತಿದೆ ಬ್ಲಾಕ್ ಫಂಗಸ್, ಇದಕ್ಕೂ ಔಷಧ ಇಲ್ಲ, ಸೋಂಕಿತರ ಅಂಕಿ-ಅಂಶವೂ ಆರೋಗ್ಯ ಸಚಿವರ ಬಳಿ ಇಲ್ಲ !

ಡಾ.ಕೆ. ಸುಧಾಕರ್.

ಡಾ.ಕೆ. ಸುಧಾಕರ್.

ರಾಜ್ಯದಲ್ಲಿ ಇದುವರಗೆ ಎಷ್ಟು ಜನ ಬ್ಲಾಕ್ ಫಂಗಸ್ ಸೋಂಕಿಗೆ ತುತ್ತಾಗಿದ್ದಾರೆ, ಅವರಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಆರೋಗ್ಯ ಸಚಿವರ ಬಳಿಯೇ ಅಂಕಿ ಅಂಶಗಳು ಇಲ್ಲವಂತೆ. ಎಷ್ಟು ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ ಅನ್ನೋ ಮಾಹಿತಿ ಇಲ್ಲ, ಎಷ್ಟು ಸಾವಾಗಿದೆ ಅಂತ ನಿಖರವಾದ ಮಾಹಿತಿ ಇಲ್ಲ.

ಮುಂದೆ ಓದಿ ...
  • Share this:

ಬೆಂಗಳೂರು (ಮೇ 16): ಕೊರೊನಾ ಹೊಡೆತದಿಂದಲೇ ಇನ್ನೂ ಜನ ಚೇತರಿಸಿಕೊಂಡಿಲ್ಲ. ಆಗಲೇ ಬ್ಲಾಕ್ ಫಂಗಸ್ ಕಾಟ ವಿಪರೀತ ಎನ್ನುವಷ್ಟಾಗುತ್ತಿದೆ. ಅನೇಕರು ಬ್ಲಾಕ್ ಫಂಗಸ್ ಸೋಂಕಿನಿಂದ ಜೀವ ಕಳೆದುಕೊಳ್ತಿದ್ದಾರೆ. ದೇಶದಲ್ಲಿ ಸದ್ಯ ಬ್ಲಾಕ್ ಫಂಗಸ್ ಔಷಧಿಯ ಕೊರತೆ ಕೂಡಾ ಬಹಳಷ್ಟಿದೆ. ಇದನ್ನು ಖುದ್ದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಒಪ್ಪಿಕೊಂಡಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 20 ಸಾವಿರ ವಯಲ್​ಗಳಷ್ಟು ಬ್ಲಾಕ್ ಫಂಗಸ್ ಔಷಧ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಸದಾನಂದಗೌಡರ ಜೊತೆ ಸಂಪರ್ಕದಲ್ಲಿ ಇದ್ದೇನೆ, ಕೇಂದ್ರ ಆರೋಗ್ಯ ಸಚಿವರ ಜೊತೆಯೂ ಈ ಬಗ್ಗೆ ಚರ್ಚೆ ಮಾಡ್ತೀವಿ, ಯಾರು ಆತ‌ಂಕ ಪಡೋ ಅಗತ್ಯ ಇಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.


ರಾಜ್ಯದಲ್ಲಿ ಇದುವರಗೆ ಎಷ್ಟು ಜನ ಬ್ಲಾಕ್ ಫಂಗಸ್ ಸೋಂಕಿಗೆ ತುತ್ತಾಗಿದ್ದಾರೆ, ಅವರಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಆರೋಗ್ಯ ಸಚಿವರ ಬಳಿಯೇ ಅಂಕಿ ಅಂಶಗಳು ಇಲ್ಲವಂತೆ. ಎಷ್ಟು ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ ಅನ್ನೋ ಮಾಹಿತಿ ಇಲ್ಲ, ಎಷ್ಟು ಸಾವಾಗಿದೆ ಅಂತ ನಿಖರವಾದ ಮಾಹಿತಿ ಇಲ್ಲ. ಖಾಸಗಿಯಾಗಿ ಅನೇಕರು ದಾಖಲಾಗಿದ್ದಾರೆ, ಹೀಗಾಗಿ ಮಾಹಿತಿ ಲಭ್ಯವಿಲ್ಲ. ಇದಕ್ಕಾಗಿ ನಾವು ತಜ್ಞರ ಸಮಿತಿ ರಚನೆ ಮಾಡ್ತಿದ್ದೇವೆ. ಅಂಕಿ ಅಂಶಗಳು, ಚಿಕಿತ್ಸೆ ವಿಧಾನದ ಬಗ್ಗೆ ಸಮಿತಿ ನಮಗೆ ಮಾರ್ಗದರ್ಶನ ನೀಡುತ್ತೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.


ಕೋವಿಡ್, ಬ್ಲಾಕ್ ಫಂಗಸ್ ನಡುವೆ ಜನ ಡೆಂಘಿಯನ್ನು ಮರೆಯಬಾರದು. ಇಂದು ವಿಶ್ವ ಡೆಂಘ್ಯೂ ದಿನಾಚರಣೆ. ಇದು ಸೊಳ್ಳೆ ಮೂಲಕ ಹರಡುವ ರೋಗ. ನಮ್ಮಲ್ಲಿ 15-20 ಸಾವಿರ ಜನಕ್ಕೆ ಇದು ಪ್ರತಿ ವರ್ಷ ಬರುತ್ತೆ. ಮಳೆಗಾಲದಲ್ಲಿ ಇದು ಹೆಚ್ಚಳ ಆಗುವ ಸಾಧ್ಯತೆ ‌ಇದೆ. ಶುಚಿತ್ವ ಇಲ್ಲದ ಕಡೆ ಸೊಳ್ಳೆ ಬಂದು ಈ ಕಾಯಿಲೆ ಬರುತ್ತೆ. ಜನರು ಎಚ್ಚರಿಕೆಯಿಂದ ಇರಬೇಕು, ಹಗಲಿನಲ್ಲಿ ಈ ಸೊಳ್ಳೆ ಹೆಚ್ಚು ಕಚ್ಚುತ್ತೆ. ಎಲ್ಲರೂ ವಿಶೇಷ ಜಾಗೃತೆ ವಹಿಸಿ, ಸೊಳ್ಳೆ ಪರದೆ ಹಾಕಿ ರಕ್ಷಣೆ ಮಾಡಿಕೊಳ್ಳಿ. ಸೊಳ್ಳೆ ಬತ್ತಿ ಬಳಸಿ ರಕ್ಷಣೆಯಿಂದ ಇರಿ. ಜ್ವರ, ತಲೆ ನೋವು, ವಾಂತಿ, ಮೈಕೈ ನೋವು, ರಕ್ತಸ್ರಾವ, ಹಲ್ಲಿನಲ್ಲಿ ರಕ್ತಸ್ರಾವ ಆಗೋದು ರೋಗ ಲಕ್ಷಣ. ಹೀಗಾದರೆ ಕೂಡಲೇ ವೈದ್ಯರ ಬಳಿ ಹೋಗಿ ಎಂದು ಆರೋಗ್ಯ ಸಚಿವ ಸುಧಾಕರ್ ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

top videos
    First published: