ಆರೋಗ್ಯ ಇಲಾಖೆಯಿಂದ 10 ಲಕ್ಷ ಮಾಸ್ಕ್​ ಖರೀದಿ; ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸಜ್ಜು

ಸರ್ಕಾರ ಈಗಾಗಲೇ 10 ಲಕ್ಷ ಮಾಸ್ಕ್​ಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ. 5 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಎಫ್​) ಖರೀದಿಗೆ ನಿರ್ಧರಿಸಲಾಗಿದೆ.

ಮಾಸ್ಕ್​ಗಳನ್ನು ಸಿದ್ಧಪಡಿಸತ್ತಿರುವ ಸಿಬ್ಬಂದಿ

ಮಾಸ್ಕ್​ಗಳನ್ನು ಸಿದ್ಧಪಡಿಸತ್ತಿರುವ ಸಿಬ್ಬಂದಿ

  • Share this:
ಬೆಂಗಳೂರು (ಮಾ. 23): ಕೊರೋನಾ ವೈರಸ್​ ನಿಯಂತ್ರಣಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿರುವ ಕರ್ನಾಟಕ ಸರ್ಕಾರ 10 ಲಕ್ಷ ಮಾಸ್ಕ್​ಗಳನ್ನು ಖರೀದಿಸಿದೆ. ಈಗಾಗಲೇ ರಾಜ್ಯದಲ್ಲಿ ದುಬಾರಿ ವೆಚ್ಚಕ್ಕೆ ಮಾಸ್ಕ್​ಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಮಾಸ್ಕ್​ಗಳ ಕೊರತೆಯೂ ಹೆಚ್ಚುತ್ತಿದೆ. ಹೀಗಾಗಿ, ಸರ್ಕಾರದಿಂದ 10 ಲಕ್ಷ ಮಾಸ್ಕ್​ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ನಮ್ಮ ಸರ್ಕಾರ ಈಗಾಗಲೇ 10 ಲಕ್ಷ ಮಾಸ್ಕ್​ಗಳನ್ನು ಖರೀದಿಸಲು ಕ್ರಮ ಕೈಗೊಂಡಿದೆ. 5 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಎಫ್​) ಖರೀದಿಗೆ ನಿರ್ಧರಿಸಲಾಗಿದೆ. ಆರೋಗ್ಯ ಇಲಾಖೆ ಯುದ್ಧೋಪಾದಿಯಲ್ಲಿ ಸೋಂಕನ್ನು ತಡೆಗಟ್ಟಲು ಕಾರ್ಯೋನ್ಮುಖವಾಗಿದೆ. ನಾಗರಿಕರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವಿನಂತಿಸುತ್ತೇನೆ ಎಂದು ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಕೈಗೆ ಸ್ಟಾಂಪ್ ಹಾಕಿದ ವ್ಯಕ್ತಿ ಕಂಡರೆ ಈ ನಂಬರ್​ಗೆ ಫೋನ್ ಮಾಡಿ!

ಇಂದು ಬೆಳಗ್ಗೆ ಆರೋಗ್ಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸ್ಕ್ಯಾನ್​ ರೇ ಕಂಪನಿಯೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಲಾಯಿತು. ಸಭೆಯಲ್ಲಿ ಈ ಕೂಡಲೆ 1,000 ವೆಂಟಿಲೇಟರ್ ಖರೀದಿಗೆ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ! ಹೋಮ್ ಐಸೋಲೇಷನ್​ನಿಂದ ಹೊರಬಂದರೆ ಬೀಳುತ್ತೆ ಕೇಸ್
First published: