• Home
 • »
 • News
 • »
 • coronavirus-latest-news
 • »
 • ಕೊರೋನಾ ಬಗ್ಗೆ ಆಂತಕ ಬೇಡ ರಾಜ್ಯದ ಜನರಲ್ಲಿ ಶ್ರೀರಾಮುಲು ಮನವಿ; ಸಿಎಂ ನೇತೃತ್ವದಲ್ಲಿ ತುರ್ತು ಸಭೆ

ಕೊರೋನಾ ಬಗ್ಗೆ ಆಂತಕ ಬೇಡ ರಾಜ್ಯದ ಜನರಲ್ಲಿ ಶ್ರೀರಾಮುಲು ಮನವಿ; ಸಿಎಂ ನೇತೃತ್ವದಲ್ಲಿ ತುರ್ತು ಸಭೆ

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

B. Sriramulu | Corona Virus in Karnataka: ಸರ್ಕಾರದಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿದ್ದು, ಎಲ್ಲಾ ಜಿಲ್ಲಾ ಡಿಹೆಚ್‌ಓ, ಸರ್ಜನ್‌ಗಳ ಸಂಪರ್ಕದಲ್ಲಿದ್ದೇವೆ. ರಾಜ್ಯದಲ್ಲಿ ಐವರಿಗೆ ಕೊರೊನಾ ದೃಢಪಟ್ಟಿದೆ. ಕಲಬುರ್ಗಿಯಲ್ಲಿ ವೃದ್ಧ ಸಾವು ಪ್ರಕರಣವಾದ ಬಳಿಕ ಅವರ ಸಂಪರ್ಕದಲ್ಲಿದ್ದ  25 ಜನರ ಮೇಲೆ ತೀವ್ರ ನಿಗಾವಿಡಲಾಗಿದೆ- ಬಿ ಶ್ರೀರಾಮುಲು

ಮುಂದೆ ಓದಿ ...
 • Share this:

  ಬೆಂಗಳೂರು (ಮಾ. 13): ಕಲಬುರಗಿಯಲ್ಲಿ ಗುರುವಾರ 76 ವರ್ಷದ ವೃದ್ಧ ಕೋವಿಡ್​-19 ಸೋಂಕಿನಿಂದ ಮೃತಪಟ್ಟ ಹಿನ್ನೆಲೆ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಈ ಕುರಿತು ಚರ್ಚೆ ನಡೆಸಲು ಸಿಎಂ ನೇತೃತ್ವದಲ್ಲಿ ತುರ್ತು ಸಭೆಯನ್ನು ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಕರೆಯಲಾಗಿದೆ. 

  ವಿಶ್ವದೆಲ್ಲೆಡೆ ತನ್ನ ಕರಾಳ ಛಾಯೆ ತೋರಿರುವ ಕೊರೋನಾಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಈ ವರೆಗೆ 6 ಜನ ಕೊರೋನಾ ಸೋಂಕಿಗೆ ತುತ್ತಾಗಿದ್ದು ಈ ಪೈಕಿ ಸೌದಿಯಿಂದ ಮರಳಿದ್ದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದ ಜನರಲ್ಲಿ ಭೀತಿ ಆವರಿಸಿದ್ದು,  ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಮುಖ್ಯಮಂತ್ರಿ ಬಿಎಸ್​ವೈ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದಾರೆ.

  ಈ ಸಭೆಯಲ್ಲಿ ಕೊರೋನಾ ತಡೆಗೆ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೇ ಚಿಕಿತ್ಸೆಗೆ ವೈದ್ಯರ ತಂಡ ಹೇಗೆ ಸಜ್ಜಾಗಬೇಕು ಎಂಬ ಕುರಿತು ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ.

  ಇನ್ನು ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಬಿ ಶ್ರೀರಾಮುಲು, ಕೊರೋನಾ ವೈರಸ್​ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗದಂತೆ ಜನರಲ್ಲಿ ಮನವಿ ಮಾಡಿದ್ದಾರೆ.

  ಅಲ್ಲದೆ, "ಸರ್ಕಾರದಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿದ್ದು, ಎಲ್ಲಾ ಜಿಲ್ಲಾ ಡಿಹೆಚ್‌ಓ, ಸರ್ಜನ್‌ಗಳ ಸಂಪರ್ಕದಲ್ಲಿದ್ದೇವೆ. ರಾಜ್ಯದಲ್ಲಿ ಐವರಿಗೆ ಕೊರೊನಾ ದೃಢಪಟ್ಟಿದೆ. ಕಲಬುರ್ಗಿಯಲ್ಲಿ ವೃದ್ಧ ಸಾವು ಪ್ರಕರಣವಾದ ಬಳಿಕ ಅವರ ಸಂಪರ್ಕದಲ್ಲಿದ್ದ  25 ಜನರ ಮೇಲೆ ತೀವ್ರ ನಿಗಾವಿಡಲಾಗಿದೆ" ಎಂದರು.

  ಇದನ್ನು ಓದಿ: ಕೊರೋನಾ ಮಹಾಭೀತಿ, ಷೇರುಪೇಟೆ ತಲ್ಲಣ, ಕುಸಿಯುತ್ತಿರುವ ಮೌಲ್ಯ, ವ್ಯಾಪಾರ ಪುನರಾರಂಭ

  ಹೊರ ದೇಶಗಳಿಂದ ಬರುತ್ತಿರುವವರಲ್ಲಿ ಈ ಸೋಂಕಿನ ಲಕ್ಷಣ ಕಂಡು ಬರುತ್ತಿರುವ ಹಿನ್ನೆಲೆ ಎಲ್ಲಾ ವಿದೇಶಿ ಪ್ರವಾಸಿಗರ ಮೇಲೆ ನಿಗಾ ಇಡಲಾಗಿದೆ. ಪ್ರತಿದಿನ 3 ಸಾವಿರ ಜನರನ್ನು ಸ್ಕ್ರೀನಿಂಗ್​ ಮಾಡಲಾಗುತ್ತಿದೆ. ವಿದೇಶದಿಂದ ಮರಳಿದ ಬಳಿಕ ಎಲ್ಲರನ್ನೂ ಐಸೊಲೇಷನ್​ ವಾರ್ಡ್​ನಲ್ಲಿರಿಸಿ ತಪಾಸಣೆ ನಡೆಸಲಾಗುವುದು ಎಂದರು.

  First published: