• Home
 • »
 • News
 • »
 • coronavirus-latest-news
 • »
 • ಕರ್ನಾಟಕದಲ್ಲಿ ಕೋವಿಡ್​​-19: ಇಂದು 308 ಕೇಸ್​​ ಪತ್ತೆ, ಮೂವರು ಸಾವು, ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆ

ಕರ್ನಾಟಕದಲ್ಲಿ ಕೋವಿಡ್​​-19: ಇಂದು 308 ಕೇಸ್​​ ಪತ್ತೆ, ಮೂವರು ಸಾವು, ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರಕ ಕೊರೋನಾ ವೈರಸ್​​ ಮರಣಮೃದಂಗವೂ ಮುಂದುವರಿದಿದೆ. ಹೀಗಾಗಿಯೇ ಈ ಸೋಂಕಿಗೆ ಇಂದು ಮತ್ತೆ ಮೂವರು ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.

 • Share this:

  ಬೆಂಗಳೂರು(ಜೂ.13): ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್​​​ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 308 ಮಂದಿಗೆ ಹೊಸದಾಗಿ ಕೋವಿಡ್​​-19 ಸೋಂಕು ಪತ್ತೆಯಾಗಿದೆ. ಇದರ ಪರಿಣಾಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6,824ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.


  ಇನ್ನು, ರಾಜ್ಯ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಒಟ್ಟು 6,824 ಪ್ರಕರಣಗಳ ಪೈಕಿ 3,648 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ 3,092 ಸಕ್ರಿಯ ಕೇಸುಗಳಿವೆ. ಇವರಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.


  ಮಾರಕ ಕೊರೋನಾ ವೈರಸ್​​ ಮರಣಮೃದಂಗವೂ ಮುಂದುವರಿದಿದೆ. ಹೀಗಾಗಿಯೇ ಈ ಸೋಂಕಿಗೆ ಇಂದು ಮತ್ತೆ ಮೂವರು ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.


  ಇದನ್ನೂ ಓದಿ: ಜಗತ್ತಿನಾದ್ಯಂತ ಕೊರೋನಾ ಆರ್ಭಟ: 4.25 ಲಕ್ಷ ಮಂದಿ ಸಾವು, 76 ಲಕ್ಷ ದಾಟಿದ ಸೋಂಕಿತರ ಸಂಖ್ಯೆ


  ಭಾರತದಲ್ಲಿ ಇದುವರೆಗೂ ಸತ್ತವರ ಸಂಖ್ಯೆ 8,884ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕಿತರ ಸಂಖ್ಯೆಯೂ 3,08,993ಕ್ಕೆ ಏರಿಕೆಯಾಗಿದೆ. ಇದರಲ್ಲಿ ಈವರೆಗೆ 1,54,330 ಜನ ಮಾತ್ರ ಗುಣಮುಖ ಆಗಿದ್ದಾರೆ. 1,45,779 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿದು ಬಂದಿದೆ.

  Published by:Ganesh Nachikethu
  First published: