HOME » NEWS » Coronavirus-latest-news » KARNATAKA GRAM PANCHAYAT ELECTIONS POSTPONED FOLLOWING CORONAVIRUS OUTBREAK

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ: ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿಕೆ

news18-kannada
Updated:May 28, 2020, 8:52 PM IST
ರಾಜ್ಯದಲ್ಲಿ ಕೊರೋನಾ ಅಟ್ಟಹಾಸ: ಗ್ರಾಮ ಪಂಚಾಯತಿ ಚುನಾವಣೆ ಮುಂದೂಡಿಕೆ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹರಡುತ್ತಿರುವುದ ರಿಂದ ಈ ತಿಂಗಳ ಮೇ ಹಾಗೂ ಜೂನ್ ಅಂತ್ಯಕ್ಕೆ ನಡೆಯಬೇಕಿದ್ದ ಗ್ರಾಮ ಪಂಚಾಯಿತ ಚುನಾವಣೆ ಯನ್ನು ರಾಜ್ಯ ಚುನಾವಣಾ ಆಯೋಗ ಮುಂದೂಡಿಕೆ ಮಾಡಿದೆ.

ಈ ಸಂಬಂಧ ಇಂದು ಅಧಿಕೃತ ಆದೇಶ ಹೊರಡಿಸಿರುವ ಚುನಾವಣಾ ಆಯೋಗ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಚುನಾವಣಾ ನಡೆಸುವ ಬಗ್ಗೆ ತೀರ್ಮಾನ ಮಾಡುವುದಾಗಿ ತಿಳಿಸಿದೆ. ರಾಜ್ಯದಲ್ಲಿ ಒಟ್ಟು ‌ 6025 ಗ್ರಾಮ ಪಂಚಾಯಿತಿ ಗಳಿವೆ. ಅದರಲ್ಲಿ ‌ 5800 ಗ್ರಾಮ ಪಂಚಾಯಿತಿ ಅಧಿಕಾರವಧಿ ಈ ತಿಂಗಳ ಅವಧಿ ಹಾಗೂ ಬರುವ ಜೂನ್ ಅಂತ್ಯಕ್ಕೆ ಮುಕ್ತಾಯವಾಗಲಿದೆ.

ಮುಕ್ತಾಯವಾಗಲಿರುವ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ದತೆ ಮಾಡಿಕೊಂಡಿತ್ತು. ಆದರೆ ರಾಜ್ಯದಲ್ಲಿ ಕೊರೋನಾ ಇರೋದ್ರಿಂದ ಈ ಪರಿಸ್ಥಿತಿ ಯನ್ನು ಅಸಾಧಾರಣ  ಪರಿಸ್ಥಿತಿ ಎಂದು ಘೋಷಿಸಿ ಇದೀಗ ಚುನಾವಣೆಯನ್ನು ಮುಂದೂಡಿಕೆ ಮಾಡಿದೆ. ಕೊರೋನಾ ದಿಂದ ರಾಜ್ಯದಲ್ಲಿ ಸಮಸ್ಯೆಯ ಸರಮಾಲೆಗಳೆ ಸೃಷ್ಟಿಯಾಗಿವೆ.

ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಲು ಸಾಧ್ಯವೇ ಎಂಬುದರ ಬಗ್ಗೆ ಎಲ್ಲಾ ಡಿಸಿಗಳಿಂದ ಆಯೋಗ ವರದಿ ಕೇಳಿತ್ತು. ಇದೀಗ ಎಲ್ಲಾ ಜಿಲ್ಲಾಧಿಕಾರಿ ಗಳು ತಮ್ಮ ತಮ್ಮ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಆಯೋಗಕ್ಕೆ ವರದಿ ನೀಡಿದ್ದಾರೆ. ಚುನಾವಣೆ ನಡೆಸಲು ಯಾಕೆ ಸಾಧ್ಯ ವಾಗಲ್ಲ ಎಂಬುದರ ಬಗ್ಗೆ ವರದಿಯಲ್ಲಿ ವಿವರಿಸಲಾಗಿದೆ.

ಕೊರೋನಾ ನಿಯಂತ್ರಣದಲ್ಲಿ ಸಂಪೂರ್ಣ ವಾಗಿ ಜಿಲ್ಲಾಡಳಿತ ತೊಡಗಿ ಕೊಂಡಿರೋದ್ರಿಂದ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿಗಳ ಕೊರತೆ, ಸಾರಿಗೆ ವ್ಯವಸ್ಥೆ ಕೊರತೆ, ಕಾನೂನು ವ್ಯವಸ್ಥೆ ಕಾಪಾಡಲು ತೊಂದರೆಯಾಗಬಹುದು. ಅಲ್ಲದೇ‌ ಚುನಾವಣೆ ಅಂದ ಕೂಡಲೇ, ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಕೆ, ಮತದಾನ ಮತ್ತು ಮತದಾನ ಎಣಿಕೆ ದಿನಾಂಕ ಗಳಂದು ಜನ ಸಾಮಾನ್ಯರು ಹಾಗೂ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸ್ ಏಜೆಂಟರು, ರಾಜಕೀಯ ಪಕ್ಷಗಳು, ಸಹಾಯಕ ಸಿಬ್ಬಂದಿಗಳ ಓಡಾಟ ಮತ್ತು ಒಂದು ಕಡೆ ಸೇರಬೇಕಾದ ಸಂದರ್ಭ ಗಳು ಉಂಟಾಗುತ್ತವೆ.

ಇದನ್ನೂ ಓದಿ: ಲಾಕ್ ಡೌನ್ 5.0; ಹೋಟೆಲ್, ಜಿಮ್ ಎಲ್ಲಾ ಧರ್ಮದ ದೇವಾಲಯಗಳು ಓಪನ್; ಕ್ಯಾಬಿನೆಟ್‌ನಲ್ಲಿ ಒಮ್ಮತದ ನಿರ್ಣಯ

ಇದರಿಂದ ಜನ ಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು ಹಾಗೂ ವೈರಸ್ ಹರಡುವಿಕೆಗೆ ಅವಕಾಶ ಉಂಟಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ವರದಿಯನ್ನು ಆಧಾರಿಸಿರುವ ಚುನಾವಣಾ ಆಯೋಗ, ರಾಜ್ಯದ ಸ್ಥಿತಿಯನ್ನು 'ಅಸಾಧಾರಣ' ಪರಿಸ್ಥಿತಿ ಎಂದು ಪರಿಗಣಿಸುವ ಮೂಲಕ ಚುನಾವಣೆಯನ್ನು ಮುಂದೂಡುವ ತೀರ್ಮಾನ ಮಾಡಿದೆ.ಇದನ್ನೂ ಓದಿ: ಕರ್ನಾಟಕದಲ್ಲಿ ಹೊಸ ಕ್ವಾರಂಟೈನ್ ನಿಯಮ; 7 ದಿನಗಳಲ್ಲಿ ರೋಗಲಕ್ಷಣ ಕಂಡುಬರದಿದ್ದರೆ ಮನೆಗೆ ಹೋಗಬಹುದು

ಸದ್ಯ ತಾತ್ಕಾಲಿಕವಾಗಿ ಚುನಾವಣೆ ಮುಂದೂಡಿಕೆ ಮಾಡಲು ತೀರ್ಮಾನಿಸಿರುವ ಚುನಾವಣಾ ಆಯೋಗ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಗ್ರಾಮ ಪಂಚಾಯಿತಿಗಳ ಚುನಾವಣೆ ತೀರ್ಮಾನಿಸಲಾಗುವುದು ಎಂದು ತಿಳಿಸಿದೆ.
First published: May 28, 2020, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading