• ಹೋಂ
  • »
  • ನ್ಯೂಸ್
  • »
  • Corona
  • »
  • ಖಾಸಗಿ ಆಸ್ಪತ್ರೆಗಳಲ್ಲಿ ICU ಬೆಡ್​ ನಿರ್ಮಾಣಕ್ಕೆ ಸರ್ಕಾರದಿಂದ ಹಣಕಾಸು ನೆರವು: ಸಚಿವ ಸುಧಾಕರ್​

ಖಾಸಗಿ ಆಸ್ಪತ್ರೆಗಳಲ್ಲಿ ICU ಬೆಡ್​ ನಿರ್ಮಾಣಕ್ಕೆ ಸರ್ಕಾರದಿಂದ ಹಣಕಾಸು ನೆರವು: ಸಚಿವ ಸುಧಾಕರ್​

ಡಾ. ಕೆ ಸುಧಾಕರ್.

ಡಾ. ಕೆ ಸುಧಾಕರ್.

ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕೋವಿಡ್ ಡ್ಯೂಟಿ ಹಾಕಲು ನಿರ್ಧಾರಿಸಲಾಗಿದೆ. ಆ ವಿದ್ಯಾರ್ಥಿಗಳಿಗೆ ರಿಸ್ಕ್ ಅಲೋವೆನ್ಸ್ ಕೊಡಬೇಕು.

  • Share this:

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಬೆಡ್​ಗಳನ್ನು ಹೊಂಚಲು ಸರ್ಕಾರ ಹರಸಾಹಸ ಪಡುತ್ತಿದೆ. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಇಂದು ಸಭೆ ನಡೆಸಿದ ಸಿಎಂ ಬಿ.ಎಸ್​.ಯಡಿಯೂರಪ್ಪ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ  ಐಸಿಯು ಬೆಡ್ ಹೆಚ್ಚಳಕ್ಕೆ ಸೂಚಿಸಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ್ದ ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, 40 ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್ ತರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಆಕ್ಸಿಜನ್ ಕಾನ್ಸಂಟ್ರೇಟರ್ ಅಲ್ಪಮಟ್ಟದ ಸೋಂಕು ಇದ್ದವರಿಗೆ ಅನುಕೂಲವಾಗಲಿದೆ ಎಂದರು.


ವೈದ್ಯಕೀಯ ಕಾಲೇಜಿನ‌ ಮುಖ್ಯಸ್ಥರು ತಾಂತ್ರಿಕ ಸಲಹಾ ಸಮಿತಿ ರಚಿಸಿ, ಮೂರನೇ ಮತ್ತು ನಾಲ್ಕನೇ ಅಲೆ‌ ಬಗ್ಗೆ ಅಧ್ಯಯನ ಮಾಡಬೇಕು. ಮೂರನೇ ಮತ್ತು ನಾಲ್ಕನೇ ಅಲೆ ಸಿದ್ಧತೆಗಳ ಬಗ್ಗೆ ಸಲಹೆ ನೀಡಬೇಕು. ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕೋವಿಡ್ ಡ್ಯೂಟಿ ಹಾಕಲು ನಿರ್ಧಾರಿಸಲಾಗಿದೆ. ಆ ವಿದ್ಯಾರ್ಥಿಗಳಿಗೆ ರಿಸ್ಕ್ ಅಲೋವೆನ್ಸ್ ಕೊಡಬೇಕು. ಇದಕ್ಕಾಗಿ ಸರ್ಕಾರ ಹೆಚ್ಚುವರಿ ಅನುದಾನ ನೀಡಲು ಮನವಿ ಮಾಡಿದ್ದೇವೆ.


ಇದನ್ನೂ ಓದಿ: ದೋಸ್ತಾ ಕಣೋ.. ಬಾಲ್ಯದ ಗೆಳೆಯನಿಗಾಗಿ 1400 ಕಿ.ಮೀ. ಪ್ರಯಾಣಿಸಿ ಆಕ್ಸಿಜನ್ ತಂದ ಆಪತ್ಭಾಂದವ!


ಕೇಂದ್ರ ಸರ್ಕಾರದ ಸೂಚನೆ‌ ಮೇರೆಗೆ ಪುಣೆಯಿಂದ 3 ‌ಲಕ್ಷ ಡೋಸ್​​ ಲಸಿಕೆ‌ ಬಂದಿದೆ. ಲಸಿಕೆ‌ ಅಭಿಯಾನಕ್ಕೆ‌ ಚಾಲನೆ ನಿಡಲಾಗಿದೆ. ಅಧಿಕೃತವಾಗಿ ಇನ್ನಷ್ಟು ಡೋಸ್​​​ ಲಸಿಕೆ ಎರಡನೇ ಅಥವಾ ಮೂರನೇ ವಾರದಲ್ಲಿ ಬರಲಿದೆ ಎಂದರು. ಇನ್ನು ಇಂದಿನಿಂದ ಲಸಿಕೆ ನೀಡಲು ಸಾಧ್ಯವಿಲ್ಲ ಎಂಬ ಸಿಎಂ ಹೇಳಿಕೆಯನ್ನು ಸಚಿವರು ಸಮರ್ಥಿಸಿಕೊಂಡರು. ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿರುವುದು ಸರಿ‌ ಇದೆ. ನಾನೊಂದು ಅವರೊಂದು ಬೇರೆ ಬೇರೆ ಹೇಳಿಕೆ ನೀಡಲಾಗುವುದಿಲ್ಲ ಎಂದರು.


ಖಾಸಗಿ ಆಸ್ಪತ್ರೆಗಳು 100 ರಿಂದ 150 ಐಸಿಯು ಬೆಡ್ ಮಾಡಲು ಒಪ್ಪಿವೆ. ಇದಕ್ಕೆ ಹಣದ ಅಗತ್ಯ ಇದೆ ಅಂದಿದ್ದಾರೆ. ಶೇ.60 ರಿಂದ 70 ಹಣಕಾಸಿನ‌ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಸಹ ಒಪ್ಪಿಕೊಂಡಿದ್ದಾರೆ. 100-1500 ಕೆಎಲ್ಎಂ ಸಾಮರ್ಥ್ಯ ಇರೋ ಆಕ್ಸಿಜನ್ ಜನರೇಟರ್ ಆಮದು ಮಾಡಿಕೊಳ್ಳಲು ತೀರ್ಮಾನ ಆಗಿದೆ. ಮೂರನೇ ಅಲೆ ಮತ್ತು ನಾಲ್ಕನೇ ಅಲೆಗೆ ಸಿದ್ಧತೆ ಬಗ್ಗೆ ಚರ್ಚೆ ಆಯ್ತು. ಇದಕ್ಕೆ ಈಗಿಂದಲೇ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿಸಿದರು.

top videos
    First published: