Bangalore Coronavirus: ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳಲ್ಲಿನ್ನು ಕೊರೋನಾಗೆ ಚಿಕಿತ್ಸೆ; ರಾಜ್ಯ ಸರ್ಕಾರ ಆದೇಶ

Coronavirus Bangalore Updates: ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದ 73 ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಕಾಯ್ದಿರಿಸಲು ಆದೇಶ ನೀಡಿದೆ.

news18-kannada
Updated:July 4, 2020, 8:18 AM IST
Bangalore Coronavirus: ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳಲ್ಲಿನ್ನು ಕೊರೋನಾಗೆ ಚಿಕಿತ್ಸೆ; ರಾಜ್ಯ ಸರ್ಕಾರ ಆದೇಶ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಜು. 4): ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಸಾವಿರದ ಆಸುಪಾಸಿನಲ್ಲಿದೆ. ಇಡೀ ರಾಜ್ಯದಲ್ಲೇ ಬೆಂಗಳೂರು ಕೊರೋನಾ ಹಾಟ್​ಸ್ಪಾಟ್ ಆಗಿ ಬದಲಾಗುತ್ತಿದೆ. ಸಿಲಿಕಾನ್​ ಸಿಟಿಯಲ್ಲಿ ರೋಗಿಗಳಿಗೆ ಕೊರೋನಾ ಆಸ್ಪತ್ರೆಗಳಲ್ಲಿ ಬೆಡ್​ಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವರು ಜೀವವನ್ನೇ ಕಳೆದುಕೊಂಡ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾಗೆ ಚಿಕಿತ್ಸೆ ನೀಡುವಂತೆ ಆದೇಶ ನೀಡಿದೆ.

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದ 73 ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಕಾಯ್ದಿರಿಸಲು ಆದೇಶ ನೀಡಿದೆ. ಕೊರೋನಾ ಭೀತಿಯಿಂದ ಕೊರೋನಾ ಲಕ್ಷಣಗಳಿರುವ ರೋಗಿಗಳಿಗೆ ಹಲವು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿದ್ದವು. ಆದರೆ, ಇನ್ನುಮುಂದೆ ಆ ರೀತಿ ಮಾಡುವಂತಿಲ್ಲ. ಬೆಂಗಳೂರಿನ ಪ್ರಮಖ ಆಸ್ಪತ್ರೆಗಳೂ ಸೇರಿದಂತೆ ಒಟ್ಟು 73 ಆಸ್ಪತ್ರೆಗಳಲ್ಲಿ ಕೊರೋನಾಗೆ ಚಿಕಿತ್ಸೆ ಸಿಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ದಿನ 997 ಪ್ರಕರಣ; ರಾಜ್ಯದಲ್ಲಿ ಒಟ್ಟು ಸಂಖ್ಯೆ 19,710ಕ್ಕೇರಿಕೆ


ಕೇಂದ್ರೀಕೃತ ಹಂಚಿಕೆ ಮೂಲಕ ರೋಗಿಗಳನ್ನು ಈ ಆಸ್ಪತ್ರೆಗಳಿಗೂ ಕಳಿಸಲಾಗುತ್ತದೆ. ರೋಗಿಗಳು ಬೇಕಿದ್ದರೆ ಸರ್ಕಾರ ನಿಗದಿ ಪಡಿಸಿರುವ ದರ ನೀಡಿ, ಬ್ಲಡ್ ರಿಪೋರ್ಟ್ ಸಮೇತ ಹೋಗಿ ಈ ಆಸ್ಪತ್ರೆಗಳಲ್ಲಿ ನೇರವಾಗಿ ಚಿಕಿತ್ಸೆ ಪಡೆಯಬಹುದು. ಲ್ಯಾಬ್ ರಿಪೋರ್ಟ್ ಇಲ್ಲದಿದ್ದರೂ ತೀವ್ರ ಅನಾರೋಗ್ಯಕ್ಕೀಡಾದ ರೋಗಿಗೆ ಈ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವಂತಿಲ್ಲ. ಕೊರೋನಾ ಸೋಂಕಿತರಿಗೆ ಯಾವುದೇ ಅನಾನುಕೂಲ ಉಂಟಾದರೆ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಬೆಂಗಳೂರಿನ ವೈದೇಹಿ, ಎಂಎಸ್ ರಾಮಯ್ಯ, ಬಿಜಿಎಸ್, ಅಪೊಲೊ, ಭಗವಾನ್ ಮಹಾವೀರ್ ಜೈನ್, ಕೊಲಂಬಿಯಾ ಏಷ್ಯಾ, ಕಿಮ್ಸ್​, ಮಲ್ಲಿಗೆ ಆಸ್ಪತ್ರೆ, ಮಣಿಪಾಲ್, ಪೀಪಲ್ ಟ್ರೀ, ಸೇಂಟ್ ಜಾನ್ಸ್​, ಸ್ಪರ್ಶ್​, ವಾಸವಿ ಮುಂತಾದ 73 ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
Published by: Sushma Chakre
First published: July 4, 2020, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading