ಕಡಿಮೆ ಬೆಲೆಗೆ ಕೋವಿಡ್ ಟೆಸ್ಟ್ ಕಿಟ್ ತಯಾರಿಸಿದ ಬೆಂಗಳೂರಿನ ಬಯೋಅಜೈಲ್ ಸಂಸ್ಥೆ

ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಕೆಲವು ಪರೀಕ್ಷಾ ಕಿಟ್‍ಗಳು ವಿಶ್ವಾಸರ್ಹತೆ ಇಲ್ಲದ ಕಾರಣ ವೈಜ್ಞಾನಿಕವಾಗಿ ಪ್ರಯೋಗ ನಡೆಸಿ ಇದನ್ನು ಹೊರತಂದಿದ್ದೇವೆ ಎಂದು ಬಯೋ ಅಜೈಲ್ ಥೆರಪಿಟಿಕ್ಸ್ ಸಂಸ್ಥೆಯ ಸಿಇಒ ದಿವ್ಯಾ ಚಂದ್ರಧಾರ ತಿಳಿಸಿದ್ದಾರೆ.

ಬಯೋ ಅಜೈಲ್ ಸಂಸ್ಥೆಯ ಕೋವಿಡ್ ಟೆಸ್ಟ್ ಕಿಟ್ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ

ಬಯೋ ಅಜೈಲ್ ಸಂಸ್ಥೆಯ ಕೋವಿಡ್ ಟೆಸ್ಟ್ ಕಿಟ್ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ

  • Share this:
ಬೆಂಗಳೂರು(ಜೂನ್ 22): ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿರುವ ಕೊರೊನಾ ಸೋಂಕು ಪಾಸಿಟಿವ್ ಅಥವಾ ನೆಗಟಿವ್ ಎಂಬುದನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ದೃಢೀಕರಿಸುವ ವೈರಲ್-ಆರ್‍ಎನ್‍ಎ (Viral-RNA test) ಕಿಟ್‍ನ್ನು ಬಯೋ ಅಜೈಲ್ ಥೆರಪೀಟಿಕ್ಸ್ (BioAgile Therapeutics) ಸಂಸ್ಥೆ ಹೊರತಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ, ಬಯೋಆಜೈಲ್ ಥೆರಪೀಟಿಕ್ ಸಂಸ್ಥಾಪಕಿ ಹಾಗು ಸಿಇಒ ದಿವ್ಯಾ ಚಂದ್ರಧಾರ, ಸಚಿವರಾದ ಬಸವರಾಜ್ ಬೊಮ್ಮಾಯಿ, ಭೈರತಿ ಬಸವರಾಜ್ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರರು ಈ ಕಿಟ್‍ನ್ನು ಸಾರ್ವಜನಿಕರ ಸೇವೆಗೆ ಇತ್ತೀಚೆಗೆ ಸಮರ್ಪಿಸಿದರು.

ಈಗ ಆ್ಯಂಟಿಬಾಡಿ ಟೆಸ್ಟ್ ಕಿಟ್​ಗಳೂ (ಪ್ರತಿಕಾಯ ಪತ್ತೆ ಪರೀಕ್ಷೆ) ಚಾಲ್ತಿಯಲ್ಲಿವೆ. ಅದರೆ, ಇವು ನಿಖರ ಫಲಿತಾಂಶ ನೀಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಐಸಿಎಂಆರ್ ಪ್ರಕಾರ ಕೋವಿಡ್ ರೋಗ ಯಾವುದೇ ವ್ಯಕ್ತಿಗೆ ತಗುಲಿದೆಯೇ ಎಂಬುದನ್ನು ವೈರಲ್-ಆರ್​ಎನ್​ಎ ಪತ್ತೆ ಪರೀಕ್ಷೆಯಿಂದ ತಿಳಿಯಬಹುದು. ಅಂದರೆ, ದೇಹದಲ್ಲಿ ವೈರಾಣುವಿನ ಆರ್​ಎನ್​ಎ ಇರುವಿಕೆಯನ್ನ ಪತ್ತೆ ಹಚ್ಚುವ ಪರೀಕ್ಷೆ. ಬಯೋ ಅಜೈಲ್ ಸಂಸ್ಥೆ ರೂಪಿಸಿರುವ ಈ ಕಿಟ್ ಬೇರೆ ದೊಡ್ಡ ಬ್ರಾಂಡ್​ನ ಕಿಟ್​ಗಳಿಗಿಂತ ಶೇ. 40ರಷ್ಟು ಕಡಿಮೆ ದರದಲ್ಲಿ ಲಭ್ಯವಿದೆ.

ಇದನ್ನೂ ಓದಿ: ಕೊರೋನಾ ಸಂದರ್ಭದಲ್ಲಿ ಎಸ್​ಎಸ್​ಎಲ್​​ಸಿ ಪರೀಕ್ಷೆ ಯಾಕೆ? - ಸರ್ಕಾರಕ್ಕೆ ಎಚ್​​ಡಿಕೆ ಪ್ರಶ್ನೆ

ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಕೆಲವು ಪರೀಕ್ಷಾ ಕಿಟ್‍ಗಳು ವಿಶ್ವಾಸರ್ಹತೆ ಇಲ್ಲದ ಕಾರಣ ವೈಜ್ಞಾನಿಕವಾಗಿ ಪ್ರಯೋಗ ನಡೆಸಿ ಇದನ್ನು ಹೊರತಂದಿದ್ದೇವೆ ಎಂದು ಬಯೋ ಅಜೈಲ್ ಥೆರಪಿಟಿಕ್ಸ್ ಸಂಸ್ಥೆಯ ಸಿಇಒ ದಿವ್ಯಾ ಚಂದ್ರಧಾರ ತಿಳಿಸಿದ್ದಾರೆ.

ಕೊರೋನಾ ರೋಗ ಪ್ರಕರಣಗಳ ಸಂಖ್ಯೆ ವಿಶ್ವದಾದ್ಯಂತ ಹೆಚ್ಚಳವಾಗಿದೆ. ಹೆಚ್ಚೆಚ್ಚು ಪ್ರಮಾಣದಲ್ಲಿ ಪರೀಕ್ಷೆಗಳನ್ನ ನಡೆಸಿ ರೋಗಿಗಳನ್ನ ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ಈ ಸಮಯದಲ್ಲಿ ಬಹಳ ಅವಶ್ಯಕ. ಕ್ಷಿಪ್ರ ಮತ್ತು ನಿಖರ ಫಲಿತಾಂಶಕ್ಕೆ ಆರ್​ಟಿ-ಪಿಸಿಆರ್ ಮೂಲಕ ವೈರಲ್-ಆರ್​ಎನ್​ಎ ಪತ್ತೆ ಪರೀಕ್ಷೆ ಉತ್ತಮವೆಂದು ಐಸಿಎಂಆರ್ ಹೇಳುತ್ತದೆ.

ಬೆಂಗಳೂರಿನವರು ದಿವ್ಯಾ ಚಂದ್ರಧಾರ:

ವೈರಲ್ ಆರ್​ಎನ್​ಎ ಕ್ಷಿಪ್ರ ಟೆಸ್ಟ್ ಕಿಟ್ ತಯಾರಿಸಿದ ಬಯೋಅಜೈಲ್ ಥೆರಪೀಟಿಕ್ಸ್ ಸಂಸ್ಥೆ ಬೆಂಗಳೂರಿನದ್ದೇ ಒಂದು ಸ್ಟಾರ್ಟಪ್. ಇದರ ಸಂಸ್ಥಾಪಕಿ ಹಾಗೂ ಸಿಇಒ ಆಗಿರುವ ದಿವ್ಯಾ ಚಂದ್ರಧಾರ ಅವರೂ ಬೆಂಗಳೂರಿನವರೇ. ಮೂಲತಃ ಸಂಶೋಧಕಿಯೂ ಆಗಿರುವ ದಿವ್ಯಾ ಅವರು ಎಡಿಎಸ್​ಒ ನ್ಯಾಚುರಲ್ಸ್ ಮೊದಲಾದ ಕಂಪನಿಗಳ ನಿರ್ದೇಶಕಿಯೂ ಆಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇವರು ಪ್ರಾರಂಭಿಸಿದ ಬಯೋಅಜೈಲ್ ಥೆರಪೀಟಿಕ್ಸ್ ಈಗ ಐಐಟಿ, ಬಾರ್ಕ್​ನಂತಹ ಸರ್ಕಾರಿ ಸಂಸ್ಥೆಗಳ ಸಹಯೋಗ ಪಡೆದುಕೊಂಡಿದೆ.

ಇದನ್ನೂ ಓದಿ: ಬಂಡವಾಳ ಹೂಡಿಕೆಗಾಗಿ ಜಪಾನ್ ರಾಯಭಾರಿ ಜೊತೆ ಡಿಸಿಎಂ ಅಶ್ವಥ್ ನಾರಾಯಣ್ ಮಾತುಕತೆಜಾಗತಿಕವಾಗಿಯೂ ಗುರುತಾಗಿರುವ ದಿವ್ಯಾ ಅವರು ಹಲವಾರು ದೇಶಗಳಲ್ಲಿ ತಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿದ್ದಾರೆ. ಇವರ ಬಯೋ ಅಜೈಲ್ ಥೆರಪೀಟಿಕ್ಸ್ ಸಂಸ್ಥೆ ಕೂಡ ಜಾಗತಿಕ ಮನ್ನಣೆ ಪಡೆದಿದೆ. ವೇಗವಾಗಿ ಬೆಳೆಯುತ್ತಿರುವ ಭಾರತೀಯ ಕಂಪನಿಗಳಲ್ಲಿ ಇದೂ ಒಂದು ಎಂದೆನ್ನಲಾಗಿದೆ.
First published: