Karnataka Schools Reopening: ವಿದ್ಯಾರ್ಥಿಗಳ ಕೋವಿಡ್​ ನೆಗಟಿವ್​ ವರದಿ ಕಡ್ಡಾಯ; ಶಾಲಾ ಆರಂಭಕ್ಕೆ ಮಾರ್ಗಸೂಚಿ ಪ್ರಕಟ

Schools Reopening guidelines ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಢಾಯವಾಗಿ ಪೋಷಕರಿಂದ ಅನುಮತಿ ಪತ್ರದ ಜೊತೆಗೆ ಆರೋಗ್ಯ ಪ್ರಮಾಣ ಪತ್ರವನ್ನು ತರಬೇಕು. ಈ ಅನುಮತಿ ಪತ್ರದಲ್ಲಿ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಇರುವುದನ್ನು ದೃಢಪಡಿಸಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಆ. 16): ಸೋಂಕು ಕಡಿಮೆ ಇರುವ ಕಡೆ ಆಗಸ್ಟ್​​ 23ರಿಂದ ಶಾಲೆ ಆರಂಭಕ್ಕೆ ಸರ್ಕಾರ ಸಿದ್ದತೆ ನಡೆಸಿದ್ದು, ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಿದೆ. ಪಾಸಿಟಿವಿಟಿ ರೇಟ್​ 2ಕ್ಕಿಂತ ಕಡಿಮೆ ಇರುವ ಕಡೆ 9 ರಿಂದ ದ್ವಿತೀಯ ಪಿಯುಸಿ ವರೆಗೆ ಶಾಲೆ- ಕಾಲೇಜು ಆರಂಭ ಮಾಡುವಂತೆ ಸೂಚಿಸಿದ್ದು, ಶಾಲಾ -ಕಾಲೇಜುಗಳು ಸರ್ಕಾರ ಪ್ರಕಟಿಸಿರುವ ಈ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯವಾಗಿದೆ. ಕಳೆದೊಂದು ವರ್ಷದ ಬಳಿಕ ಭೌತಿಕವಾಗಿ ಶಾಲೆ ಆರಂಭಕ್ಕೆ ಮುಂದಾಗುತ್ತಿರುವುದರಿಂದ, ಶಾಲಾ ಪ್ರಾರಂಭಕ್ಕೆ ಮುನ್ನ ಒಂದು ವಾರ ಕಡ್ಡಾಯವಾಗಿ ಶಾಲೆಯನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸಬೇಕು ಎಂದು ತಿಳಿಸಿದೆ.

    ಸರ್ಕಾರ ಇಂದು 9 ಮತ್ತು 10ನೇ ತರಗತಿಯ ಮಾರ್ಗಸೂಚಿಯನ್ನು ಮಾತ್ರ ಪ್ರಕಟಿಸಿದ್ದು, ಪಿಯು ಕಾಲೇಜು ಮಾರ್ಗಸೂಚಿ ಪ್ರಕಟವಾಗಿಲ್ಲ. ಶಾಲಾ ಮಾರ್ಗಸೂಚಿ ನೋಡಿಕೊಂಡು  ಪಿಯು ಬೋರ್ಡ್ ಪ್ರಥಮ, ದ್ವಿತೀಯ ಪಿಯು ಕಾಲೇಜಿನಲ್ಲಿ ಅನುಸರಿಸಬೇಕಾದ ಕೊರೋನಾ  ಮಾರ್ಗಸೂಚಿ ನಾಳೆ‌ ಪ್ರಕಟಿಸುವ ಸಾಧ್ಯತೆ ಇದೆ.

    ಮಾರ್ಗಸೂಚಿಯ ಪ್ರಮುಖ ಅಂಶ

    • ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಢಾಯವಾಗಿ ಪೋಷಕರಿಂದ ಅನುಮತಿ ಪತ್ರದ ಜೊತೆಗೆ ಮಗುವಿನ ಆರೋಗ್ಯ ಪ್ರಮಾಣ ಪತ್ರವನ್ನು ತರಬೇಕು. ಈ ಅನುಮತಿ ಪತ್ರದಲ್ಲಿ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಇರುವುದನ್ನು ದೃಢಪಡಿಸಬೇಕು

    • ಒಂದು ಕೊಠಡಿಗೆ ಕೇವಲ 20 ಮಕ್ಕಳಿಗೆ ಮಾತ್ರ ಕೂರಲು ಅವಕಾಶ. ಜೊತೆಗೆ ಒಂದು ಬೆಂಚ್​ನಲ್ಲಿ ಒಂದೇ ಮಗುವಿಗೆ ಕೂರಲು ಅವಕಾಶ ನೀಡಬೇಕು.

    • ಫ್ರೌಢಶಾಲೆಗಳನ್ನು ಅಂದರೆ 9 ಮತ್ತು 10ನೇ ತರಗತಿಯ ಭೌತಿಕ ತರಗತಿಗಳನ್ನು ಬೆಳಗಿನ ಅವಧಿ ಮಾತ್ರ ನಡೆಸಬೇಕು

    • ಮಕ್ಕಳು ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅವರು ಶಾಲೆ ಆವರಣ ಪ್ರವೇಶಿಸುತ್ತಿದ್ದಂತೆ ಹ್ಯಾಂಡ್​​ ಸ್ಯಾನಿಟೈಸರ್​ ಅಥವಾ ಸಾಬೂನಿನಿಂದ ಕೈ ಸ್ವಚ್ಛಕ್ಕೆ ಅವಕಾಶ ನೀಡಬೇಕು. ಧರ್ಮಲ್​ ಸ್ಕ್ಯಾನರ್​ನಿಂದ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರೀಕ್ಷಿಸಬೇಕು.

    • ಶಾಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ವೇಳೆ ದಟ್ಟಣೆ ಆಗದಂತೆ ನೋಡಿಕೊಳ್ಳಬೇಕು.
      ವಿದ್ಯಾರ್ಥಿಗಳ ದಿನನಿತಯದ ಆರೋಗ್ಯದ ಸ್ಥಿತಿ ವಿವರ ಪಡೆಯಬೇಕು. ಯಾವುದೇ ವಿದ್ಯಾರ್ಥಿಗೆ ಕೆಮಮು, ಜ್ವರ, ನೆಗಡಿ, ಮೂಗು ಸೋರಿಕೆ ಕಂಡು ಬಂದರೆ, ಐಸೋಲೇಷನ್​ನಲ್ಲಿ ತಾತ್ಕಾಲಿಕವಿರಿಸಿ, ಬಳಿಕ ಪೋಷಕರು ಸಂಪರ್ಕಿಸಿ ಮನೆಗೆ ಕಳುಹಿಸಬೇಕು.

    • ವಿದ್ಯಾರ್ಥಿಗಳು ಮನೆಯಿಂದಲೇ ನೀರು ಮತ್ತು ಆಹಾರ ತರುವಂತೆ ಸೀಚಿಸಬೇಕು. ಜೊತೆಗೆ ಅವಶ್ಯಕತೆ ಇದ್ದಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
      ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್​ ಲ್ಯಾಬ್​​, ಒಳಾಂಗಡ ಕ್ರೀಡಾಗಂಣದಲ್ಲಿ ಶುಚಿತ್ವದ ಜೊತೆ ಸಾಮಾಜಿಕ ಅಂತರ ಕಾಪಾಡುವುದು ಅವಶ್ಯ

    • ವಿದ್ಯಾರ್ಥಿಗಳು ತಮ್ಮ ನಡುವೆ ವಸ್ತುಗಳನ್ನು ಪರಸ್ಪರ ವಿನಿಮಯ ಮಾಡದಂತೆ ನೋಡಿಕೊಳ್ಳಬೇಕು

    • ಶಾಲೆಗೆ ಹಾಜರಾಗುವ ಶಿಕ್ಷಕರು ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯ. ಜೊತೆಗೆ ಕರ್ತವ್ಯಕ್ಕೆ ಹಾಜರಾಗುವ ಮೂರು ದಿನ ಮುಂಚಿತ ಆರ್​ಟಿಪಿಸಿಆರ್​ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು

    • ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಮಾಸ್ಕ್​ ಧರಿಸುವುದು ಕಡ್ಡಾಯ

    • 50 ವರ್ಷ ಮೀರಿದ ಶಿಕ್ಷಕರು ಮಾಸ್ಕ್​ ಜೊತೆಗೆ ಫೇಸ್​ ಶೀಲ್ಡ್​ ಧರಿಸುವುದು ಉತ್ತಮ.
      ಆಗ್ಗಿಂದಾಗ್ಗೆ ಕೈ ಶುಚಿತ್ವ ಕಾಪಾಡಿಕೊಳ್ಳಬೇಕು

    • ಮುಖ್ಯ ಶಿಕ್ಷಕರು ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಒಂದು ಡೋಸ್​ ಲಸಿಕೆ ಪಡೆದಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಜೊತೆಗೆ ಎರಡನೇ ಡೋಸ್​​ ಲಸಿಕೆ ಶೀಘ್ರವಾಗಿ ಪಡೆಯಲು ಪ್ರಯತ್ನಿಸಬೇಕು

    • ವಿದ್ಯಾರ್ಥಿಗಳನ್ನು ಗುಂಪುಗೂಡಿಸುವಂತಹ ಸಭೆ, ಸಮಾರಂಭ, ಹಬ್ಬ ಮತ್ತು ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಾರದು.

    • ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗಳು ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ.

    • ಮಕ್ಕಳನ್ನು ಶಾಲೆಗೆ ಕಳುಹಿಸಲು ಕಡ್ಡಾಯವಾಗಿ ಲಿಖಿತವಾಗಿ ಪೋಷಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾಗಿದೆ.

    Published by:Seema R
    First published: