HOME » NEWS » Coronavirus-latest-news » KARNATAKA GOVERNMENT OFFERS A BUMPER SALARY BONUS FOR BMTC DRIVERS WHO WORKED HARD DURING COVID 19 LOCKDOWN HK

ಕೊರೋನಾ ಭೀತಿ ನಡುವೆ ಜೀವದ ಹಂಗು ತೊರೆದು ಕರ್ತವ್ಯ ; ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್ ಘೋಷಣೆ

ರಾಜ್ಯದಲ್ಲಿ ಲಾಕ್ ಡೌನ್ ಹೇರಿದ್ದ ಸಂದರ್ಭ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಿದ  ಒಟ್ಟು 3,397 ಮಂದಿ ಸಿಬ್ಬಂದಿಗೆ ಸಂಬಳ ಹೊರತುಪಡಿಸಿ ದಿನ ಒಂದಕ್ಕೆ 250 ರೂಪಾಯಿಗಳಂತೆ ಬೋನಸ್ ನೀಡಲು ಬಿಎಂಟಿಸಿ ನಿರ್ಧರಿಸಿದೆ

news18-kannada
Updated:July 17, 2020, 12:21 PM IST
ಕೊರೋನಾ ಭೀತಿ ನಡುವೆ ಜೀವದ ಹಂಗು ತೊರೆದು ಕರ್ತವ್ಯ ; ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್ ಘೋಷಣೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜುಲೈ.16): ಕೊರೋನಾ ಸೋಂಕಿನ ಭೀತಿಯ ನಡುವೆಯೂ ತಮ್ಮ ಜೀವದ ಹಂಗುನ್ನು ತೊರೆದು ಕರ್ತವ್ಯ ನಿರ್ವಹಿಸಿದ ಬಿಎಂಟಿಸಿ ನೌಕರರಿಗೆ ಬಿಎಂಟಿಸಿ ಆಡಳಿತ ಮಂಡಳಿ ಬಂಪರ್ ಗಿಫ್ಟ್ ಅನ್ನು ಘೋಷಣೆ ಮಾಡಿದೆ.

ರಾಜ್ಯದಲ್ಲಿ ಲಾಕ್ ಡೌನ್ ಹೇರಿದ್ದ ಸಂದರ್ಭ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಿದ  ಒಟ್ಟು 3,397 ಮಂದಿ ಸಿಬ್ಬಂದಿಗೆ ಸಂಬಳ ಹೊರತುಪಡಿಸಿ ದಿನ ಒಂದಕ್ಕೆ 250 ರೂಪಾಯಿಗಳಂತೆ ಬೋನಸ್ ನೀಡಲು ಬಿಎಂಟಿಸಿ ನಿರ್ಧರಿಸಿದೆ.

ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ  ಲಕ್ಷ್ಮಣ ಸವದಿ ಅನುಮತಿ ಪಡೆದು ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ, ಎಂಡಿ ಶಿಖಾ ಅವರು ಸಭೆಯಲ್ಲಿ ಚರ್ಚಿಸಿ ಅನುಮೋದನೆ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.



ಲಾಕ್‌ಡೌನ್ ಅವಧಿಯಲ್ಲಿ ಕಾರ್ಯನಿರ್ವಹಿಸಿದ 3,397 ನೌಕರರಿಗೆ ದಿನಕ್ಕೆ 250 ರೂಪಾಯಿ ವಿಶೇಷ ಭತ್ಯೆ ನೀಡಲು ಬಿಎಂಟಿಸಿ ನಿರ್ಧರಿಸಿದೆ. ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ವಿಶೇಷ ಭತ್ಯೆ ನೀಡಿದ್ದು, ಅದೇ ಮಾದರಿಯಲ್ಲಿ ಬಿಎಂಟಿಸಿ ಸಿಬ್ಬಂದಿಗೂ ಭತ್ಯೆ ನೀಡಬಹುದು ಎಂಬ ಪ್ರಸ್ತಾವನೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಅನುಮೋದಿಸಿದೆ. ಈ ನೌಕರರಿಗೆ ಭತ್ಯೆ ನೀಡಲು 95.92 ಲಕ್ಷ ಮೊತ್ತ ನಿಗದಿ ಮಾಡಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಇದನ್ನೂ ಓದಿ : ಕ್ಯಾನ್ಸರ್ ಗೆ ಬಲಿಯಾದ ವಿದ್ಯಾರ್ಥಿನಿ - ಕೊನೆಯ ಪರೀಕ್ಷೆ ಬರೆಯುವ ಮುನ್ನವೇ ಇಹಲೋಕ ತ್ಯಜಿಸಿದ ವಿದ್ಯಾರ್ಥಿನಿಯ ಕರುಣಾಜನಕ ಕಥೆ

ಈ ಕುರಿತು ಆದೇಶ ಹೊರಡಿಸಿರುವ ಬಿಎಂಟಿಸಿಯ ಎಂಡಿ ಶಿಖಾ,  ಮಾರ್ಚ್​ 26 ರಿಂದ ದಿನಾಂಕ ಏಪ್ರಿಲ್ 20 ರವರೆಗೆ ಲಾಕ್ ಡೌನ್ ಅವಧಿಯಲ್ಲಿ ಜನತೆಗೆ ತುರ್ತು ಸೇವಾ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ನಿರ್ದೇಶನದನ್ವಯ ಪೊಲೀಸ್, ಆರೋಗ್ಯ ಇಲಾಖೆ, ಸಫಾಯಿ ಕಾರ್ಮಿಕರು ಮತ್ತು ಆಶಾ ಕಾರ್ಯಕರ್ತರಿಗೆ ಸಾರಿಗೆ ಸೌಲಭ್ಯವವನ್ನು ಒದಗಿಸಿದ್ದು, ಈ ಕಠಿಣ ಅವಧಿಯಲ್ಲಿ ತಮ್ಮ ಜೀವನ ಹಂಗನ್ನು ತೊರೆದು 3397 ಸಿಬ್ಬಂದಿಗಳು ( ದರ್ಜೆ-3 ಮತ್ತು ದರ್ಜೆ-4) ಸ್ವಯಂ ಪ್ರೇರಿತರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇವರು ಕರ್ತವ್ಯ ನಿಷ್ಠೆಯನ್ನು ಪ್ರಶಂಸಿಸಿ ಇವರ ಶ್ಲಾಘನೀಯ ಸೇವೆಗಾಗಿ ಪ್ರತಿ ನೌಕರರಿಗೆ ಒಂದು ದಿನಕ್ಕೆ 250 ರೂಪಾಯ ರಂತೆ ವಿಶೇಷ ಭತ್ಯೆಯನ್ನು ನೀಡಿ ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಕೊರೋನಾ ವಾರಿಯರ್ಸ್​ ಕೋವಿಡ್ ಸೋಂಕಿಗೆ ಒಳಪಟ್ಟು ಮೃತಪಟ್ಟರೆ 30 ಲಕ್ಷ ರೂಪಾಯಿಗಳ ವಿಮೆ ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಿಸಿತ್ತು.
Published by: G Hareeshkumar
First published: July 17, 2020, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories