HOME » NEWS » Coronavirus-latest-news » KARNATAKA GOVERNMENT GIVES RELIEF TO WEDDING ON COMPLETE LOCKDOWN DAY SUNDAY SHM

ಭಾನುವಾರ ಲಾಕ್ ಡೌನ್ ಜಾರಿಯಲ್ಲಿದ್ದರೂ ಮದುವೆಗೆ ಅವಕಾಶ ಕೊಟ್ಟ ಸರ್ಕಾರ

ಈ ಹಿಂದೆ ಭಾನುವಾರ ಸಂಪೂರ್ಣ ಲಾಕ್​ಡೌನ್​ ಹೇರಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಆದರೀಗ, ಮದುವೆ ಸಮಾರಂಭಗಳಿಗೆ ಮಾತ್ರ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

news18-kannada
Updated:May 23, 2020, 12:05 PM IST
ಭಾನುವಾರ ಲಾಕ್ ಡೌನ್ ಜಾರಿಯಲ್ಲಿದ್ದರೂ ಮದುವೆಗೆ ಅವಕಾಶ ಕೊಟ್ಟ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಮೇ 31 ವರಗೆ  ಲಾಕ್ ಡೌನ್ ಜಾರಿಯಲ್ಲಿದೆ. ಅದರಲ್ಲೂ ಭಾನುವಾರ ಪೂರ್ಣ ಲಾಕ್ ಡೌನ್ ಜಾರಿಯಲ್ಲಿ ಇರುತ್ತೆ, ಬೆಳ್ಳಗೆ 7 ರಿಂದ ಸಂಜೆ 7 ರ ತನಕ ಅವಶ್ಯಕತೆ ಇಲ್ಲದೆ ಯಾವುದೇ ಚಟುವಟಿಕೆಗಳು, ಸಂಚಾರ ಎಲ್ಲವನ್ನೂ ನಿಷೇಧ ಮಾಡಿ ಭಾನುವಾರ ಕಟ್ಟುನಿಟ್ಟಾಗಿ ಸರ್ಕಾರ ಲಾಕ್ಡೌನ್ ಜಾರಿ ಮಾಡಿತ್ತು. 

ಆದರೆ ಭಾನುವಾರ ಸಮಾರಂಭ ಮಾಡಲು ಅನುಮತಿ ನೀಡಿದೆ ಇದು ವಿಶೇಷ ಪ್ರಕರಣವೆಂದು ಪರಿಗಣಿಸಿರುವ ಸರ್ಕಾರ  ಮದುವೆ ಸಮಾರಂಭಗಳಿಗೆ ವಿನಾಯಿತಿ ಘೋಷಿದೆ. ಪ್ರತಿ ಭಾನುವಾರ ಪೂರ್ಣ ದಿನದ ಲಾಕ್ ಡೌನ್ ಎಂದು ಈ ಹಿಂದೆ ಆದೇಶಿಸಿದ ಸರ್ಕಾರ ಮದುವೆಗೆ ವಿನಾಯಿತಿ ನೀಡಿದೆ. ಕಾರಣ ಮದುವೆಗಳು ಪೂರ್ವ ನಿರ್ಧಾರಿತ ಕಾರ್ಯಕ್ರಮವಾಗಿದ್ದು, ಈ ಹಿಂದೆಯೇ ಮದುವೆ ಕಾರ್ಯಕ್ರಮಗಳಿಗೆ ದಿನಾಂಕ ನಿಗದಿಯಾಗಿರುತ್ತದೆ. ಆದ್ದರಿಂದ ಜನರಿಗೆ ತೊಂದರೆ ಆಗಬಾರದು ಎಂಬ ಹಿನ್ನೆಲೆ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಇದನ್ನೂ ಓದಿ: ರೋಗಲಕ್ಷಣ ಇಲ್ಲದ ಸೋಂಕಿತರಿಗೆ ಆಸ್ಪತ್ರೆವಾಸದ ಅವಧಿ ಇಳಿಕೆ? ಹೊರರಾಜ್ಯಗಳಿಂದ ಬಂದವರಿಗೆ ಮನೆಯಲ್ಲೇ ಕ್ವಾರಂಟೈನ್

ಆದರೆ ಮದುವೆಯಲ್ಲಿ ಗರಿಷ್ಠ 50 ಜನ ಮಾತ್ರ ಭಾಗವಹಿಸುವ ನಿಯಮ ಕಡ್ಡಾಯ ಪಾಲನೆಗೆ ಸೂಚನೆ ಇದೆ.  ಸಾಮಾಜಿಕ ಅಂತರ ಸೇರಿದಂತೆ ಕೊರೋನಾ ಮಾರ್ಗಸೂಚಿ  ಪಾಲನೆಯೊಂದಿಗೆ ಸರಳ ವಿವಾಹ ಮಾಡಬಹುದಾಗಿದೆ. ಈ‌ ಹಿಂದಿನ ಆದೇಶ ಮಾರ್ಪಡಿಸಿ ಹೊಸ ಆದೇಶವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶನಿ ಟಿ ಕೆ ಅನಿಲ್ ಕುಮಾರ್ ಮತ್ತು SDRF ಸದಸ್ಯರು  ಹೊರಡಿಸಿದ್ದಾರೆ.

ಇದನ್ನೂ ಓದಿ: ಒಂದೂಕಾಲು ಲಕ್ಷ ದಾಟಿದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ

ಭಾನುವಾರ ಮದುವೆ ಸಮಾರಂಭ ಅವಕಾಶ ಮಾಡಿಡುವಂತೆ ಸಾರ್ವಜನಿಕರು ಸಹ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈಗ ಸರ್ಕಾರ ಜನರ ಮನವಿಗೆ ಸ್ಪಂದಿಸಿ ಭಾನುವಾರ ಲಾಕ್ ಡೌನ್ ಜಾರಿಯಿದ್ರು ಮದುವೆ ಸಮಾರಂಭ ನಡೆಸಲು ಅನುಮತಿ ಕೊಟ್ಟಿದೆ.
First published: May 23, 2020, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories