HOME » NEWS » Coronavirus-latest-news » KARNATAKA GOVERNMENT EXEMPTED BAKERIES RH

ಬೇಕರಿಗಳ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ; ಪಾರ್ಸಲ್​ಗಷ್ಟೇ ಅವಕಾಶ

ದಿನದಿಂದ ದಿನಕ್ಕೆ  ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ಮಾರಕ ಸೋಂಕು ನಿಯಂತ್ರಣಕ್ಕೆ ಸಿಗದೆ ಎಲ್ಲೆಡೆ ವ್ಯಾಪಿಸುತ್ತಿದೆ. ಈ ನಿಟ್ಟಿನಲ್ಲಿ ಲಾಕ್​ಡೌನ್​ ಇನ್ನು ಕೆಲವು ವಾರ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 

news18-kannada
Updated:April 6, 2020, 7:15 PM IST
ಬೇಕರಿಗಳ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ; ಪಾರ್ಸಲ್​ಗಷ್ಟೇ ಅವಕಾಶ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು: ಮಾರಕ ಕೊರೋನಾ ಸೋಂಕು ನಿಯಂತ್ರಣದ ಉದ್ದೇಶದಿಂದ ಇಡೀ ದೇಶವನ್ನು ಮಾ.24ರಿಂದ ಏಪ್ರಿಲ್ 14ರವರೆಗೆ ಲಾಕ್​ಡೌನ್ ಮಾಡಲಾಗಿದೆ. ಈ ವೇಳೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳು ಹಾಗೂ ಮೆಡಿಕಲ್ ಹೊರತುಪಡಿಸಿ ಉಳಿದೆಲ್ಲಾ, ವ್ಯಾಪಾರ-ವಹಿವಾಟನ್ನು ನಿರ್ಬಂಧಿಸಲಾಗಿದೆ. ಈಗಾಗಲೇ ಲಾಕ್​ಡೌನ್​ ಮಾಡಿ 14 ದಿನಗಳು ಕಳೆದಿದ್ದು, ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಬೇಕರಿಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಲಾಕ್ ಡೌನ್​ ಸಮಯದಲ್ಲಿ ಬೇಕರಿಗಳು ತೆರೆಯಲು ರಾಜ್ಯ ಸರ್ಕಾರ ವಿನಾಯಿತಿ‌ ನೀಡಿದೆ. ಬೇಕರಿ, ಮಿಠಾಯಿ ಸಿಹಿ ತಿಂಡಿ ತಯಾರಿ ಮಳಿಗೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ,  ಬೇಕರಿಗಳ ಬಳಿ ತಿನ್ನಲು ಅವಕಾಶವಿಲ್ಲ, ಬದಲಿಗೆ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಿದೆ. ಈ ವೇಳೆ ಅಂಗಡಿಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಈವರೆಗೂ 163 ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಏಪ್ರಿಲ್ 14ರವರೆಗೂ ಲಾಕ್​ಡೌನ್​ ಇರಲಿದೆ. ದಿನದಿಂದ ದಿನಕ್ಕೆ  ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ಮಾರಕ ಸೋಂಕು ನಿಯಂತ್ರಣಕ್ಕೆ ಸಿಗದೆ ಎಲ್ಲೆಡೆ ವ್ಯಾಪಿಸುತ್ತಿದೆ. ಈ ನಿಟ್ಟಿನಲ್ಲಿ ಲಾಕ್​ಡೌನ್​ ಇನ್ನು ಕೆಲವು ವಾರ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಓದಿ: ಕೊರೋನಾ ಲಾಕ್ ಡೌನ್ – ಬೆಳೆ ಹಾನಿಗೆ ಎಕರೆಗೆ 10 ರಿಂದ 20 ಸಾವಿರ ಪರಿಹಾರ ನೀಡಿ ; ಕುಮಾರಸ್ವಾಮಿ ಆಗ್ರಹ
First published: April 6, 2020, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories