ಧಾರವಾಡದಲ್ಲಿ ಕೊರೋನಾ ಕಾವು: ಕೋವಿಡ್​​-19 ಕುರಿತು ಅಬಕಾರಿ ಇಲಾಖೆಯಿಂದ ಜಿಲ್ಲಾದ್ಯಂತ ಜಾಗೃತಿ ಅಭಿಯಾನ

ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕುಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಸ್ತೆಗೆ ಇಳಿದು ಕೊವಿಡ್-19 ಹರಡುವುದನ್ನು ತಪ್ಪಿಸುವುದಕ್ಕಾಗಿ ಈ ಜಾಗೃತಿ ಅಭಿಯಾನ ಮಾಡಲಾಗಿದೆ.

news18-kannada
Updated:July 16, 2020, 8:00 PM IST
ಧಾರವಾಡದಲ್ಲಿ ಕೊರೋನಾ ಕಾವು: ಕೋವಿಡ್​​-19 ಕುರಿತು ಅಬಕಾರಿ ಇಲಾಖೆಯಿಂದ ಜಿಲ್ಲಾದ್ಯಂತ ಜಾಗೃತಿ ಅಭಿಯಾನ
ಸಾಂದರ್ಭಿಕ ಚಿತ್ರ
  • Share this:
ಧಾರವಾಡ(ಜು.16): ಧಾರವಾಡ ಜಿಲ್ಲೆಯಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಲಾಕ್​​ಡೌನ್ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗದ ಕುರಿತು ಮಾಹಿತಿ ಹಾಗೂ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕುಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಸ್ತೆಗೆ ಇಳಿದು ಕೊವಿಡ್-19 ಹರಡುವುದನ್ನು ತಪ್ಪಿಸುವುದಕ್ಕಾಗಿ ಈ ಜಾಗೃತಿ ಅಭಿಯಾನ ಮಾಡಲಾಗಿದೆ. ಕಡ್ಡಾಯ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಪಾನ್ ಬೀಡಾ, ಗುಟುಕಾ ಅಗೆದು ಸಾರ್ವಜನಿಕವಾಗಿ ಉಗುಳದಿರುವುದು‌. ಗುಂಪು ಗುಂಪಾಗಿ ಒಂದಡೆ ಸೇರದಿರುವಂತೆ, ಸ್ಯಾನಿಟೈಜರ್ ಅಥವಾ ಸೋಪಿನಿಂದ ಪದೇ ಪದೆ ಕೈ ಸ್ವಚ್ಛಗೊಳಿಸುವ ಕುರಿತು ಜನ ಜಾಗೃತಿಯನ್ನು ಮೂಡಿಸಿದ್ದರು.

ಅಗತ್ಯ ಸೇವಗಳನ್ನು ಒದಗಿಸುವ ಅಂಗಡಿ, ಮನೆಗಳಿಗೆ ತೆರಳಿದ ಅಧಿಕಾರಿಗಳು ಜನರಿಗೆ ಇವುಗಳ ಮಹತ್ವ ತಿಳಿಸಿದ್ರು. ನೂಲ್ವಿ ಗ್ರಾಮದ ಕೆ.ಬಿ.ಡಿ. ಡಿಸ್ಟಲರಿ ಲಿಕ್ವಿಡ್ ಪ್ಯಾಕ್ಟರಿಗೆ ಭೇಟಿ ನೀಡಿದ ಅಬಕಾರಿ ಉಪ ಆಯುಕ್ತ ಶಿವನಗೌಡರ ನೇತೃತ್ವದ ತಂಡ, ಕಾರ್ಖಾನೆಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಬಳಕೆ, ಥರ್ಮಲ್ ಸ್ಕ್ಯಾನಿಂಗ್, ಪಲ್ಸ್ ಆಕ್ಸಿ ಮೀಟರ್ ಉಪಯೋಗಿಸುವ ಕುರಿತು ಪರಿಶೀಲನೆ ನಡೆಸಿದರು. ಸಾಮಾಜಿಕ ಅಂತರದೊಂದಿಗೆ ಕರ್ತವ್ಯ ನಿರ್ವಹಿಸುವಂತೆ ಕಾರ್ಮಿಕರಿಗೆ ತಿಳಿ ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇದುವರೆಗೂ 720 ಪೊಲೀಸರಿಗೆ ಕೊರೋನಾ: ಶಿವಾಜಿನಗರ ಸೇರಿದಂತೆ ಹಲವು ಠಾಣೆಗಳು ಸೀಲ್​ಡೌನ್​​

ಧಾರವಾಡದಲ್ಲಿ ಅಬಕಾರಿ ಉಪನಿರೀಕ್ಷಕ ಎಸ್.ಎಸ್.ಮುಜಾವರ್, ಹುಬ್ಬಳ್ಳಿಯಲ್ಲಿ ಅಬಕಾರಿ ಉಪನಿರೀಕ್ಷಕ ಶ್ರೀಶೈಲ ಸಂಗೊಳ್ಳಿ, ನವಲಗುಂದಲ್ಲಿ ಅಬಕಾರಿ ಉಪನಿರೀಕ್ಷಕ ಟಿ.ಜೆ. ಗುಂಜೀಕರ, ಕುಂದಗೋಳದಲ್ಲಿ ಅಬಕಾರಿ ಉಪನಿರೀಕ್ಷಕ ಪ್ರೇಮಸಿಂಗ್ ಲಮಾಣಿ, ಕಲಘಟಗಿಯಲ್ಲಿ ಅಬಕಾರಿ ಉಪನಿರೀಕ್ಷಕ ಜಿ.ಬಿ.ಗುಲೆ ನೇತೃತ್ವದಲ್ಲಿ ಜನಜಾಗೃತಿ ಕಾರ್ಯಕ್ರಗಳು ಜರುಗಿದವು.
Published by: Ganesh Nachikethu
First published: July 16, 2020, 7:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading