ಪೊಲೀಸರಲ್ಲಿ ಹೆಚ್ಚಾದ ಕೊರೋನಾ ಸೋಂಕು; ಎಲ್ಲಾ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಿಜಿಪಿ ಸೂಚನೆ

ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೊಲೀಸರು ಈ ತಿಂಗಳ ಒಳಗಾಗಿ ಕೊವೀಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ದಿನೇ ದಿನೇ ಖಾಕಿ ಪಡೆಗೆ ಕೊರೊನಾ ಕಂಟಕವಾಗುತ್ತಿದ್ದು ಹಲವು ಪೊಲೀಸರು ಕೊವೀಡ್ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

news18-kannada
Updated:June 30, 2020, 12:37 PM IST
ಪೊಲೀಸರಲ್ಲಿ ಹೆಚ್ಚಾದ ಕೊರೋನಾ ಸೋಂಕು; ಎಲ್ಲಾ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಿಜಿಪಿ ಸೂಚನೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಜೂ.30): ಮಾಹಾಮಾರಿ ಕೊರೋನಾ ವೈರಸ್ ಬೆಂಗಳೂರಿನಲ್ಲಿ ತಲ್ಲಣ ಸೃಷ್ಟಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು ಸರ್ಕಾರ ಹಾಗೂ ಅಧಿಕಾರಿಗಳ ನಿದ್ದೆ ಕೆಡಿಸಿದೆ. ಅದರಲ್ಲೂ ಪೊಲೀಸ್ ಇಲಾಖೆಯನ್ನು ಬೆಂಬಿಡದೆ ಕಾಡುತ್ತಿರುವ ಕೊರೋನಾ ವೈರಸ್ 140ಕ್ಕೂ ಹೆಚ್ಚು ಪೊಲೀಸರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಬೆಂಗಳೂರು ನಗರವೊಂದರಲ್ಲಿಯೇ ಪ್ರತಿ ದಿನ ಮೂರರಿಂದ ನಾಲ್ಕು ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗುತ್ತಿದ್ದು, ಇಲಾಖೆಗೆ ತಲೆನೋವು ತಂದಿದೆ. ಆದ್ದರಿಂದ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಪೊಲೀಸರು ಈ ತಿಂಗಳ ಒಳಗಾಗಿ ಕೊವೀಡ್ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ದಿನೇ ದಿನೇ ಖಾಕಿ ಪಡೆಗೆ ಕೊರೊನಾ ಕಂಟಕವಾಗುತ್ತಿದ್ದು ಹಲವು ಪೊಲೀಸರು ಕೊವೀಡ್ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು, ಪೊಲೀಸರು ಹಾಗೂ ಆರೋಪಿಗಳಲ್ಲಿ ಸೋಂಕು ಕಂಡು ಬರುತ್ತಿರುವ ಪ್ರಕರಣಗಳು ಜಾಸ್ತಿಯಾಗಿದ್ದು, ಇದರಿಂದ ಇಡೀ ಪೊಲೀಸ್ ಠಾಣೆ ಸೀಲ್ ಡೌನ್ ಆಗುತ್ತಿದೆ. ಈಗಾಗಲೇ ನಗರದಲ್ಲಿ 31 ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿವೆ‌. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 890 ಪೊಲೀಸರನ್ನ ಕ್ವಾರಂಟೈನ್ ಮಾಡಲಾಗಿದ್ದು ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಸಹ ಎದುರಾಗಿದೆ‌. ಹಾಗೂ ನಗರ ಪೊಲೀಸ್ ಕಮೀಷನರ್ ಕಚೇರಿ, ಸಿಸಿಬಿ ಕಚೇರಿ, ಸಂಚಾರ ವಿಭಾಗ ಕಚೇರಿ, ಎಸಿಬಿ ಸೇರಿ ಹಲವಾರು ಠಾಣೆಗಳು ಸೀಲ್ ಡೌನ್ ಮಾಡಲಾಗಿದೆ.


ಪೊಲೀಸರಿಗೆ ಸೋಂಕು ತಗುಲಿ ಪೊಲೀಸ್ ಠಾಣೆಗಳು ಕ್ಲೋಸ್ ಆಗಿದ್ದು ಸಿಬ್ಬಂದಿ ಠಾಣೆಗೆ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ರಾತ್ರಿ ಕರ್ಪ್ಯೂ ಜಾರಿಯಾಗಿದ್ದು ಮುಂದಿನ ದಿನಗಳಲ್ಲಿ ಹೊಸ ಷರತ್ತುಗಳೊಂದಿಗೆ ಲಾಕ್ ಡೌನ್ ಜಾರಿಯಾದಲ್ಲಿ ಸಿಬ್ಬಂದಿ ಕೊರತೆ ಎದುರಾಗುವ ಸಾಧ್ಯತೆ ಸಹ ಇದೆ. ಅದ್ದರಿಂದ ನಗರದ ಎಲ್ಲ ಠಾಣೆಗಳ ಸಿಬ್ಬಂದಿ ಕೊವೀಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading