ಆತಂಕ ಮೂಡಿಸುತ್ತಿರುವ Delta plus variant​; ಹೊಟ್ಟೆ ನೋವು, ವಾಂತಿ-ಭೇದಿ ಈ ಸೋಂಕಿನ ಲಕ್ಷಣ

ಮೂರ‌ನೇ ಅಲೆಗೆ ಇದೇ ವೇರಿಯೆಂಟ್‌ ಕಾರಣವಾಗುವ ಸಾಧ್ಯತೆಗಳು ದಟ್ಟವಾಗಿದೆ.‌ ಹೀಗಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆದು ಅಂತ ಹೇಳಿದ್ದಾರೆ ತಜ್ಞರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ. 25): ಕೊರೋನಾ ಸೋಂಕಿನ ರೂಪಾಂತರಿ ತಳಿ ಡೆಲ್ಟಾ ವೈರಸ್​ ಈಗ ಎಲ್ಲಡೆ ಆತಂಕ ಮೂಡಿಸಿದೆ. ದೇಶದ 11 ರಾಜ್ಯಗಳಲ್ಲಿ 48 ಡೆಲ್ಟಾ ಪ್ಲಸ್​ ರೂಪಾಂತರ ತಳಿ ಕಂಡು ಬಂದಿದ್ದು, ರಾಜ್ಯದಲ್ಲಿ ಕೂಡ  ಡೆಲ್ಟಾ ವೈರಸ್​ ಸೋಂಕು ಕಾಣಿಸಿಕೊಂಡಿದೆ. ವಿಶೇಷ ಎಂದರೆ, ಈ ಡೆಲ್ಟಾ ಪ್ಲಸ್​ ಸೋಂಕು ಯಾವುದೇ ಟ್ರಾವೆಲಿಂಗ್​ ಹಿಸ್ಟರಿ ಇಲ್ಲದಂತಹವರಲ್ಲೂ ಕಂಡು ಬರುತ್ತಿರುವುದು ಆತಂಕ ಮೂಡಿಸಿದೆ. ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ಕಾರಣದಿಂದ ಮೂರನೇ ಅಲೆ ಭಯಾನಕವಾಗುವ ಸಾಧ್ಯತೆ ಇದೆಯಂತೆ. ಹೀಗಾಗಿ ಕರುನಾಡಿನ ಮೇಲೆ ಕೊರೋನಾ ಮೂರ‌ನೆ ಅಲೆಯ ಕಾರ್ಮೋಡ ಆವರಿಸಿದೆ. ಈ ಬಗ್ಗೆ ಇಬ್ಬರು ತಜ್ಞರು ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. 

ಮೂರನೇ ಅಲೆಗೆ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಾರಣ.!!

ಅಮೆರಿಕಾ, ಚೀನಾ, ಬ್ರಿಟನ್, ರಷ್ಯಾ, ಜಪಾನ್ ಸೇರಿದಂತೆ ಹಲವು ದೇಶಗಳು ಈಗ ಕೊರೋನಾದ ಹೊಸ ತಳಿಯ ಕಬಂಧಬಾಹುವಿನಲ್ಲಿದೆ. ಇದರ ಜೊತೆಗೆ ಈಗ ಭಾರತವೂ ಸೇರಿಕೊಂಡಿದೆ. ಭಾರತದಲ್ಲೂ ಮೂರನೇ ಅಲೆಯ ಕಾವು ಹೆಚ್ಚಾಗಿದ್ದು, ಹೊಸ ರೂಪಾಂತರಿ ಡೆಲ್ಟಾ ಪ್ಲಸ್ ಹಂತಕ ವೈಸರ್ ಆಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮೈಸೂರಿನಲ್ಲಿ 4 ಪ್ರಕರಣಗಳು ಪತ್ತೆಯಾಗಿತ್ತು. ಜೊತೆಗೆ ಬೆಂಗಳೂರಲ್ಲೂ ಒಂದು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿತ್ತು. ಬೆಂಗಳೂರಿನಲ್ಲಿ ದೃಢವಾಗಿದ್ದ ಡೆಲ್ಟಾ ಪ್ಲಸ್ ಸೋಂಕಿತ ಗುಣಮುಖನಾಗಿದ್ದಾನೆ‌. ಆದರೆ ಈ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಬಹಳ ಅಪಾಯಕಾರಿ ಎನ್ನುತ್ತಿದ್ದಾರೆ ತಜ್ಞರು.

ಇದನ್ನು ಓದಿ: ಭಾರತೀಯ ಅಡುಗೆಗಳಿಗೆ ಯಾವ ಎಣ್ಣೆ ಉತ್ತಮ.. ಒಳ್ಳೆಯ ಎಣ್ಣೆ ಬೆಲೆಯೂ ಕಡಿಮೆ..!

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಮಾತನಾಡಿದ ಖ್ಯಾತ ರಕ್ತ‌ನಾಳ ತಜ್ಞ ಡಾ ಮುರಳೀಧರ್, ಕೊರೋನಾ ವೈರಸ್ ನ ವೇರಿಯೆಂಟ್ ಮ್ಯೂಟೆಂಟ್ ಈ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್. ಈ ಡೆಲ್ಟಾ ಪ್ಲಸ್ ವೆರಿಯೆಂಟ್ ರೆಸ್ಪರೆಟರಿ ವೇರಿಯೆಂಟ್ ಅಲ್ಲ. ಇದು ಬಹಳ ಅಪಾಯಕಾರಿ ರೂಪಾಂತರಿ‌. ಬಹಳ ತೊಂದರೆ ಕೊಡಲಿದೆ.‌ ಹೊಟ್ಟೆ ನೋವು, ವಾಂತಿ, ಭೇದಿ, ರಕ್ತ ಹೆಪ್ಪು ಗಟ್ಟುವುದೇ ಇದರ ಪ್ರಮುಖ ಗುಣ ಲಕ್ಷಣಗಳು. ಮೂರ‌ನೇ ಅಲೆಗೆ ಇದೇ ವೇರಿಯೆಂಟ್‌ ಕಾರಣವಾಗುವ ಸಾಧ್ಯತೆಗಳು ದಟ್ಟವಾಗಿದೆ.‌ ಹೀಗಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆದು ಅಂತ ಹೇಳಿದ್ದಾರೆ.

4 ರಿಂದ 6 ವಾರಗಳಲ್ಲಿ ಡೆಲ್ಟಾ ಪ್ಲಸ್ ತೀವ್ರವಾಗಿ ಹರಡುವ ಆತಂಕ.!!

ಇನ್ನು ಈ ಡೆಲ್ಟಾ ಪ್ಲಸ್ ವೈರಸ್ ಬಹಳ ವೇಗವಾಗಿ ಹರಡುವ ಕಿಮ್ಮತ್ತು ಹೊಂದಿದೆಯಂತೆ. ಈ ರೂಪಾಂತರಿ ತಳಿ ವೈರಸ್ ದೇಹದ ಇಮ್ಯೂನ್ ಬ್ಯಾರಿಸ್ ಅನ್ನು ಸಲೀಸಾಗಿ ಹದಗೆಡಿಸುವ ತಾಕತ್ತು ಹೊಂದಿದೆ ಅಂತ ಜೀವವಿಜ್ಞಾನಿ ದಿವ್ಯಾ ಚಂದ್ರಾಧರ್ ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಅಲೆಯಲ್ಲಿ ಈ ಡೆಲ್ಟಾ ವೇರಿಯೆಂಟ್ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಮೇ ತಿಂಗಳಿನಲ್ಲಿ ರೂಪಾಂತರಿ ತನ್ನ ಉಗ್ರ ರೂಪ ತಾಳಿತು. ಈ ಬಾರಿಯೂ ನಿರ್ಲಕ್ಷ್ಯ ಮಾಡಿದರೆ ಅದೇ ರೀತಿಯೇ ಆಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ. ಎರಡನೇ ಅಲೆಯೇನೋ ಮುಕ್ತಾಯ ಹಂತದಲ್ಲಿದೆ. ಆದರೆ ಡೆಲ್ಟಾ ಪ್ಲಸ್ ಕೇಕೆ ನೋಡಿದರೆ ಮೂರ‌ನೇ ಅಲೆಯೂ ಸ್ವಲ್ಪದರಲ್ಲೇ ಶುರುವಾಗುವ ಭೀತಿ ಎದುರಾಗಿದೆ. ಇದರ ಜತೆಯಲ್ಲಿ ತಜ್ಞ ವೈದ್ಯರ ಆತಂಕಕಾರಿ ಹೇಳಿಕೆಯೂ ಮೂರನೇ ಅಲೆಯನ್ನು ಖಚಿತ ಪಡಿಸುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: