HOME » NEWS » Coronavirus-latest-news » KARNATAKA COVID DEATHS 47930 CORONA CASES AND 490 DEATHS IN LAST 24 HOURS MAK

Karnataka Covid Death: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 47,930 ಕೊರೊನಾ ಕೇಸ್, 490 ಜನ ಸಾವು!

ಕಳೆದ 24 ಗಂಟೆಗಳ ಅವಧಿ ಯಲ್ಲಿ ರಾಜ್ಯದಲ್ಲಿ 47,930 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 20, 897 ಪ್ರಕರಣಗಳು ಪತ್ತೆ ಯಾಗಿದೆ. ರಾಜ್ಯದಲ್ಲಿ 6.5 ಲಕ್ಷಕ್ಕೂ ಅಧಿಕ ಸಕ್ರೀಯ ಪ್ರಕರಣಗಳು ದಾಖಲಾಗಿವೆ.

news18-kannada
Updated:May 9, 2021, 7:48 PM IST
Karnataka Covid Death: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 47,930 ಕೊರೊನಾ ಕೇಸ್, 490 ಜನ ಸಾವು!
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಮೇ 09); ಎರಡನೇ ಅಲೆ ಕೊರೋನಾ ಸೋಂಕು ರಾಜ್ಯದಲ್ಲಿ ನಿಯಂತ್ರಣ ಮೀರಿದೆ. ಜನತಾ ಕರ್ಫ್ಯೂನಡುವೆಯೋ ಸೋಂಕು ನಿಯಂತ್ರಣ ವಾಗುತ್ತಿಲ್ಲ. ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸರಿ ಸುಮಾರು 50 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ಈ ನಡುವೆ ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 490 ಜನ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕು ನಿಯಂತ್ರಣ ಮೀರಿರುವುದು ಸ್ಪಷ್ಟವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ಕಳೆದ 24 ಗಂಟೆಗಳ ಅವಧಿ ಯಲ್ಲಿ ರಾಜ್ಯದಲ್ಲಿ 47,930 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 20, 897 ಪ್ರಕರಣಗಳು ಪತ್ತೆ ಯಾಗಿದೆ. ರಾಜ್ಯದಲ್ಲಿ 6.5 ಲಕ್ಷಕ್ಕೂ ಅಧಿಕ ಸಕ್ರೀಯ ಪ್ರಕರಣಗಳಿವೆ. ಇನ್ನೂ ಬೆಂಗಳೂರು ಒಂದರಲ್ಲೇ 20,897 ಹೊಸ ಕೇಸ್ ಹಾಗೂ 281 ಸಾವು ಸಂಭವಿಸಿದ್ದು, 4 ಲಕ್ಷ ಸಕ್ರೀಯ ಸೋಂಕಿತರು ಬೆಂಗಳೂರಲ್ಲೆ ಇದ್ದಾರೆ.

ರಾಜ್ಯದಲ್ಲಿ ಈ ಮಟ್ಟಿಗೆ ಸೋಂಕು ಹರಡುತ್ತಿದ್ದು, ಹೀಗೆ ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಾಡಯಿಸಲಿದೆ. ಈ ಹಿನ್ನಲೆ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್​ ಒಂದೇ ಮಾರ್ಗ ಎಂಬ ಅಭಿಪ್ರಾಯವನ್ನು ಅನೇಕ ತಜ್ಞರು ಸರ್ಕಾರಕ್ಕೆ ನೀಡಿದ್ದರು. ಅದರಂತೆ ರಾಜ್ಯದಲ್ಲಿ ಮೇ. 10 ರಿಂದ ಮೇ 24ರವರೆಗೆ ಲಾಕ್​ಡೌನ್​ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಬಾರಿ ಕೆಲವು ವಿನಾಯಿತಿಗಳ ಹೊರಾತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಇನ್ನಾದರೂ ಸೋಂಕು ನಿಯಂತ್ರಣಕ್ಕೆ ಬರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ತಜ್ಞರ ಪ್ರಕಾರ, ಮುಂದಿನ ಕನಿಷ್ಠ 10 ರಿಂದ 14 ದಿನ ಬಹಳ ಕಷ್ಟಕರವಾದ ದಿನವಾಗಿದ್ದುಮ, ಸೋಂಕು ಹೆಚ್ಚು ಉಲ್ಬಣಗೊಳ್ಳಲಿದೆ. ಈ ಹಿನ್ನಲೆ ರಾಜ್ಯದಲ್ಲಿ ಲಾಕ್​ಡೌನ್​ ಮಹತ್ವದ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಲಾಗಿತ್ತು. ಈ ಸೋಂಕು ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ಸೋಂಕಿನ ಸರಪಳಿ ಕತ್ತರಿಸಲು ಜನರು ಮನೆಯಲ್ಲಿರುವುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಮತ್ತಷ್ಟು ಆಕ್ಸಿಜನ್​ ಮತ್ತು ಬೆಡ್​ ಸಮಸ್ಯೆ ಹೆಚ್ಚಲಿದೆ. ಈ ಹಿನ್ನಲೆ ಮತ್ತಷ್ಟು ಆಕ್ಸಿಜನ್​ ಪೂರೈಕೆಗೆ ಮತ್ತು ಕೊರೋನಾ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವ ಅವಶ್ಯಕತೆ ಇದೆ.

ಭಾರತದಲ್ಲಿ ಕೊರೋನಾ ಕೇಕೆ:

ಈ ನಡುವೆ ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌

ಇದನ್ನೂ ಓದಿ: ಕೊಡಗು: ಲಾಕ್​ಡೌನ್​ನಿಂದ ಊಟವಿಲ್ಲದೆ ಉಪವಾಸವನ್ನೇ ರೂಢಿಸಿಕೊಂಡ ಕುಟುಂಬ!ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿಯನ್ನೂ ದಾಟಿದೆ. ಅಲ್ಲದೆ ಈಗ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುವ ಟ್ರೆಂಡ್ ಮುಂದುವರೆದಿದೆ.
Youtube Video

ಶನಿವಾರ 4,03,738 ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,86,444 ಜನ ಮಾತ್ರ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,22,96,414ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಶನಿವಾರ 4,092 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,42,362ಕ್ಕೆ ಏರಿಕೆ ಆಗಿದೆ.
Published by: MAshok Kumar
First published: May 9, 2021, 7:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories