ಬೆಂಗಳೂರು (ಜೂ.28): ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದೆ. ರಾಜ್ಯದಲ್ಲಿ ಇಂದು 2, 576 ಪ್ರಕರಣಗಳು ಕಂಡು ಬಂದಿದ್ದು, ಬೆಂಗಳೂರಿನಲ್ಲಿ 563 ಪ್ರಕರಣಗಳು ಕಂಡು ಬಂದಿದೆ. ಹಲವು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಮೂರು ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ಕಂಡು ಬಂದಿದೆ. ಜೊತೆಗೆ 100ಕ್ಕಿಂತ ಕಡಿಮೆ ಸಾವು ಕಂಡು ಬಂದಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ದಿನಂದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಇಳಿಕೆ ಕಾಣುವುದರ ಜೊತೆಗೆ ಹಲವು ಮೊದಲಿಗೆ ಕಾರಣವಾಗಿದೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 2ರ ಒಳಗೆ ಕಂಡು ಬಂದಿದ್ದು, ಪ್ರಸ್ತುತ ಕರ್ನಾಟಕದಲ್ಲಿ 1 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ಇವೆ ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕೋವಿಡ್ನಿಂದ ರಾಜ್ಯದಲ್ಲಿಂದು 93 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೂ 34,836 ಜನ ಸಾವನ್ನಪ್ಪಿದ್ದಾರೆ. ಇಂದು 5,933 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.3.61 ರಷ್ಟಿದೆ. ಬೆಂಗಳೂರಲ್ಲಿಂದು 18 ಸೋಂಕಿತರು ಸಾವನ್ನಪ್ಪಿದ್ದಾರೆ.
A day of many firsts on Covid front:
🌀 Cases in State fall below 3k to 2576 for the first time
🌀 Cases in B'lore fall to 563
🌀 Positivity rate falls below 2% for the first time
🌀 Deaths fall to double digits (93) for the first time
🌀 Active cases fall below 1 lakh to97,592
— Dr Sudhakar K (@mla_sudhakar) June 28, 2021
ಇದನ್ನು ಓದಿ: ಕಟ್ಟಿಕೊಂಡವನು ಕೈ ಕೊಟ್ಟ, ಹೆತ್ತವರಿಗೂ ಬೇಡವಾದಳು: ನೋವು ನುಂಗಿಕೊಂಡು ಖಡಕ್ ಪೊಲೀಸ್ ಆದ ಸಾಧಕಿ
ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ನಿಯಮಗಳಿಂದಾಗಿ ಸೋಂಕು ಹತೋಟಿಗೆ ತರುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವ ಹಿನ್ನಲೆ ಸರ್ಕಾರ ಇಂದಿನಿಂದ ಮತ್ತಷ್ಟು ಲಾಕ್ಡೌನ್ ನಿಯಮ ಸಡಿಲಿಕೆ ಮಾಡಿದೆ. ಮದುವೆಗಳನ್ನು ಫಂಕ್ಷನ್ ಹಾಲ್ಗಳಲ್ಲಿ ನಡೆಸಲಿ ಅವಕಾಶ ನೀಡಲಾಗಿದೆ. ಆದರೆ, 40 ಜನಕ್ಕಿಂತ ಹೆಚ್ಚಿಲ್ಲದಂತೆ ಭಾಗವಹಿಸದಂತೆ ಆದೇಶ ನೀಡಿದೆ. ಅಧಿಕಾರಿಗಳು ಈ ಹಿಂದೆ 10 ಪಾಸ್ಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದರು. ಈಗ ಈ ಸಂಖ್ಯೆಯನ್ನು 40ಕ್ಕೆ ಏರಿಸಲಾಗಿದೆ.
ಲಸಿಕೆ ಅಭಿಯಾನಕ್ಕೂ ಹೆಚ್ಚು ಒತ್ತು ನೀಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲೂ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಭಾನುವಾರ 1 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ