ಗುಜರಾತ್ ನಿಂದ ಬಂದ 15 ಜನರಲ್ಲಿ ಪತ್ತೆಯಾಯ್ತು ಕೊರೋನಾ ಸೋಂಕು; ಬಾಗಲಕೋಟೆಯಲ್ಲಿ ಹೈ ಅಲರ್ಟ್‌

ಮುಧೋಳದ 17ಮಂದಿಯ ಪೈಕಿ 14 ಮತ್ತು ಬನಹಟ್ಟಿಯ 12 ಮಂದಿಯ ಪೈಕಿ ಓರ್ವನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಆದರೆ, ಈ ಸೊಂಕಿನ ಮೂಲ ಯಾವುದು? ಎಂಬುದನ್ನು ಮಾತ್ರ ಈವರೆಗೆ ಪತ್ತೆಹಚ್ಚಲಾಗಿಲ್ಲ. ಬಾಗಲಕೋಟೆ ಆರೋಗ್ಯ ಇಲಾಖೆಗೆ ಇದೊಂದು ಸವಾಲಿನ ಪ್ರಕರಣವಾಗಿ ಪರಿಣಮಿಸಿದೆ.

MAshok Kumar | news18-kannada
Updated:May 13, 2020, 11:45 AM IST
ಗುಜರಾತ್ ನಿಂದ ಬಂದ 15 ಜನರಲ್ಲಿ ಪತ್ತೆಯಾಯ್ತು ಕೊರೋನಾ ಸೋಂಕು; ಬಾಗಲಕೋಟೆಯಲ್ಲಿ ಹೈ ಅಲರ್ಟ್‌
ಪ್ರಾತಿನಿಧಿಕ ಚಿತ್ರ.
  • Share this:
ಬಾಗಲಕೋಟೆ (ಮೇ 13); ಗುಜರಾತ್‌ನಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸಿರುವ 15 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಇದೀಗ ಕರ್ನಾಟಕದ ಪಾಲಿಗೆ ಗುಜರಾತ್ ಕಂಟಕವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಅಹ್ಮದಾಬಾದ್ ತಬ್ಲಿಘಿ ಧಾರ್ಮಿಕ ಸಭೆಗೆ ಹೋಗಿ 29ಮಂದಿ ಇತ್ತೀಚೆಗೆ ಜಿಲ್ಲೆಗೆ ವಾಪಸ್‌ ಆಗಿದ್ದರು. ಆದರೆ, ಈ 29 ಮಂದಿಯ ಪೈಕಿ 15 ಜನರಲ್ಲಿ ಕೊರೋನಾ ಸೋಂಕು ಇರುವುದು ಇದೀಗ ದೃಢಪಟ್ಟಿದೆ.

ಮುಧೋಳದ 17ಮಂದಿಯ ಪೈಕಿ 14 ಮತ್ತು ಬನಹಟ್ಟಿಯ 12 ಮಂದಿಯ ಪೈಕಿ ಓರ್ವನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಆದರೆ, ಈ ಸೊಂಕಿನ ಮೂಲ ಯಾವುದು? ಎಂಬುದನ್ನು ಮಾತ್ರ ಈವರೆಗೆ ಪತ್ತೆಹಚ್ಚಲಾಗಿಲ್ಲ. ಬಾಗಲಕೋಟೆ ಆರೋಗ್ಯ ಇಲಾಖೆಗೆ ಇದೊಂದು ಸವಾಲಿನ ಪ್ರಕರಣವಾಗಿ ಪರಿಣಮಿಸಿದೆ.

ಅಸಲಿಗೆ ಈ 29 ಜನರೂ ಸಹ ಗುಜರಾತ್‌ನಲ್ಲಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು. ಕೊರೋನಾ ನೆಗೆಟಿವ್ ಎಂದು ವರದಿ ಬಂದಿತ್ತು. ಮೇ.04 ಕ್ಕೆ ಇದೇ ವರದಿಯ ಜೊತೆಗೆ ಇವರು ಒಂದೇ ವಾಹನದಲ್ಲಿ ಬಾಗಲಕೋಟೆ ಪ್ರವೇಶಿಸಿದ್ದರು. ನಿಪ್ಪಾಣಿ ಗಡಿಯಲ್ಲಿ ಇವರನ್ನು ತಡೆಯಲಾಗಿತ್ತಾದರೂ, ಗುಜರಾತ್‌ನಲ್ಲಿ ತಾವು ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ದಾಖಲೆಗಳನ್ನು ಅವರು ತೋರಿಸಿದ್ದರು.

ಪರಿಣಾಮ ಈ ಎಲ್ಲರನ್ನೂ ಗಡಿಯಲ್ಲೇ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಕ್ವಾರಂಟೈನ್‌ಗೆ ಒಳಗಾದ ಕೇವಲ ಒಂದು ವಾರದಲ್ಲಿ ಈ 29 ಜನರ ಪೈಕಿ 15 ಜನರಲ್ಲಿ ಕೊರೋನಾ ಸೋಂಕು ಕಂಡುಬಂದಿದೆ. ಇದು ಬಾಗಲಕೋಟೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿದ್ದು, ಗುಜರಾತ್ ಪ್ರಮಾಣ ಪತ್ರದ ಖಚಿತತೆ ಬಗ್ಗೆಯೂ ವಿಚಾರಣೆ ನಡೆಸುವುದಾಗಿ ಬಾಗಲಕೋಟೆ ಡಿಎಚ್ ಓ ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ.

(ವರದಿ - ರಾಚಪ್ಪ ಬನ್ನಿದಿನ್ನಿ)

ಇದನ್ನೂ ಓದಿ : ರಾಜ್ಯದಿಂದ ಮಧ್ಯಪ್ರದೇಶದತ್ತ ಹೊರಟ ವಿಶೇಷ ಶ್ರಮಿಕ್​​ ರೈಲು: ಸಾವಿರಾರು ಕಾರ್ಮಿಕರು ತವರಿಗೆ
First published: May 13, 2020, 8:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading