ಕರ್ನಾಟಕದಲ್ಲಿ ಒಂದೇ ದಿನ ಕೊರೋನಾಗೆ 3 ಬಲಿ, 127 ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆ
Karnataka Coronavirus Updates: ವಿಜಯಪುರದ 65 ವರ್ಷದ ಪುರುಷ. ಮೊದಲೇ ಹೃದಯ ಸಂಬಂಧಿತ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರು. 18 ಮೇರಂದು ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟರು. ಸೋಂಕು ಇರುವುದು ನಂತರ ದೃಢವಾಗಿದೆ.
ಬೆಂಗಳೂರು(ಮೇ.19): ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಕಳೆದ 12 ಗಂಟೆಗಳಲ್ಲಿ 127 ಹೊಸ ಕೋವಿಡ್-19 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಿಂದ ತಿಳಿದು ಬಂದಿದೆ. ಇನ್ನು, ಮಾರಕ ಕೊರೋನಾಗೆ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೂ ಮೂರು ಬಂದಿ ಬಲಿಯಾಗಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 54 ವರ್ಷದ ಪುರುಷ ಹೃದ್ರೋಗದಿಂದ ಬಳಲುತ್ತಿದ್ದರು. ಇವರು 18ರಂದು ಅಸುನೀಗಿದರು. ನಂತರ ಸೋಂಕು ದೃಢಪಟ್ಟಿದೆ.
ಜತೆಗೆ ಬಳ್ಳಾರಿ ಮೂಲದ 61 ವರ್ಷದ ಪುರುಷ. ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. SARI ಸೋಂಕು ಕೂಡಾ ಇದ್ದು, ಬೆಂಗಳೂರಿಗೆ ಪ್ರಯಾಣಿಸಿದ ಹಿನ್ನೆಲೆ ಇತ್ತು. ಬಳ್ಳಾರಿಯಲ್ಲಿ 19 ಮೇ ರಂದು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ಇರುವುದು ದೃಢವಾಗಿದೆ. ಮೊದಲೇ ಇಸ್ಕೆಮಿಕ್ ಹಾರ್ಟ್ ಡಿಸೀಸ್(IHD) ಇಂದ ಬಳಲುತ್ತಿದ್ದರು.